

ಉತ್ತರ: ವಿಧವೆಗೆ ಮಗುವನ್ನು ದತ್ತು ತೆಗೆದುಕೊಳ್ಳುವ ಅಧಿಕಾರ ಇರುತ್ತದೆ. ಆದರೆ, ಹಿಂದೂ ಅಡಾಪ್ಷನ್ಸ್ ಅಂಡ್ ಮೆಯಿಂಟೆನೆನ್ಸ್ ಆಕ್ಟ್ ನ ಕಲಂ ಹತ್ತರ ಪ್ರಕಾರ, 15 ವರ್ಷ ಪೂರ್ತಿ ಆಗಿರದ ಮಗುವನ್ನು ಮಾತ್ರ ದತ್ತು ತೆಗೆದುಕೊಳ್ಳುವ ಅವಕಾಶ ಇರುತ್ತದೆ. ಇಪ್ಪತ್ತು ವರ್ಷದ ಹುಡುಗಿಯನ್ನು ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ.
ಆದರೆ, ನಿಮ್ಮ ಜಾತಿಯ, ಕುಟುಂಬದ ಸಂಪ್ರದಾಯದಲ್ಲಿ ಹಲವಾರು ವಂಶಗಳಿಂದ , ಹಲವಾರು ದಶಕಗಳಿಂದ , ಹದಿನೈದು ವರ್ಷಕ್ಕೆ ಮೇಲ್ಪಟ್ಟವರನ್ನು ದತ್ತು ತೆಗದುಕೊಳ್ಳುವ ಪದ್ಧತಿ ಇದ್ದರೆ , ಆ ಪಧ್ಧತಿಯನ್ನು ನೀವು ಕಾನೂನಿನ ಪ್ರಕಾರ ಸಾಬೀತು ಪಡಿಸಲು ಸಾಧ್ಯ ಆಗುವುದಾದರೆ, ಮುಂದುವರೆಯಬಹುದು. ಇಲ್ಲದಿದ್ದರೆ ಇಪ್ಪತ್ತು ವರ್ಷದವರನ್ನು ದತ್ತು ತೆಗದುಕೊಂಡರೂ ಪ್ರಯೋಜನ ಆಗುವುದಿಲ್ಲ.
ನಿಮ್ಮ ತಂಗಿಯ ಪತಿ ತೀರಿಕೊಂಡ ತಕ್ಷಣ , ಆಕೆಯ ಪತಿಯ ಪಾಲಿನಲ್ಲಿ, ನಿಮ್ಮ ತಂಗಿಗೂ ಮತ್ತು ನಿಮ್ಮ ತಂಗಿಯ ಗಂಡನ ತಾಯಿಗೂ ಸಮಭಾಗ ಇರುತ್ತದೆ. ನಿಮ್ಮ ತಂಗಿ ತನ್ನ ಭಾಗಕ್ಕೆ ಕೇಸು ಹಾಕಬಹುದು. ಅಥವಾ ತನ್ನ ಭಾಗದ ಬಗ್ಗೆ ತನಗೆ ಬೇಕಾದವರಿಗೆ ( ಉದಾಹರಣೆಗೆ: ತನ್ನನ್ನು ನೋಡಿಕೊಂಡ ಹುಡುಗಿಗೆ) ವಿಲ್ ಸಹ ಮಾಡಬಹುದು.