More

    ಗಂಡನ ಈ ಸಮಸ್ಯೆಯಿಂದ ನನಗೆ ಜೀವನವೇ ಬೇಜಾರಾಗಿದೆ- ಅವರು ಸ್ಟ್ರಾಂಗ್​ ಆಗುವುದು ಹೇಗೆ?

    ಪ್ರಶ್ನೆ: ನನ್ನ ಗಂಡನಿಗೆ 45 ವರ್ಷ. ನನಗೆ 36 ವರ್ಷ. ಮದುವೆಯಾಗಿ 15 ವರ್ಷಗಳಾಗಿವೆ. ನಮಗೆ 12 ಮತ್ತು 9 ವರ್ಷದ ಇಬ್ಬರು ಮಕ್ಕಳಿದ್ದಾರೆ. ಪತಿಗೆ ನಾಲ್ಕು ವರ್ಷಗಳಿಂದ ರಕ್ತದೊತ್ತಡದ ಸಮಸ್ಯೆ ಇದೆ. ಅವರು ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ.

    ಸಕ್ಕರೆ ಕಾಯಿಲೆ ಇಲ್ಲ. ಕಳೆದ 2 ವರ್ಷಗಳಿಂದ ಅವರಿಗೆ ಹಿಂದಿನಂತೆ ಸಂಭೋಗ ಮಾಡಲು ಆಗುತ್ತಿಲ್ಲ. ರಾತ್ರಿ ಸಮಯ ಅವರಿಗೆ ನಿಮಿರುವಿಕೆ ಸಾಧ್ಯವಾಗುತ್ತಿಲ್ಲ. ಬೆಳಗಿನ ಜಾವ ಮಾತ್ರ ಅಲ್ಪಮಟ್ಟಿಗೆ ಪ್ರಯತ್ನಿಸುತ್ತಾರೆ. ಗಡಸುತನವೂ ಇಲ್ಲ, ಹಿಂದಿನಷ್ಟು ವೀರ್ಯವೂ ಹೊರಚೆಲ್ಲುವುದಿಲ್ಲ. ಈ ಕಾರಣದಿಂದ ನನಗೆ ಜೀವನವೇ ಬೇಸರವಾಗಿದೆ. ಇದಕ್ಕೆ ಏನಾದರೂ ಪರಿಹಾರ ಇದೆಯೇ?

    ಉತ್ತರ: ನಿಮ್ಮ ಪತಿ ಈಗ ರಕ್ತದೊತ್ತಡಕ್ಕೆ ತೆಗೆದುಕೊಳ್ಳುತ್ತಿರುವ ಮಾತ್ರೆಯ ಅಡ್ಡ ಪರಿಣಾಮಗಳೇನಾದರೂ ಇದೆಯೇ ಎಂಬುದನ್ನು ನಿಮ್ಮ ಕುಟುಂಬ ವೈದ್ಯರನ್ನು ಕೇಳಿ ಅರಿತುಕೊಳ್ಳಿ. ಹಾಗೇನಾದರೂ ಇದ್ದಲ್ಲಿ ಮಾತ್ರೆ ಬದಲಾಯಿಸಿ ಕೊಡುತ್ತಾರೆ.

    ಸದ್ಯ ವಾಜೀಕರ ರಸಾಯನವನ್ನು ದಿನಕ್ಕೆರಡು ಬಾರಿ ಒಂದು ಚಮಚದಷ್ಟು ಊಟದ ನಂತರ ಸೇವಿಸಿ, ಹಾಲು ಕುಡಿಯಲು ಹೇಳಿ. ಸಿದ್ಧಮರಕಧ್ವಜ ಮಾತ್ರೆಯನ್ನು ದಿನಕ್ಕೆರಡು ಬಾರಿ ಒಂದು ಮಾತ್ರೆಯಂತೆ ಸೇವಿಸಲು ಹೇಳಿ. ಅಂಜೂರ ಮತ್ತು ಬಾದಾಮಿಯನ್ನು ಪ್ರತಿದಿನ 6-8ರಷ್ಟು ತಿನ್ನಲಿ. ಉದ್ದಿನಬೇಳೆಯಿಂದ ತಯಾರಿಸಿದ ಆಹಾರ ಸೇವನೆಯೂ ಉತ್ತಮ.

    ಆರೋಗ್ಯ ಸಂಬಂಧಿತ ಇತರ ಪರಿಹಾರಗಳಿಗೆ ಇಲ್ಲಿ ಕ್ಲಿಕ್​ ಮಾಡಿ:

    https://www.vijayavani.net/category/%e0%b2%86%e0%b2%b0%e0%b3%8b%e0%b2%97%e0%b3%8d%e0%b2%af/

    ಅಂಡಾಶಯದಲ್ಲಿ ನೀರುಗುಳ್ಳೆಗಳಿವೆ, ಮಕ್ಕಳಾಗಲು ತೊಂದರೆಯಾಗುತ್ತದೆ? ಪರಿಹಾರವೇನು?

    ಮದುವೆಯಾಗಿ ಮೂರು ವರ್ಷಕ್ಕೇ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಂಡಿರುವೆ- ಪರಿಹಾರ ಹೇಳಿ

    ವೀರ್ಯ ಉತ್ಪತ್ತಿಯಾಗದಿದ್ದರೆ ವೆರಿಕೋಸ್​ ಕೂಡ ಕಾರಣವಾಗಿರಬಹುದು, ನೋಡಿ…

    ಆ ಭಾಗದಲ್ಲಿ ತುಂಬಾ ತುರಿಕೆ, ಶುಚಿಯಾಗಿದ್ದರೂ ಸಮಸ್ಯೆ ಪರಿಹಾರವಾಗುತ್ತಿಲ್ಲ- ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts