ಎಂಟು ತಿಂಗಳ ಮಗು ಇದೆ, ಪ್ಲೀಸ್‌ ಬಿಡಿ ಸರ್‌ ಎಂದ್ರೂ ಕೇಳಲಿಲ್ಲ... ಕಾಲು ಹಿಡಿದರೂ ಜಗ್ಗಲಿಲ್ಲ...!

seize
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಲ್ಲೆಡೆ ಬಂದೋಬಸ್ತ್‌ ಇನ್ನೂ ಬಿಗಿಗೊಳಿಸಲಾಗುತ್ತಿದೆ. ಇದರಿಂದಾಗಿ ವಾಹನಗಳ ಮೇಲೆ ರಸ್ತೆಗಳಿದವರ ಮೇಲೆ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಸುಳ್ಳು ಸುಳ್ಳು ನೆಪ ಹೇಳಿ ಸುತ್ತಾಡುವವರು ಹೆಚ್ಚಾಗುತ್ತಿರುವ ಕಾರಣ, ತೀರಾ ಅಗತ್ಯವಾಗಿ ಹೋಗಲೇಬೇಕಾದ ಅನಿವಾರ್ಯತೆ ಇರುವವರೂ ಕೂಡ ಕೆಲವೊಮ್ಮೆ ಸಂಕಷ್ಟಕ್ಕೆ ಸಿಲುಕುವ ಘಟನೆಗಳು ನಡೆಯುತ್ತಿವೆ. ಆದರೆ ಪೊಲೀಸರಿಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆಯೂ ಇದೆ.

ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿ ಎಂಟು ತಿಂಗಳ ಮಗುವನ್ನು ಕಾರಿನಲ್ಲಿ ಕರೆದುಕೊಂಡು ಬಂದು ಪೇಚಿಗೆ ದಂಪತಿ ಸಿಲುಕಿರುವ ಘಟನೆ ನಡೆದಿದೆ. ರಾಜಾಜಿನಗರದಿಂದ ಚಾಲುಕ್ಯ ವೃತ್ತದ ಬಳಿ ಬಂದಿದ್ದ ಕಾರಿನಲ್ಲಿ ದಂಪತಿ ಮತ್ತು ಮಗು ಇತ್ತು.

ಮಹಾರಾಷ್ಟ್ರ ನೊಂದಣಿ ಇರುವ ಕಾರನ್ನು ಪೊಲೀಸರು ಜಪ್ತಿ ಮಾಡಿದರು. ಜಯಮಹಲ್ ಬಳಿ ತೆರಳಬೇಕು ಕಾರು ಬಿಡಿ ಎಂದು ದಂಪತಿ ಮನವಿ ಸಲ್ಲಿಸಿದರೂ ಪೊಲೀಸರು ಕೇಳಲಿಲ್ಲ. ಸರ್ ಕಾರಿನಲ್ಲಿ ಪುಟ್ಟ ಮಗು ಇದೆ, ಪ್ಲೀಸ್‌ ಅರ್ಥ ಮಾಡಿಕೊಳ್ಳಿ, ನೀವು ನನ್ ಕಾರು ಜಪ್ತಿ ಮಾಡಿದ್ರೆ ಮಗುಗೆ ಸಮಸ್ಯೆ ಆಗುತ್ತೆ ಅಂತ ದಂಪತಿ ಮನವಿ ಮಾಡಿದರೂ ಪೊಲೀಸರು ಅದಕ್ಕೆ ಜಗ್ಗದೇ ಠಾಣೆಗೆ ಕರೆದೋಯ್ದು ಪ್ರಕರಣ ದಾಖಲು ಮಾಡಿದ್ದಾರೆ.

ಇನ್ನೊಂದು ಘಟನೆಯಲ್ಲಿ ಅನಗತ್ಯವಾಗಿ ಬೈಕ್‌ನಲ್ಲಿ ಓಡಾಟ ಮಾಡುತ್ತಿದ್ದು, ಅವರ ಬೈಕ್‌ ಸೀಜ್‌ ಮಾಡಲಾಗಿದೆ. ಮಾಸ್ಕ್ ಸರಿಯಾಗಿ ಹಾಕದ ವ್ಯಕ್ತಿಗೆ ಪೊಲೀಸ್ ಆವಾಜ್‌ ಹಾಕಿದ್ದು, ಮನವಿ ಮಾಡಿಕೊಂಡರೂ ಕೇಳದೇ ಬೈಕ್‌ ಸೀಜ್‌ ಮಾಡಿ ಠಾಣೆಗೆ ಕರೆದೊಯ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net