More

    ಮದ್ವೆಯಾಗಲಿ, ಆಗದೇ ಇರಲಿ… ಗರ್ಭಪಾತಕ್ಕೆ ಸಂಬಂಧಿಸಿದಂತೆ ಸುಪ್ರೀಂನಿಂದ ಹೊರಟಿತು ಮಹತ್ವದ ತೀರ್ಪು

    ನವದೆಹಲಿ: ವಿವಾಹಿತೆಯರು ಹಾಗೂ ಅವಿವಾಹಿತೆಯರು ಎಂಬ ಭೇದಭಾವವಿಲ್ಲದೇ ಎಲ್ಲ ಮಹಿಳೆಯರೂ ಸ್ವ ಇಚ್ಛೆಯಿಂದ ಗರ್ಭಪಾತದ ಆಯ್ಕೆ ಮಾಡಿಕೊಳ್ಳಲು ಆರ್ಹರಾಗಿದ್ದಾರೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

    ‘ದೇಶದ ಎಲ್ಲ ಮಹಿಳೆಯರಿಗೆ ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತ ಮಾಡುವ ಹಕ್ಕಿದೆ’ ಎಂದ ಸುಪ್ರೀಂ ಕೋರ್ಟ್, ವಿವಾಹಿತ ಮತ್ತು ಅವಿವಾಹಿತ ಮಹಿಳೆಯರ ನಡುವಿನ ಗರ್ಭಪಾತದ ಹಕ್ಕನ್ನು ಎತ್ತಿಹಿಡಿದಿದೆ. ‘ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕು ಅವಿವಾಹಿತೆಯರಿಗೆ ಮಾತ್ರವಲ್ಲ, ಬದಲಿಗೆ ಪತಿಯಿಂದ ನಡೆಯುವ ಅತ್ಯಾಚಾರ ಕೂಡ ಸೇರುತ್ತದೆ’ ಎಂದು ಕೋರ್ಟ್​ ಹೇಳಿದೆ.

    ವೈದ್ಯಕೀಯ ಗರ್ಭಪಾತ (ಎಂಟಿಪಿ) ಕಾಯ್ದೆ ಅಡಿ ಗರ್ಭಪಾತ ಮಾಡಿಕೊಳ್ಳಲು ಅವಿವಾಹಿತ ಮಹಿಳೆಯರಿಗೂ ಹಕ್ಕು ಇದೆ. ಭಾರತದಲ್ಲಿನ ಗರ್ಭಪಾತ ಕಾಯ್ದೆಯು ವಿವಾಹಿತ ಮತ್ತು ಅವಿವಾಹಿತ ಮಹಿಳೆಯರ ನಡುವೆ ವ್ಯತ್ಯಾಸ ಮಾಡಿಲ್ಲ. ಗರ್ಭಪಾತದ ಉದ್ದೇಶಗಳಿಗಾಗಿ ವೈದ್ಯಕೀಯ ಗರ್ಭಪಾತ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ವೈವಾಹಿಕ ಅತ್ಯಾಚಾರವನ್ನು ಸಹ ಅಪರಾಧವೆಂದು ಪರಿಗಣಿಸಲಾಗುವುದು ಎಂದು ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.

    ವಿವಾಹಿತ ಮಹಿಳೆಯರಿಗೆ 20-24 ವಾರಗಳ ನಡುವಿನ ಗರ್ಭಾವಸ್ಥೆಯಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಿ, ಏಕಾಂಗಿಯಾಗಿರುವ ಅಥವಾ ಅವಿವಾಹಿತ ಮಹಿಳೆಯರನ್ನು ಗರ್ಭಪಾತದಿಂದ ನಿರ್ಬಂಧಿಸಿರುವುದು ಸಂವಿಧಾನದ 14ನೇ ವಿಧಿಯ (ಸಮಾನತೆಯ ಹಕ್ಕು) ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ತೀರ್ಪಿನಲ್ಲಿ ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ.

    ಈ ತೀರ್ಪಿನ ಅನ್ವಯ ಅವಿವಾಹಿತ ಮಹಿಳೆಯರೂ 24 ವಾರಗಳವರೆಗೆ ಗರ್ಭಪಾತ ಮಾಡುವ ಹಕ್ಕನ್ನು ಪಡೆದಂತಾಗಿದೆ. ಸಾಮಾನ್ಯ ಸಂದರ್ಭಗಳಲ್ಲಿ 20 ವಾರಗಳಿಗಿಂತ ಹೆಚ್ಚು ಮತ್ತು 24 ವಾರಗಳಿಗಿಂತ ಕಡಿಮೆ ಅವಧಿಯ ಗರ್ಭಪಾತದ ಹಕ್ಕು ಇದುವರೆಗೆ ವಿವಾಹಿತ ಮಹಿಳೆಯರಿಗೆ ಮಾತ್ರ ಇತ್ತು. ಆದರೆ ಈ ಪ್ರಕರಣದಲ್ಲಿ 24 ವಾರಗಳ ಗರ್ಭಪಾತಕ್ಕೆ ಸಂಬಂಧಿಸಿದಂತೆ ಅವಿವಾಹಿತೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್​ ಈ ತೀರ್ಪು ನೀಡಿದೆ.

    ಗರ್ಭಪಾತಕ್ಕೆ ಅನುಮತಿ ನೀಡದ ದೆಹಲಿ ಹೈಕೋರ್ಟ್​ ಆದೇಶವನ್ನು ರದ್ದು ಮಾಡಿದ ಸುಪ್ರೀಂಕೋರ್ಟ್​ ಮಹಿಳೆಗೆ ಗರ್ಭಪಾತಕ್ಕೆ ಅನುಮತಿ ನೀಡಿದೆ. (ಏಜೆನ್ಸೀಸ್​)

    ಕೇಂದ್ರ ಸರ್ಕಾರ ಬ್ಯಾನ್​ ಮಾಡಿದ ಒಂದು ದಿನದ ಬಳಿಕ ಪಿಎಫ್​ಐ ತವರು ಕೇರಳದಿಂದ ಹೊರಟಿತು ಈ ಆದೇ

    VIDEO: ಮಕ್ಕಳಿಗೆ ಪ್ಯಾಡ್ ಕೊಡಬಹುದೆ ಎಂದ ಬಾಲಕಿಗೆ ಲೇಡಿ ಐಎಎಸ್​ ಅಧಿಕಾರಿಯಿಂದ ಥೂ ಇದೆಂಥ ಕೀಳು ಮಾತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts