

ಚೆನ್ನೈ: ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಿಗೆ ಈ ವರ್ಷಾಂತ್ಯ ಭಾರಿ ಅನಾಹುತಗಳನ್ನೇ ಸೃಷ್ಟಿಸುತ್ತಿದೆ. ನಿವಾರ್ ಹಾಗೂ ಬುರೇವಿಯ ಚಂಡಮಾರುತಗಳ ಹೊಡೆತದಿಂದ ಇನ್ನೂ ಸುಧಾರಿಸಿಕೊಳ್ಳದ ಈ ರಾಜ್ಯಗಳಿಗೆ ಇದೀಗ ಅರ್ನಬ್ ಶಾಕ್ ಕೊಡಲಿದೆ.
ಹಿಂದೂಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದಾಗಿ ಅರ್ನಬ್ ಚಂಡಮಾರುತ ಎದ್ದಿದೆ. ಇದಾಗಲೇ ಕೇರಳ ಪ್ರವೇಶಿಸಲು ಸನ್ನದ್ಧವಾಗಿರುವ ಚಂಡಮಾರುತ ಕೆಲವೇ ದಿನಗಳಲ್ಲಿ ತಮಿಳುನಾಡು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಈ ಹಿನ್ನೆಲೆಯಲ್ಲಿ ಕೇರಳ ಮತ್ತು ತಮಿಳುನಾಡಿನಲ್ಲಿ ಭೀಕರ ಮಳೆಯಾಗುವ ಸಾಧ್ಯತೆ ಇದ್ದು, ನೆರೆಯ ಕರ್ನಾಟಕದ ಮೇಲೂ ಇದು ಪರಿಣಾಮ ಬೀರಲಿದೆ.
ಅಷ್ಟಕ್ಕೂ ಅರ್ನಬ್ ಎಂದರೆ ಸಮುದ್ರ. ಇದರ ಮೂಲ ಸಂಸ್ಕೃತ. ಸಂಸ್ಕೃತದಲ್ಲಿ ಅರ್ಣವ ಎಂದರೆ ಸಮುದ್ರ. ಅರ್ಣವದಿಂದ ಅರ್ನಬ್ ಆಗಿದೆ. ಅರ್ಣವ ಎನ್ನುವುದು ಹನುಮಂತನ ಹೆಸರು ಕೂಡ. ಈತ ಸಮುದ್ರ ಸೀಮೋಲ್ಲಂಘನ ಮಾಡಿದ್ದರಿಂದ ಈ ಹೆಸರು. ಹೀಗಾಗಿ ಈಗ ಸಮುದ್ರಗಳಲ್ಲಿ ಅಲೆಯೇಳುವ ಚಂಡಮಾರುತಕ್ಕೆ ಅರ್ನಬ್ ಎಂದು ಹೆಸರು ಇಡಲಾಗಿದೆ.