

ಬೆಂಗಳೂರು: ಬಿಗ್ಬಾಸ್ ಓಟಿಟಿ-1 ಪ್ರಾರಂಭವಾಗಿ ತಿಂಗಳೇ ಕಳೆದಿದೆ. ಅಂದಿನಿಂದ ಇಂದಿನವರೆಗೂ ಸುದ್ದಿಯಲ್ಲಿ ಇರುವ ಕೆಲವೇ ಕೆಲವು ಸ್ಪರ್ಧಿಗಳ ಪೈಕಿ ಟಿಕ್ಟಾಕ್ ಸ್ಟಾರ್, ನಟಿ ಸೋನು ಶ್ರೀನಿವಾಸ ಗೌಡ ಕೂಡ ಒಬ್ಬರು. ಇವರು ಇದಾಗಲೇ ಬಿಗ್ ಬಾಸ್ ಮನೆಯಲ್ಲಿ ಅನೇಕ ವಿಚಾರದಲ್ಲಿ ವಿವಾದಕ್ಕೂ ಸಿಲುಕಿದ್ದು, ಭಾರಿ ಸುದ್ದಿಯಲ್ಲಿಯೂ ಇದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಸೋನು ಅವರು ಇನ್ನಷ್ಟು ಹೈಲೈಟ್ ಆಗಿರಲು ಕಾರಣ, ಇನ್ನೋರ್ವ ಸ್ಪರ್ಧಿ ರಾಕೇಶ್ ಅಡಿಗ ಅವರ ಜತೆಗಿನ ಸ್ನೇಹ. ಆದರೆ ಇದೀಗ ಸೋನು 24 ವರ್ಷದ ಹುಡುಗನೊಬ್ಬನ ಕುರಿತು ಮಾತನಾಡಿ ಸುದ್ದಿಯಲ್ಲಿದ್ದಾರೆ. ಸಖತ್ ಆಗಿರುವ 24 ವರ್ಷದ ಹುಡುಗನನ್ನು ಕಳುಹಿಸಿ ಬಿಗ್ ಬಾಸ್‌ಗೆ ಸೋನು ಬೇಡಿಕೆ ಇಟ್ಟಿದ್ದಾರೆ!
'ನನಗೀಗ 22 ವರ್ಷ ವಯಸ್ಸು. ಆದ್ದರಿಂದ ನನಗೆ ಸಕತ್ ಆಗಿರೋ 24 ವರ್ಷದ ಹುಡುಗನನ್ನು ದೇವ್ರೆ ಕಳಿಸಿಕೊಡು. ನೀನು ಇರೋದೇ ಹೌದಾದರೆ ನನಗೆ ಇಂಥದ್ದೇ ಹುಡುಗ ಬೇಕು' ಎಂದಿದ್ದಾರೆ. ನನಗೆ ಲವ್-ಗಿವ್ ಅಂದ್ರೆ ಆಗಲ್ಲ, ಲವ್ವಲ್ಲಿ ಏನಿದೆ? ಲವ್ ಎಂದ್ರೆ ನನಗೆ ಅಸಹ್ಯ ಎಂದಿರುವ ಸೋನು ಗೌಡ, ನನಗೆ ಪಾರ್ಟನರ್ ಬೇಕು, ಆದ್ದರಿಂದ ನನಗಿಂತ 2 ವರ್ಷ ದೊಡ್ಡವನಾಗಿರುವ ಹುಡುಗನನ್ನು ಕಳಿಸಿಕೊಡಪ್ಪಾ ದೇವರೆ ಎಂದಿದ್ದಾರೆ.
ಇಷ್ಟು ಹೇಳುತ್ತಿದ್ದಂತೆಯೇ, ಜಶ್ವಂತ್ ಕಡೆಗೆ ರಾಕೇಶ್ ಕೈ ತೋರಿಸಿದರು. ಅವನು ಬೇಡ, ಅವನು ಎಂಗೇಜ್ಡ್ ಎಂದು ಸೋನು ಎಂದರು. ಅದಕ್ಕೆ ಜಶ್ವಂತ್, ನಾನು ಎಂಗೇಜ್ಡ್ ಅಲ್ಲ, ಕಮಿಟೆಡ್ ಎಂದು ಚಟಾಕಿ ಹಾರಿಸಿದರು.