More

    ಆರ್‌ವಿ ವಿಶ್ವವಿದ್ಯಾಲಯದಿಂದ 10 ಕೋಟಿ ರೂ. ವಿದ್ಯಾರ್ಥಿ ವೇತನ: 500ಕ್ಕೂ ಹೆಚ್ಚು UG, PG ವಿದ್ಯಾರ್ಥಿಗಳಿಗೆ ಪ್ರಯೋಜನ

    ಬೆಂಗಳೂರು: ನಗರದ ಆರ್​ವಿ ಯೂನಿವರ್ಸಿಟಿ (ಆರ್​ವಿಯು) ಯು ಆಗಸ್ಟ್​ 2023 ರಿಂದ ಆರಂಭವಾಗುವ ಮುಂದಿನ ಶೈಕ್ಷಣಿಕ ವರ್ಷಕ್ಕೆ ಪಿಜಿ, ಯುಜಿ ಕೋರ್ಸ್‌ಗಳ ಮೆರಿಟ್​ ವಿದ್ಯಾರ್ಥಿ ವೇತನಕ್ಕಾಗಿ 10 ಕೋಟಿ ರೂಪಾಯಿಯನ್ನು ಮೀಸಲು ಇಟ್ಟಿದೆ.

    ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಅಥವಾ ಮುಂದುವರಿಸಲು ನೆರವಾಗುವಂತೆ ಆರ್​​ವಿ ವಿಶ್ವವಿದ್ಯಾಲಯವು ಈ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಸ್ನಾತಕೋತ್ತರ ಹಾಗೂ ಪದವಿ ಶಿಕ್ಷಣ ಪಡೆಯುವ 500ಕ್ಕೂ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಅನುಕೂಲವಾಗಲಿದೆ.

    200 ಬಿ.ಟೆಕ್ ವಿದ್ಯಾರ್ಥಿಗಳು ಮತ್ತು 50 ಬಿ.ಎಸ್ಸಿ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಜೊತೆಗೆ ಐದು ವರ್ಷಗಳ ಸಮಗ್ರ B.A.LL.B. ಮತ್ತು B.B.A.LL.B. ಹಾಗೆಯೇ LL.M. ವ್ಯಾಸಾಂಗ ಮಾಡುವ 75 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದ ಪ್ರಯೋಜನ ಪಡೆಯಲಿದ್ದಾರೆ. ಸ್ಕೂಲ್ ಆಫ್ ಲಿಬರಲ್ ಆರ್ಟ್ಸ್ ಮತ್ತು ಸೈನ್ಸ್ ಹಾಗೂ ಸ್ಕೂಲ್ ಆಫ್ ಡಿಸೈನ್ ಮತ್ತು ಇನ್ನೋವೇಶನ್​ನ ಸುಮಾರು 40 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ. B.B.A, B.Com ವ್ಯಾಸಾಂಗ ಮಾಡುವ 80 ವಿದ್ಯಾರ್ಥಿಗಳಿಗೂ ಸೌಲಭ್ಯ ಇರಲಿದೆ.

    ಅಂದಹಾಗೆ ವಿದ್ಯಾರ್ಥಿವೇತನವು ಮೊದಲ ವರ್ಷದ ಅಧ್ಯಯನಕ್ಕಾಗಿ 100, 50 ಮತ್ತು 25 ಶೇಕಡವಾರು ಹಂಚಿಕೆ ಒಳಗೊಂಡಿರುತ್ತದೆ. ವಿದ್ಯಾರ್ಥಿವೇತನಗಳ ನವೀಕರಣವು ವಿದ್ಯಾರ್ಥಿಯ ಶೈಕ್ಷಣಿಕ ಅರ್ಹತೆ ಮೇಲೆ ಆಧಾರಿತವಾಗಿರಲಿದೆ. 2023-2024ರ ಶೈಕ್ಷಣಿಕ ವರ್ಷಕ್ಕೆ ಪ್ರಸ್ತುತ ದಾಖಲಾತಿ ಆರಂಭವಾಗಿರುವುದರಿಂದ ವಿದ್ಯಾರ್ಥಿಗಳು ಈ ವರ್ಷದ ವಿದ್ಯಾರ್ಥಿವೇತನಕ್ಕೆ ಈಗಿನಿಂದಲೇ ಅರ್ಜಿ ಸಲ್ಲಿಸಬಹುದಾಗಿದೆ.

    ಈ ಬಗ್ಗೆ ಮಾತನಾಡಿರುವ ಆರ್‌ವಿ ವಿಶ್ವವಿದ್ಯಾಲಯದ ಪ್ರೊ ಚಾನ್ಸೆಲರ್ ಮತ್ತು ಆರ್‌ಎಸ್‌ಎಸ್‌ಟಿಯ ಕಾರ್ಯದರ್ಶಿ ಡಾ. ಎ.ವಿ.ಎಸ್. ಮೂರ್ತಿ, ಸಮಾಜದ ಪ್ರತಿಯೊಂದು ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗುವಂತೆ ಮಾಡುವುದು ನಮ್ಮ ಟ್ರಸ್ಟ್‌ನ ಗುರಿಯಾಗಿದೆ. ಆರ್​ವಿಯು ತನ್ನ ಮೂರನೇ ವರ್ಷದ ಕಾರ್ಯಾಚರಣೆಯಲ್ಲಿ ವಿದ್ಯಾರ್ಥಿವೇತನ ನಿಧಿಯನ್ನು 20 ಪಟ್ಟು ಹೆಚ್ಚಿಸಿದೆ. ಶಿಕ್ಷಣವನ್ನು ಸಾಧ್ಯವಾದಷ್ಟು ವಿದ್ಯಾರ್ಥಿಗಳಿಗೆ ಕೈಗೆಟುಕುವಂತೆ ಮಾಡುವುದು ನಮ್ಮ ಬದ್ಧತೆಯಾಗಿದೆ. ಅರ್ಹ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಾರೆ ಮತ್ತು ದೇಶಕ್ಕೆ ತಮ್ಮದೇಯಾದ ಕೊಡುಗೆ ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

    ಮೊದಲು ಬಂದವರು ಮತ್ತು ಮೊದಲು ಅರ್ಜಿ ಸಲ್ಲಿಸಿದವರು ಎಂಬ ಆಧಾರದ ಮೇಲೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಈ ವಿದ್ಯಾರ್ಥಿವೇತನದ ನವೀಕರಣವು ಮೊದಲ ವರ್ಷದಲ್ಲಿ ವಿದ್ಯಾರ್ಥಿಯ ಅತ್ಯುತ್ತಮ ಶೈಕ್ಷಣಿಕ ಕಾರ್ಯಕ್ಷಮತೆಗೆ ಒಳಪಟ್ಟಿರುತ್ತದೆ. ವಿದ್ಯಾರ್ಥಿವೇತನದ ಮೊತ್ತವು ಬೋಧನಾ ಶುಲ್ಕದ ವೆಚ್ಚವನ್ನು ಪೂರ್ಣವಾಗಿ ಅಥವಾ ಭಾಗಶಃ ಒಳಗೊಂಡಿರುತ್ತದೆ. ವಿದ್ಯಾರ್ಥಿಗಳು ತಮ್ಮನ್ನು https://admissions.rvu.edu.in/ ನಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ಯೂನಿವರ್ಸಿಟಿಯ ಪ್ರವೇಶಾತಿ ತಂಡವನ್ನು ಸಂಪರ್ಕಿಸುವ ಮೂಲಕ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಬಹುದು.

    ಪದವಿಪೂರ್ವ, ಸ್ನಾತಕೋತ್ತರ, ಪೂರ್ಣ/ ಅರೆಕಾಲಿಕ ಸಮಯದ ಪಿಎಚ್‌ಡಿ ಪ್ರವೇಶಾತಿ ಈಗಾಗಲೇ ನಡೆಯುತ್ತಿವೆ. ವಿದ್ಯಾರ್ಥಿವೇತನ ಸೌಲಭ್ಯವು RV ವಿಶ್ವವಿದ್ಯಾಲಯದ ಆರು ಶಾಲೆಗಳಲ್ಲಿ ಹಂಚಿಕೆಯಾಗಿದೆ. ವಿಶ್ವವಿದ್ಯಾನಿಲಯವು ಸ್ಕೂಲ್ ಆಫ್ ಬಿಸಿನೆಸ್, ಸ್ಕೂಲ್ ಆಫ್ ಎಕನಾಮಿಕ್ಸ್, ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಸ್ಕೂಲ್ ಆಫ್ ಡಿಸೈನ್ ಮತ್ತು ಇನ್ನೋವೇಶನ್, ಸ್ಕೂಲ್ ಆಫ್ ಲಿಬರಲ್ ಆರ್ಟ್ಸ್ ಅಂಡ್ ಸೈನ್ಸಸ್ ಮತ್ತು ಸ್ಕೂಲ್ ಆಫ್ ಲಾ ನಲ್ಲಿ 45ಕ್ಕೂ ಹೆಚ್ಚು ಪದವಿ ಶಿಕ್ಷಣವನ್ನು ನೀಡುತ್ತಿದೆ.

    ವಿಧಾನಸಭಾ ಚುನಾವಣೆಗೆ ಸ್ಪರ್ಧೆ! ಸ್ವಾಭಿಮಾನಿ ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಿಷ್ಟು…

    https://www.vijayavani.net/pesticide-in-cardamom-aravana-worth-rs-6-5-crore-is-wasted/

    ಇಂದಿನಿಂದ ವಿದ್ಯಾಕಾಶಿಯಲ್ಲಿ ರಾಷ್ಟ್ರೀಯ ಯುವಜನೋತ್ಸವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts