More

    ಸ್ನಾತಕೋತ್ತರ ಪದವೀಧರರಿಗೆ ಗುಡ್‌ನ್ಯೂಸ್‌: ಕೇಂದ್ರ ಸರ್ಕಾರದಿಂದ 177 ಹುದ್ದೆಗಳಿಗೆ ಆಹ್ವಾನ

    ಕೇಂದ್ರ ಲೋಕಸೇವಾ ಆಯೋಗದಿಂದ (ಯುಪಿಎಸ್​ಸಿ) ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಹಲವು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸ್ನಾತಕೋತ್ತರ ಪದವೀಧರರಿಗೆ ಅವಕಾಶಗಳಿದ್ದು, ಅರ್ಹತೆ ಪರಿಶೀಲಿಸಿ ಅರ್ಜಿ ಸಲ್ಲಿಸಬಹುದಾಗಿದೆ.

    ಒಟ್ಟು ಹುದ್ದೆಗಳು: 177

    ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕೃಷಿ ಇಲಾಖೆ, ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆ, ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯ, ಗಣಿ ಸಚಿವಾಲಯದ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಷ್ ಘಟಕಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹುದ್ದೆಗೆ ಅನುಗುಣವಾಗಿ ವೃತ್ತಿ ಅನುಭವ ಕೇಳಲಾಗಿದೆ. ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 25 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆನ್​ಲೈನ್ ಅರ್ಜಿ ಸಲ್ಲಿಸಿದ ಬಳಿಕ ಜ.14ರ ವರೆಗೆ ಅರ್ಜಿ ಡೌನ್​ಲೋಡ್ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

    ಹುದ್ದೆ ವಿವರ

    – ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆಯಲ್ಲಿನ ನೇಮಕಾತಿಗಳು:

    * ಅಸಿಸ್ಟೆಂಟ್ ಇಂಜಿನಿಯರ್ ಕ್ವಾಲಿಟಿ ಅಶುರೆನ್ಸ್ (ಎಲೆಕ್ಟ್ರಾನಿಕ್ಸ್) – 74

    ಫಿಜಿಕ್ಸ್, ಎಲೆಕ್ಟ್ರಾನಿಕ್ಸ್ ವಿಷಯ ಒಳಗೊಂಡಂತೆ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಅಥವಾ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ಆಂಡ್ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ಆಂಡ್ ಟೆಲಿಕಮ್ಯುನಿಕೇಷನ್​ನಲ್ಲಿ ಇಂಜಿನಿಯರಿಂಗ್/ ಟೆಕ್ನಾಲಜಿಯಲ್ಲಿ ಪದವಿ ಪಡೆದಿರುವ 30 ವರ್ಷ ದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    * ಅಸಿಸ್ಟೆಂಟ್ ಇಂಜಿನಿಯರ್ ಕ್ವಾಲಿಟಿ ಅಶುರೆನ್ಸ್ (ಜೆನೆಟೆಕ್ಸ್) – 54

    * ಅಸಿಸ್ಟೆಂಟ್ ಇಂಜಿನಿಯರ್ ಕ್ವಾಲಿಟಿ ಅಶುರೆನ್ಸ್ (ಆರ್ಮಮೆಂಟ್-ಅಮ್ಯುನಿಷನ್) – 29

    ಫಿಜಿಕ್ಸ್, ಕೆಮಿಸ್ಟ್ರಿ (ಆರ್ಗ್ಯಾನಿಕ್, ಇನ್ ಆರ್ಗ್ಯಾನಿಕ್) ವಿಷಯ ಒಳಗೊಂಡಂತೆ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    – ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕೃಷಿ ಇಲಾಖೆಯಲ್ಲಿನ ನೇಮಕಾತಿ:

    * ಅಸಿಸ್ಟೆಂಟ್ ಕಮಿಷನರ್ (ಕ್ರಾಪ್ಸ್) – 2

    ಅಗ್ರಿಕಲ್ಚರಲ್ ಎಕನಾಮಿಕ್ಸ್/ ಅಗ್ರಿಕಲ್ಚರಲ್ ಎಕ್ಸ್​ಟೆನ್ಷನ್/ ಆಗ್ರೋನಮಿ/ ಎಂಟಿಮಾಲಜಿ/ ನೇಮಟಾಲಜಿ/ ಜೆನೆಟಿಕ್ಸ್ ಆಂಡ್ ಪ್ಲಾಂಟ್ ಬ್ರೀಡಿಂಗ್ ಹಾಗೂ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    – ಕೇಂದ್ರ ಕಾರ್ವಿುಕ ಸೇವೆಯಲ್ಲಿನ ನೇಮಕಾತಿ

    * ಅಸಿಸ್ಟೆಂಟ್ ಲೇಬರ್ ಕಮಿಷನರ್/ ಅಸಿಸ್ಟೆಂಟ್ ವೆಲ್​ಫೆರ್ ಕಮಿಷನರ್/ ಅಸಿಸ್ಟೆಂಟ್ ಲೇಬರ್ ವೆಲ್​ಫೆರ್ ಕಮಿಷನರ್/ ಅಸಿಸ್ಟೆಂಟ್ ಡೈರೆಕ್ಟರ್ – 7

    ಪದವಿ/ ಸೋಷಿಯಲ್ ವರ್ಕ್​ನಲ್ಲಿ ಡಿಪ್ಲೊಮಾ ಮಾಡಿರುವ ಗರಿಷ್ಠ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರು.

    – ಗಣಿಗಾರಿಕೆ ಸಚಿವಾಲಯದ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾದಲ್ಲಿನ ನೇಮಕಾತಿ:

    *ಅಡ್ಮಿನಿಸ್ಟ್ರೇಟೀವ್ ಆಫೀಸರ್- 9

    ಯಾವುದೇ ಪದವಿ ಪಡೆದಿರುವ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಷ್ ನಿರ್ದೇಶನಾಲಯ

    * ಅಸಿಸ್ಟೆಂಟ್ ಪ್ರೊಫೆಸರ್ (ಆಯುರ್ವೆದ, ರಚನಾಶಾಸ್ತ್ರ,, ಶರೀರ- 1, ಮೌಲಿಕ ಸಿದ್ಧಾಂತ ಹಾಗೂ ಸಂಹಿತಾ- 1)- 2

    ಆಯುರ್ವೆದದಲ್ಲಿ ಪದವಿ ಪಡೆದಿರುವ 45 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರಾಗಿದ್ದಾರೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 13.1.2022

    ಅಧಿಸೂಚನೆಗೆ: https://bit.ly/3FMYzOh

    ಮಾಹಿತಿಗೆ: http://www.upsc.gov.in

    ಕೇಂದ್ರೀಯ ವಿವಿಯಲ್ಲಿದೆ 71 ಬೋಧಕ ಹುದ್ದೆಗಳು: 1.45 ಲಕ್ಷ ರೂ.ವರೆಗೆ ಸಂಬಳ, ಕೆಲವೇ ದಿನ ಬಾಕಿ…

    ಷಾರ್ಟ್‌ಹ್ಯಾಂಡ್‌, ಟೈಪಿಂಗ್‌ ಬಲ್ಲಿರಾ? ಅಬಕಾರಿ ತೆರಿಗೆ ಇಲಾಖೆಯಿಂದ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts