VIDEO: ಒಂದ್ವೇಳೆ ಹೀಗೆ ಆಗಿದ್ದೇ ಹೌದಾದ್ರೆ ನಮ್​ ಪಕ್ಷ ರಾಜಕೀಯದಿಂದಲೇ ದೂರ ಉಳಿಯುತ್ತೆ- ಬಿಜೆಪಿಗೆ ಕೇಜ್ರಿ ಸವಾಲ್​!

kejriwala
Published on

ನವದೆಹಲಿ: ದೆಹಲಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸನ್ನಿಹಿತವಾಗುತ್ತಿದೆ. ಪಂಜಾಬ್​ನಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಆಮ್​ ಆದ್ಮಿ ಪಕ್ಷ, ದೆಹಲಿಯಲ್ಲಿಯೂ ಗೆಲ್ಲಲು ಬಹಳ ಕಸರತ್ತು ನಡೆಸುತ್ತಿದೆ. ಇದೇ ಕಾರಣಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರು ಬಹಳ ಹುಮ್ಮಸ್ಸಿನಿಂದ ಇದ್ದಾರೆ.

ಇದೀಗ ಅವರು ಬಿಜೆಪಿಗೆ ಒಂದು ಸವಾಲು ಹಾಕಿದ್ದಾರೆ. ಅದೇನೆಂದರೆ, ಒಂದು ವೇಳೆ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಆಮ್ ಆದ್ಮಿ ಪಾರ್ಟಿ ರಾಜಕೀಯದಿಂದ ದೂರ ಸರಿಯಲಿದೆ ಎಂದು ಸವಾಲು ಹಾಕಿದ್ದಾರೆ. ಈ ಚುನಾವಣೆಗಳನ್ನು ಸರಿಯಾಗಿ ನಡೆಸಿ, ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ನಮ್ಮ ಪಕ್ಷ ರಾಜಕೀಯದಿಂದ ಹೊರಹೋಗಲಿದೆ ಎಂದಿದ್ದಾರೆ.

ಚುನಾವಣೆಯನ್ನು ಬಿಜೆಪಿ ಮುಂದೂಡುತ್ತಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತಪಡಿಸಿದ ಅವರು, ಬಿಜೆಪಿಯವರು ಸೋಲಿನ ಭಯದಿಂದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯನ್ನು ಮುಂದೂಡುತ್ತಿದ್ದಾರೆ. ನಾಳೆ ಅವರು ರಾಜ್ಯಗಳು ಮತ್ತು ದೇಶದ ಚುನಾವಣೆಗಳನ್ನು ಕೂಡ ಮುಂದೂಡುತ್ತಾರೆ ಎಂದು ಅವರು ಹೇಳಿದರು.

ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂದು ಹೇಳುತ್ತದೆ. ಆದರೆ ಸಣ್ಣ ಪಕ್ಷವಾದ ಆಪ್ ಮತ್ತು ಸಣ್ಣ ಚುನಾವಣೆಗೆ ಅದು ಹೆದರುತ್ತಿದೆ ಎಂದು ಕೇಜ್ರಿವಾಲ್ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net