ಬೆಡ್ ಬ್ಲಾಕ್‌ ದಂಧೆ- ತೇಜಸ್ವಿ ಸೂರ್ಯ ನೀಡಿದರು ಖದೀಮರ ಫೋನ್‌ ಸಂಭಾಷಣೆ, ಹಣ ವರ್ಗಾವಣೆ ಡಿಟೇಲ್ಸ್‌

tejaswi
Published on

ಬೆಂಗಳೂರು: ಸರ್ಕಾರಿ ಕೋಟದಡಿ‌ ಮೀಸಲಿರಿಸಿದ ಬೆಡ್ ಗಳನ್ನು ಬ್ಲಾಕ್‌ ಮಾಡಿ ಅವ್ಯವಹಾರ ಬಯಲಿಗೆಳೆದಿರುವ ಸಂಸದ ತೇಜಸ್ವಿ‌ ಸೂರ್ಯ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಭೇಟಿ ಮಾಡಿ ದಂಧೆಯಲ್ಲಿ ತೊಡಗಿರುವ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗಾರ‌ರೊಂದಿಗೆ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ ಬೆಡ್ ಹಗರಣ ಕುರಿತು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ನಿನ್ನೆ ರಾತ್ರಿಯಿಂದಲೂ ಸಾಕಷ್ಟು ಮಾಹಿತಿ ಪೊಲೀಸರು ಕಲೆಹಾಕಿದ್ದೇನೆ.‌ ಹಣ ಪಡೆದವರು ಎಲ್ಲಾ ಗೂಗಲ್ ಪೇ ಮೂಲಕ ಪಡೆದಿದ್ದಾರೆ. ನನಗೆ ಬಂದಿರುವ ಮಾಹಿತಿಯನ್ನು ಪೊಲೀಸ್ ಆಯುಕ್ತ ತಿಳಿಸಿದ್ದೇನೆ‌.

ಲಭ್ಯವಾಗಿರುವ ಪೋನ್ ಸಂಭಾಷಣೆ ಸಹ ಸಾಕಷ್ಟು ಸಿಕ್ಕಿದ್ದು ಅದೆಲ್ಲ ಪೊಲೀಸರು‌ ಪರಿಶೀಲನೆ ಮಾಡುತ್ತಿದ್ದಾರೆ ಎಂದರು.

-ಈ ಬಗ್ಗೆ ನಂದನ್ ನಿಲೇಕಣಿ ಅವರಿಗೂ ಕಾಲ್ ಮಾಡಿ ಮಾತನಾಡಿದ್ದೇನೆ. ಉತ್ತಮ ಸಾಫ್ಟ್‌ವೇರ್ ಇಂಜನಿಯರ್ ಗಳ ತಂಡ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಬೆಡ್ ಬುಕ್ ಮಾಡುವ ಸಾಫ್ಟ್‌ವೇರ್ ನಲ್ಲಿ ಯಾವುದೇ ಲೋಪದೋಷ ಇಲ್ಲದ ಹಾಗೆ ಮಾಡಲಾಗುವುದು ಎಂದು ಹೇಳಿದ್ದಾರೆ‌ ಎಂಬುದಾಗಿ ತೇಜಸ್ವಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net