ಡಿಕೆಶಿಗೆ ಮತ್ತೆ ಸಿಬಿಐ ಶಾಕ್​: ಗೇಟ್​ಗೆ ಬೀಗ ಜಡಿದು ಕುಳಿತ ತಾಯಿ- ಶಿವಕುಮಾರ್​ ಏನು ಹೇಳಿದ್ರು ಕೇಳಿ...

dkshi
Published on

ರಾಮನಗರ: ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆಗೆ ನಿನ್ನೆ (ಬುಧವಾರ) ಸಂಜೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ರಾಮನಗರ, ಕನಕಪುರ, ದೊಡ್ಡಆಲಹಳ್ಳಿ, ಸಂತೆ ಕೋಡಿಹಳ್ಳಿ ಮನೆ, ಜಮೀನು ಮತ್ತಿತರರ ಸ್ಥಳಗಳಿಗೆ ದಾಳಿ ಮಾಡಿದ ಅಧಿಕಾರಿಗಳು ಆಸ್ತಿ-ಪಾಸ್ತಿ ಮತ್ತು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಈ ಹಿನ್ನೆಲೆಯಲ್ಲಿ ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿ ಇರುವ ಡಿಕೆಶಿ ಮನೆಯ ಗೇಟ್​ಗೆ ಇಂದು ಬೀಗ ಜಡಿದು ಡಿಕೆಶಿ ತಾಯಿ ಕುಳಿತುಕೊಂಡಿರುವ ದೃಶ್ಯ ಕಂಡುಬಂದಿದೆ. ಪತ್ರಿಕೆ ಓದುತ್ತಾ ಮನೆಯ ಹೊರಾಂಗಣದಲ್ಲಿ ಡಿಕೆಶಿ ತಾಯಿ ಗೌರಮ್ಮ ಕುಳಿತಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್​, 'ಸಿಬಿಐನವರು ನನಗೆ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ' ಎಂದು ಹೇಳಿದರು. 'ಏನ್ಮಾಡ್ತಿರಾ ಯಾರ ಮೇಲೆ ಪ್ರೀತಿ ಇರುತ್ತಾ ಅವರ ಮನೆ ದಾಳಿ ಮಾಡುತ್ತಾರೆ. ನಾನು ಈ ಕೆಲಸದಲ್ಲಿದ್ದೇನೆ. ಅವರು ಅಲ್ಲಿ ದಾಳಿ ಮಾಡಿದ್ದಾರೆ. ಜಮೀನು ನೋಡಿದ್ದಾರೆ, ಮನೆ ನೋಡಿದ್ದಾರೆ. ಇನ್ನು ಏನೇನ್​ ಮಾಡಿದ್ದಾರೋ ಗೊತ್ತಿಲ್ಲ. ನನ್ನ ತಾಯಿಗೆ ವಯಸ್ಸಾಗಿದೆ. ಮರೆವು ಜಾಸ್ತಿ ಆಗಿದೆ. ಸಿಬಿಐ ಅಂದಕೂಡಲೇ ನಮ್ಮ ಜನ ಗಡಗಡ ಅಂತಾರೆ. ನಾವು ಗಡಗಡ ಅಂತೀವಿ. ಹೀಗಾಗಿ ಅಲ್ಲಿ ಏನಾಗಿದೆ ಅಂತಾ ಯಾರಿಗೂ ಗೊತ್ತಾಗಿಲ್ಲ, ಸಿಬಿಐ ಅಂದ್ರೆ ಯಾರಿಗೆ ಹೆದರಿಕೆ ಆಗಲ್ಲ ಹೇಳಿ? ನಮ್​ ಅಮ್ಮನಿಗೂ ಹೆದರಿಕೆ ಆಯಿತು' ಎಂದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net