ಕೋಳಿ ಮಾರಬೇಡಿ... ನನ್ನ ಫ್ರೆಂಡ್ಸ್‌ ಅವು... ಬಿಕ್ಕಿ ಬಿಕ್ಕಿ ಅತ್ತ ಬಾಲಕ- ವಿಡಿಯೋ ವೈರಲ್‌

chicken
Published on

ಗಾಂಗ್ಟಕ್ (ಸಿಕ್ಕಿಂ): ತಾನು ಮುದ್ದಿನಿಂದ ಸಾಕಿರುವ ಕೋಳಿ ಮರಿಗಳನ್ನು ಪಾಲಕರು ಮಾರಾಟ ಮಾಡುತ್ತಿರುವುದನ್ನು ನೋಡಲಾಗದೇ ಪುಟ್ಟ ಬಾಲಕ ಕಣ್ಣೀರು ಹಾಕುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ನನ್ನ ಕೋಳಿ ಮರಿಗಳನ್ನು ಮಾರಬೇಡಿ, ಅವು ನನಗೆ ಬೇಕು ಎಂದು ಈ ಬಾಲಕ ಅಳುತ್ತಿದ್ದಾನೆ. ಈತನ ಕುಟುಂಬದ ಉದ್ಯೋಗ ಕೋಳಿಗಳನ್ನು ಸಾಕಿ ಅದನ್ನು ಮಾರುವುದು. ಆದರೆ ಕೆಲವು ಕೋಳಿಗಳ ಜತೆ ಬಾಲಕನ ಒಡನಾಟ ಹೆಚ್ಚಾಗಿಬಿಟ್ಟಿದೆ. ದಿನವೂ ಅದರ ಜತೆಗೇ ಕಾಲ ಕಳೆಯುತ್ತಿದ್ದ ಈ ಬಾಲಕನಿಗೆ ಅದನ್ನು ಸಾಕಿದ್ದು ಬೇರೆಯವರು ಕಡಿದು ತಿನ್ನಲು ಎನ್ನುವ ಬಗ್ಗೆ ತಿಳಿದಿಲ್ಲ.

ಅದನ್ನು ಪಾಲಕರು ಮಾರಾಟ ಮಾಡಿದ್ದಾರೆ. ವ್ಯಾನ್‌ನಲ್ಲಿ ಅವುಗಳನ್ನು ತುಂಬಿಸಿಕೊಳ್ಳಲಾಗಿದೆ. ಆದರೆ ತನ್ನ ಆಪ್ತ ಸ್ನೇಹಿತರು ತನ್ನನ್ನು ಬಿಟ್ಟು ಹೋಗುವುದನ್ನು ಈ ಕಂದನಿಗೆ ನೋಡಲಾಗುತ್ತಿಲ್ಲ. ರಸ್ತೆ ಮೇಲೆಯೇ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ. ಇದೀಗ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಕಂದನ ಕಣ್ಣೀರಿಗೆ ನೆಟ್ಟಿಗರು ಕರಗಿಹೋಗಿದ್ದಾರೆ. ಈ ಕಂದನಿಗಿರುವ ಬುದ್ಧಿ ದೊಡ್ಡವರಿಗೆ ಇಲ್ಲ, ಇನ್ನಾದರೂ ಮಾಂಸ ತಿನ್ನುವುದನ್ನು ಬಿಡಿ ಎಂದು ಸಸ್ಯಾಹಾರಿಗಳು ಕಮೆಂಟ್‌ ಮಾಡಿದ್ದರೆ. ಇನ್ನು ಕೆಲವರು ಪಾಪ ಈ ಕೋಳಿಗಳನ್ನು ಕಡಿಯುವುದನ್ನು ನೋಡಿದರೆ ಈ ಬಾಲಕ ಇನ್ನೇನು ಮಾಡುತ್ತಿದ್ದನೋ ಎಂದು ಹೇಳಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ: (ಕೃಪೆ ಜಮ್ಮು ಲಿಂಕ್ಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net