

ನ್ಯೂಯಾರ್ಕ್: ಈ ಚಿತ್ರದಲ್ಲಿ ಕಾಣಿಸುತ್ತಿರುವ ವ್ಯಕ್ತಿಯ ಹೆಸರು ಮೈಕೆಲ್ ಗೊಗೂನ್. ಅಮೆರಿಕದ ನ್ಯೂಯಾರ್ಕ್ ನಿವಾಸಿ, ಕೋಟ್ಯಧಿಪತಿಯಾಗಿರುವ ಈತನ ಸೆಕ್ಸ್ ಇತಿಹಾಸ ಕೆದಕಿದರೆ, ಭಯಾನಕ ಎನ್ನುವಷ್ಟು ಸತ್ಯಗಳು ಹೊರಕ್ಕೆ ಬರುತ್ತಿದ್ದು, ಇದರ ತನಿಖೆಗೆ ಹೋದ ಪೊಲೀಸರೇ ಶಾಕ್ ಆಗಿದ್ದಾರೆ.
57 ವರ್ಷದ ಈ ಕೋಟ್ಯಧಿಪತಿ ಸಿಕ್ವೊಯಾ ಕ್ಯಾಪಿಟಲ್‌ನ ಪಾಲುದಾರ ಕೂಡ. ಇದಾಗಲೇ ಐದು ಸಾವಿರಕ್ಕೂ ಹೆಚ್ಚು ಮಂದಿಯ ಜತೆ ಈತ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾನಂತೆ. ಈ ಕುರಿತು ಎಕ್ಸ್‌ಎಲ್ ಷೀಟ್‌ನಲ್ಲಿ ಎಲ್ಲರ ವಿವರಗಳನ್ನೂ ಈತ ಬರೆದಿಟ್ಟುಕೊಂಡಿದ್ದಾನೆ. ತಾನು ಯಾರ್ಯಾರ ಜತೆ ಮಲಗಿದ್ದೇನೆ ಎನ್ನುವ ಸಂಪೂರ್ಣ ವಿವರ ಈ ದಾಖಲೆಯಲ್ಲಿದೆಯಂತೆ!
ಅಷ್ಟಕ್ಕೂ ಈತನ ಈ ಭಯಾನಕ ಹಿಸ್ಟ್ರಿ ಪೊಲೀಸರಿಗೆ ತಿಳಿದದ್ದು, ಮೂವರು ಮಹಿಳೆಯರು ಈತನ ವಿರುದ್ಧ ಅತ್ಯಾಚಾರದ ಕೇಸ್ ದಾಖಲು ಮಾಡಿದಾಗ. ಈತನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಮಹಿಳೆಯರು ಈತನ ವಿರುದ್ಧ ರೇಪ್ ಕೇಸ್ ದಾಖಲು ಮಾಡಿದ್ದರು. ಅವರು 135 ಪುಟಗಳ ದೂರು ಸಲ್ಲಿಸಿ, 800 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ಪರಿಹಾರ ಕೋರಿದ್ದರು. ಗೊಗೂನ್ ತಮ್ಮ ಜತೆ ವಿಕೃತ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಮಾತ್ರವಲ್ಲದೇ ಹಲವಾರು ಮಹಿಳೆಯರನ್ನು ಇದೇ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾನೆ. ಲೈಂಗಿಕ ಕ್ರಿಯೆಯ ನಂತರ ಯಾರಲ್ಲಿಯೂ ವಿಷಯ ತಿಳಿಸಬಾರದು ಎನ್ನುವ ಕಾರಣಕ್ಕೆ ಭಾರಿ ಉಡುಗೊರೆಗಳನ್ನು ನೀಡುತ್ತಿದ್ದಾನೆ ಎಂದು ಅವರು ಆರೋಪಿಸಿದ್ದರು.
ಇದರ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಈತನ ಐಷಾರಾಮಿ ಬಂಗಲೆಯಲ್ಲಿ ಅವನೇ ಬರೆದಿಟ್ಟಿರುವ ದಾಖಲೆಗಳು ಸಿಕ್ಕಿವೆ. ಅದರಲ್ಲಿ ಐದು ಸಾವಿರಕ್ಕೂ ಅಧಿಕ ಹೆಂಗಸರ ವಿವರವಿದ್ದು, ತಾನು ಹೇಗೆ ಅವರ ಜತೆ ಲೈಂಗಿಕ ಕ್ರಿಯೆ ನಡೆಸಿದೆ ಎಂಬುದನ್ನು ಅದರಲ್ಲಿ ಉಲ್ಲೇಖಿಸದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಬಂಗಲೆಯಲ್ಲಿಯೇ ಒಂದು ಬಾರ್ ನಿರ್ಮಿಸಿರುವ ಈತ ಅದರಲ್ಲಿಯೇ 'ಬೂಮ್ ಬೂಮ್' ಎಂಬ ಕೊಠಡಿ ನಿರ್ಮಿಸಿದ್ದಾನೆ. ಅದರಲ್ಲಿ ಮಹಿಳೆಯರನ್ನು ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.
ತನ್ನ ವಿರುದ್ಧ ದೂರು ದಾಖಲಿಸಿದರೆ, ಅವರನ್ನು ಕೊಲ್ಲುವಂತೆ ತನ್ನ ಭದ್ರತಾ ಸಿಬ್ಬಂದಿಗೆ ಈತ ಆದೇಶಿಸುತ್ತಿದ್ದ ಎಂಬ ಅಂಶವೂ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅಷ್ಟಕ್ಕೂ ಈ ಪುಣ್ಯಾತ್ಮ ಅಂತಿಂಥ ಸಾಮಾನ್ಯ ವ್ಯಕ್ತಿಯಲ್ಲ. ಈತನ ಮಾಲೀಕತ್ವದ ಭದ್ರತಾ ಸಂಸ್ಥೆಯಾಗಿರುವ ಆಮೀಟರ್ ಗ್ರೂಪ್ ಆ್ಯಪ್ಪಲ್, ಸಿಸ್ಕೋ, ಗೂಗಲ್, ಯೂಟ್ಯೂಬ್, ಪೇಪಾಲ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಉನ್ನತ ಸಂಸ್ಥೆಗಳಿಗೆ ಹಣಕಾಸಿನ ಸಹಾಯ ಮಾಡಿದೆ! ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಮಾಡುವ ತಂತ್ರಗಳ ಸಾಧನೆ ಮಾಡುವವರ ಪಟ್ಟಿಯಲ್ಲಿ ಈತನ ಹೆಸರು ಸದಾ ಟಾಪರ್ ಲಿಸ್ಟ್‌ನಲ್ಲಿ ಕೂಡ ಇರುತ್ತದೆ. ವಿಶ್ವದ ಸಿರಿವಂತನ ಪಟ್ಟಿಯಲ್ಲಿಯೂ ಇವರ ಹೆಸರು ಸದಾಮುಂದು.