

ಬೆಂಗಳೂರು: ಸಂಖ್ಯಾಶಾಸ್ತ್ರ ಎನ್ನುವುದು ಭಾರತದಲ್ಲಿ ಮಾತ್ರವಲ್ಲೇ ಹಲವು ದೇಶಗಳಲ್ಲಿ ಪ್ರಚಲಿತದಲ್ಲಿದೆ. ಇದನ್ನು ಅತಿಯಾಗಿ ನಂಬುವವರೂ ಇದ್ದಾರೆ, ನಂಬದವರೂ ಅಷ್ಟೇ ಪ್ರಮಾಣದಲ್ಲಿದ್ದಾರೆ. ಆದರೆ ಕೆಲವೊಮ್ಮೆ ಈ ನಂಬರ್ ಗೇಮ್ ಎನ್ನುವುದು ಬದುಕಿನಲ್ಲಿ ಕೆಲವೊಂದು ವಿಚಿತ್ರ ಸನ್ನಿವೇಶಗಳನ್ನು ಸೃಷ್ಟಿಸುವುದು ಮಾತ್ರ ಸುಳ್ಳಲ್ಲ.
ಈ ಒಂದೇ ವರ್ಷದಲ್ಲಿ ಚಿಕ್ಕ ವಯಸ್ಸಿನ ಶ್ರೇಷ್ಠ ನಟರನ್ನು ಕಳೆದುಕೊಂಡಿದ್ದೇವೆ ನಾವು. ಪುನೀತ್ ರಾಜಕುಮಾರ್, ಸಂಚಾರಿ ವಿಜಯ್ ಮತ್ತು ಚಿರಂಜೀವಿ ಸರ್ಜಾ ಈ ಮೂವರು ನಟರು ಜನಿಸಿರುವುದು 17ನೇ ದಿನಾಂಕ ಎನ್ನುವುದು ಅಚ್ಚರಿ ತರುವ ವಿಷಯವಾಗಿದ್ದು, ಇದರ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿ ಕೂಡ ಆಗಿದೆ.
ಆದರೆ ಇದೀಗ ನಟ ಪುನೀತ್ ಕುಮಾರ್ ಅವರ ಜೀವನದಲ್ಲಿ ನಡೆದಿರುವ ಘಟನೆ ಮಾತ್ರ ತುಂಬಾ ನಿಗೂಢವಾಗಿದೆ. ಇದು ಕಾಕತಾಳೀಯ ಎನ್ನಿಸಿದರೂ, ಎಷ್ಟೋ ಮಂದಿ ಇದು ಅಪ್ಪುವಿನ ಜೀವನ ರಹಸ್ಯ, ಅವರ ಸಾವಿನ ಬಗ್ಗೆ ಇದೇ ದಿನ ತಿಳಿಸಿಕೊಡುವಂತಿತ್ತು ಎನ್ನುತ್ತಿದ್ದಾರೆ.
ಅದೇನೆಂದರೆ ಪುನೀತ್ ರಾಜ್‌ಕುಮಾರ್ ಹುಟ್ಟಿದ್ದು 1975ರ ಮಾರ್ಚ್ 17ರಂದು. ಅವರು ನಿಧನರಾದದ್ದು ಅಕ್ಟೋಬರ್ 29ರಂದು. 17 ಮತ್ತು 29 ಒಟ್ಟುಗೂಡಿದರೆ ಸಿಗುವ ಮೊತ್ತ 46. ಪುನೀತ್ ಅವರು 46ನೇ ವಯಸ್ಸಿನಲ್ಲಿ ಅಗಲಿರುವ ಕಾರಣ ಅವರ ಈ ಜನ್ಮ ಮತ್ತು ಮರಣ ದಿನಾಂಕಗಳ ಬಗ್ಗೆ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ಇಷ್ಟೇ ಅಲ್ಲದೇ, ಯುವರತ್ನ ಚಿತ್ರ ಪುನೀತ್ ಅವರ 29ನೇ ಚಿತ್ರವಾಗಿತ್ತು. ಆದ್ದರಿಂದ ಈ ಚಿತ್ರದಲ್ಲಿ ಅವರ ಬೈಕ್ ಸಂಖ್ಯೆ 29 ಆಗಿತ್ತು. ಕೆಎ 01 ಪಿಎಸ್ 0029 ಎಂದು ಅದರಲ್ಲಿ ಉಲ್ಲೇಖವಾಗಿತ್ತು. ನಂ.1 ನಟ ಮತ್ತು 29ನೇ ಚಿತ್ರ ಎಂದು ಅದು ಬಿಂಬಿಸುತ್ತಿರುವಾಗಿ ಸಂದರ್ಶನದಲ್ಲಿ ಹೇಳಲಾಗಿತ್ತು. ಮಾತ್ರವಲ್ಲದೇ ಅವರು ಬಳಸಿದ್ದ ಜೆರ್ಸಿ (ಕೋಟ್) ಹಿಂಬದಿ ಕೂಡ 29 ಎಂದು ಬರೆದಿತ್ತು. ಇಷ್ಟು ಮಾತ್ರವಲ್ಲದೇ ಜಾಕಿ ಚಿತ್ರದಲ್ಲಿ ಕೂಡ ಅವರ ಬೈಕ್ ಸಂಖ್ಯೆ 29 ಆಗಿತ್ತು. ಇದೀಗ 29ನೇ ತಾರೀಖಿನಂದೇ ಅವರ ಮೃತಪಟ್ಟಿರುವ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿದೆ.
ಅಪ್ಪು ಜೀವನದಲ್ಲಿ ನಡೆದಿರುವ ಇಂಥ ಘಟನೆಗಳನ್ನೆಲ್ಲೇ ಕೆದಕಿ ತೆಗೆಯುತ್ತಿರುವ ಅಭಿಮಾನಿಗಳು ಕಣ್ಣೀರಾಗುತ್ತಿದ್ದಾರೆ.