ಇಂಜಿನಿಯರಿಂಗ್​ ಪದವೀಧರರಾ? ಬಿಇಎಲ್​ನಲ್ಲಿ ಉದ್ಯೋಗಾವಕಾಶ: ಅರ್ಜಿ ಆಹ್ವಾನ

BEL
Published on

ಭಾರತ ಸರ್ಕಾರ ರಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ನ ಪೋಟ್​ಬ್ಲೇರ್​, ಅಕೋರ್ನಂ, ಕೊಚ್ಚಿ, ಗೋವಾ, ಮುಂಬೈ ಶಾಖೆಗಳಲ್ಲಿ ಖಾಲಿಯಿರುವ ಪ್ರಾಜೆಕ್ಟ್​ ಇಂಜಿನಿಯರ್​ (ಎಲೆಕ್ಟ್ರಾನಿಕ್ಸ್​)10 ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಬೆಂಗಳೂರು ವಿಭಾಗದಿಂದ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

10 ಸ್ಥಾನದಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗೆ 8 ಸ್ಥಾನ, ಎಸ್ಟಿ 1 ಹಾಗೂ ಇಡಬ್ಯ್ಲುಎಸ್​ಗೆ 1 ಸ್ಥಾನ ಮೀಸಲಿರಿಸಲಾಗಿದೆ. 1.5.2022ಕ್ಕೆ ಅನ್ವಯವಾಗುವಂತೆ ಗರಿಷ್ಠ 32 ವರ್ಷ ವಯೋಮಿತಿ ನಿಗದಿ ಮಾಡಲಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.

ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್​/ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಶನ್​/ಇ ಆ್ಯಂಡ್​ ಟಿ/ಟೆಲಿಕಮ್ಯುನಿಕೇಶನ್​ನಲ್ಲಿ ಶೇ.55 ಅಂಕಗಳೊಂದಿಗೆ ಬಿಇ ಅಥವಾ ಬಿ.ಟೆಕ್​ ಪದವಿ ಪಡೆದಿರಬೇಕು.

ವೇತನ: 3 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಮೊದಲ ವರ್ಷ ಮಾಸಿಕ 40,000 ರೂ. ವೇತನ ಇರಲಿದೆ. 3ನೇ ವರ್ಷ 55,000 ರೂ. ನೀಡಲಾಗುವುದು.

ನೇಮಕಾತಿ: ಅರ್ಹತಾ ಪರಿೆಯಲ್ಲಿ ಶಾರ್ಟ್​ಲಿಸ್ಟ್​ ಮಾಡಲಾದ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಅಹ್ವಾನಿಸಲಾಗುವುದು.

ಅರ್ಜಿ ಸಲ್ಲಿಕೆ: ಆಸಕ್ತ ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲಾತಿಗಳ ಪ್ರತಿ ಲಗತ್ತಿಸಿ ಡೆಪ್ಯೂಟಿ ಮ್ಯಾನೇಜರ್​ (ಎಚ್​ಆರ್​/ಮಿಲಿಟರಿ ಕಮ್ಯುನಿಕೇಶನ್ಸ್​ ಎಸ್​ಬಿಯು) ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ , ಜಾಲಹಳ್ಳಿ ಪೋಸ್ಟ್​, ಬೆಂಗಳೂರು& 5860013 ವಿಳಾಸಕ್ಕೆ ಅಂಚೆ ಮೂಲಕ ತಲುಪಿಸಬೇಕು. ಅಂಚೆ ಲಕೋಟೆ ಮೇಲೆ ಹುದ್ದೆಯ ಹೆಸರನ್ನು ನಮೂದಿಸಿರಬೇಕು.

ಅರ್ಜಿಶುಲ್ಕ: ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ 400 +ಜಿಎಸ್​ಟಿ. ಎಸ್ಟಿ ಮತ್ತು ಅಂವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28.06.2022

ಅಧಿಸೂಚನೆಗೆ: https://bit.ly/3HuywNj

ಹೆಚ್ಚಿನ ಮಾಹಿತಿಗಾಗಿ:hrmilcom@bel.co.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net