ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡೋದು ನಮ್‌ ಕರ್ತವ್ಯ; ಸಿಡಿ ಲೇಡಿ ನೆರವಿಗೆ ನಿಂತ ಸಚಿವೆ ಜೊಲ್ಲೆ

jolle
Published on

ಬೆಂಗಳೂರು: ಮಾಜಿ ಸಚಿವ ರಮೇಶ್‌ ಜಾರಕೀಹೊಳಿಯವರ ಅಶ್ಲೀಲ ಸಿಡಿ ಕೇಸ್‌ನಲ್ಲಿ ಇರುವ ಯುವತಿಗೆ ರಕ್ಷಣೆ ಕೊಡುವುದಾಗಿ ಇದಾಗಲೇ ಕಾಂಗ್ರೆಸ್‌ನ ಹಲವಾರು ಶಾಸಕಿಯರು ಮುಂದೆ ಬಂದಿರುವ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಕೂಡ ರಕ್ಷಣೆ ನೀಡಲು ಮುಂದಾಗಿದ್ದಾರೆ.

ನಮ್ಮ ಸರ್ಕಾರ ಸಿಡಿ ಪ್ರಕರಣದ ’ಸಂತ್ರಸ್ತೆ’ಗೆ ರಕ್ಷಣೆ ನೀಡುವುದಾಗಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಹೆಣ್ಣುಮಗಳಿಗೆ ಅನ್ಯಾಯ ಆಗಿದೆಯೇ ಎಂಬುದು ತನಿಖೆ ಆದಮೇಲೆ ಗೊತ್ತಾಗುತ್ತದೆ. ಆದರೆ, ಅವರಿಗೆ ರಕ್ಷಣೆ ನೀಡುವುದು ನಮ್ಮ ಜವಾಬ್ದಾರಿ. ಅದನ್ನು ಮಾಡುತ್ತೇವೆ ಎಂದರು.

ಸಿಡಿಯಲ್ಲಿರುವ ಯುವತಿಯಿಂದ ಮತ್ತೊಂದು ವೀಡಿಯೋ ಬಿಡುಗಡೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ಈ ಬಗ್ಗೆ ನನಗೆ ಗೊತ್ತಿಲ್ಲ. ಎರಡನೆಯ ವಿಡಿಯೋದಲ್ಲಿ ಆ ಯುವತಿ ಏನು ಹೇಳಿದ್ದಾರೆ ನೋಡಿಲ್ಲ. ಗೃಹ ಸಚಿವ ಬೊಮ್ಮಾಯಿ ಅವರು ಮತ್ತು ಸ್ವತಃ ಮುಖ್ಯಮಂತ್ರಿಗಳು ಆ ಮಹಿಳೆಗೆ ರಕ್ಷಣೆ ಕೊಡುವುದಾಗಿ ಸದನದಲ್ಲಿ ಹೇಳಿದ್ದಾರೆ.

ಈಗ ನಮ್ಮಿಂದ ರಕ್ಷಣೆ ಕೊಡುವ ಕೆಲಸ ಮಾಡುತ್ತೇವೆ. ಹೆಣ್ಣುಮಗಳಿಗೆ ರಕ್ಷಣೆ ಕೊಡುವುದುನಮ್ಮ ಕರ್ತವ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net