

ಉತ್ತರ: ಸಾಮಾನ್ಯವಾಗಿ ಋತುಬಂಧದ ಸಮಯದಲ್ಲಿ ಮತ್ತು ನಂತರದ ವರ್ಷಗಳಲ್ಲಿ ಮೈ ಬಿಸಿಯಾಗುವುದು ಸಹಜ. ಆದರೆ ನಿಮಗಿನ್ನೂ 40ರ ಪ್ರಾಯ. ಪ್ರತಿದಿನ ಸೊಗದೆಬೇರಿನ ಶರಬತ್ತನ್ನು ಬೆಳಗ್ಗೆ ಖಾಲಿ ಹೊಟ್ಟೆ 4 ಚಮಚದಷ್ಟನ್ನು ನೀರು ಬೆರೆಸಿ ಕುಡಿಯಿರಿ.
ಸೊಂಟ ನೋವು, ಮಂಡಿನೋವು, ಸಂಧಿವಾತದ ಸಮಸ್ಯೆಯಿಂದ, ಕ್ಯಾಲ್ಸಿಯಂ ಕೊರತೆಯಿಂದ, ರಕ್ತಹೀನತೆಯಿಂದ, ಬೊಜ್ಜಿನಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಯಾವ ಕಾರಣದಿಂದ ಎಂದು ಅರಿತು ಚಿಕಿತ್ಸೆ ಪಡೆಯುವುದು ಸೂಕ್ತ. ಸದ್ಯ ರಾಸ್ನಾದಿ ಗುಗ್ಗುಲು ಮಾತ್ರೆಯನ್ನು ದಿನಕ್ಕೆರಡು ಬಾರಿ ಎರಡು ಮಾತ್ರೆಯನ್ನು ಊಟದ ನಂತರ ಸೇವಿಸಿ.
ಪ್ರತಿದಿನ ಪಿಂಡತೈಲವನ್ನು ನೋವಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿ ಶಾಖ ತೆಗೆದುಕೊಳ್ಳಿ. ಆಹಾರದಲ್ಲಿ ಕ್ಯಾಲ್ಸಿಯಂ ಅಂಶವಿರುವ ಹಾಲು, ಮೊಸರು, ಮೊಟ್ಟೆ, ಮೊಳಕೆಕಾಳು, ಸೊಪ್ಪು, ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಿ. ಪ್ರತಿ ದಿನ ಅರ್ಧ ಗಂಟೆ ವ್ಯಾಯಾಮ ಯೋಗ ಅಥವಾ ವಾಕಿಂಗ್ ಮಾಡಿ.
ವಯಸ್ಸು 44. ಬಿಪಿ, ಶುಗರ್ ಯಾವುದೂ ಇಲ್ಲ. ಆದರೆ ಕೆಲ ವರ್ಷಗಳಿಂದ ಗುಪ್ತಾಂಗದಲ್ಲಿ ವಿಪರೀತ ಕೆಟ್ಟ ವಾಸನೆ ಬರುತ್ತದೆ. ಎಷ್ಟು ಸ್ವಚ್ಛತೆಯಿಂದ ಇದ್ದರೂ ಇದು ಹೋಗುತ್ತಿಲ್ಲ. ದಯವಿಟ್ಟು ಪರಿಹಾರ ತಿಳಿಸಿ.
ಪ್ರತಿದಿನ ನೀವು ಧರಿಸುವ ಒಳ ಉಡುಪನ್ನು ಬಿಸಿನೀರಿನಲ್ಲಿ ಒಗೆದು ಉಪಯೋಗಿಸಿ. ನೀರಿಗೆ ಅರಿಶಿಣ ಹಾಕಿ ಕುದಿಸಿ ಕಷಾಯ ತಯಾರಿಸಿ ದಿನಕ್ಕೆರಡು ಬಾರಿ ಜನನಾಂಗವಿರುವ ಸ್ವಚ್ಛಗೊಳಿಸಿ. ಜಾತ್ಯಾದಿಘೃತವನ್ನು ದಿನಕ್ಕೆರಡು ಬಾರಿ ಲೇಪಿಸಿಕೊಳ್ಳಿ. ಅಲ್ಲದೇ ಪ್ರತಿದಿನ ಅರ್ಧಲೋಟ ಬಿಸಿ ಹಾಲಿಗೆ ಒಂದು ಚಮಚ ಅರಿಶಿಣಪುಡಿ ಮತ್ತು ನೆಲ್ಲಿಕಾಯಿ ಪುಡಿ ಬೆರೆಸಿ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿ.
ಆರೋಗ್ಯ ಸಂಬಂಧಿತ ಇತರ ಪರಿಹಾರಗಳಿಗೆ ಇಲ್ಲಿ ಕ್ಲಿಕ್ ಮಾಡಿ: https://www.vijayavani.net/category/%e0%b2%86%e0%b2%b0%e0%b3%8b%e0%b2%97%e0%b3%8d%e0%b2%af/ ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ