

ಗೋರಖ್ಪುರ (ಉತ್ತರ ಪ್ರದೇಶ): ಈಗ ಏನು ಎಡವಟ್ಟಾದರೂ ಅದು ವೈರಲ್ ಆಗುವ ಕಾಲ. ಅದರಲ್ಲಿಯೂ ರಾಜಕಾರಣಿಗಳ ಮೇಲೆ ಸದಾ ಕಣ್ಣಿಡುವ ಜನ, ಅವರಿಗೆ ಸ್ವಲ್ಪ ಹೆಚ್ಚೂ ಕಮ್ಮಿಯಾದರೂ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿಬಿಡುತ್ತಾರೆ.
ಅದೇ ರೀತಿಯ ಒಂದು ಘಟನೆ ಗೋರಖ್ಪುರದಲ್ಲಿ ನಡೆದಿದೆ. ನಟ ಹಾಗೂ ಬಿಜೆಪಿ ಸಂಸದ ರವಿ ಕಿಶನ್ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಆಯತಪ್ಪಿ ಬಿದ್ದ ವಿಡಿಯೋ ಭಾರಿ ವೈರಲ್ ಆಗಿದೆ.
ಕಾರ್ಯಕ್ರಮದಲ್ಲಿ ರವಿ ಕಿಶನ್ ಅವರಿಗೆ ಶಾಲು ಹೊದೆಸಿ ಸನ್ಮಾನ ಮಾಡಲಾಗಿದೆ. ಸನ್ಮಾನದ ನಂತರ ಖುರ್ಚಿ ಮೇಲೆ ಕೂರಬೇಕು ಅನ್ನೋವಷ್ಟರಲ್ಲಿ ಆಯತಪ್ಪಿ ಬಿಟ್ಟಿದ್ದಾರೆ. ಕೂಡಲೇ ಕೆಳಕ್ಕೆ ಬಿದ್ದುಬಿಟ್ಟಿದ್ದಾರೆ.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು ಇದನ್ನು ವಿಡಿಯೋ ಮಾಡಿಕೊಂಡು ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಕಳೆದ ತಿಂಗಳು ಬಾಬಾ ರಾಮದೇವ್ ಆನೆ ಮೇಲೆ ಕೂತು ಯೋಗ ಮಾಡಲು ಹೋಗಿ ಬಿದ್ದ ದೃಶ್ಯವೂ ಸಹ ವೈರಲ್ ಆಗಿದ್ದು ಇಲ್ಲಿ ಉಲ್ಲೇಖಾರ್ಹ.