ದಾಂಪತ್ಯ ಜೀವನಕ್ಕೆ ಅಡಿ ಇಟ್ಟ ಖ್ಯಾತ ನಟಿ ಮಹಾಲಕ್ಷ್ಮೀ, ನಿರ್ಮಾಪಕ ರವೀಂದರ್​ ಚಂದ್ರಶೇಖರನ್​

marriage
Published on

ಚೆನ್ನೈ: ತಮಿಳು ಚಿತ್ರರಂಗದಲ್ಲಿ ನಟಿ, ನಿರೂಪಕಿಯಾಗಿ ಖ್ಯಾತಿ ಪಡೆದಿರುವ ಮಹಾಲಕ್ಷ್ಮೀ ಮತ್ತು ಖ್ಯಾತ ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಿರುಪತಿಯಲ್ಲಿ ಈ ಮದುವೆ ಕಾರ್ಯ ನಡೆದಿದೆ.

ಇಬ್ಬರಿಗೂ ಇದು ಎರಡನೇ ಮದುವೆಯಾಗಿದೆ. ‘ನನ್ನ ಜೀವನದಲ್ಲಿ ನಿಮ್ಮನ್ನು ಪಡೆದುಕೊಳ್ಳಲು ನಾನು ತುಂಬಾ ಅದೃಷ್ಟ ಮಾಡಿದ್ದೆ. ನನ್ನ ಜೀವನದಲ್ಲಿ ನೀವು ಪ್ರೀತಿ ತುಂಬಿದ್ದೀರಿ. ಲವ್​ ಯೂ’ ಎಂದು ಮಹಾಲಕ್ಷ್ಮೀ ಬರೆದುಕೊಂಡಿದ್ದಾರೆ. ಈ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ.

ಮಹಾಲಕ್ಷ್ಮೀ ಅವರು ಕಿರುತೆರೆ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ವಾಣಿ ರಾಣಿ, ಆಫೀಸ್‌, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ಪ್ರಸ್ತುತ ಅವರು ನಟಿಸಿರುವ ಮಹಾರಸಿ ಎಂಬ ಧಾರಾವಾಹಿ ಪ್ರಸಾರವಾಗುತ್ತಿದೆ. ರವೀಂದರ್‌ ಚಂದ್ರಶೇಖರನ್‌ ಅವರು 'ನಟ್ಪುನ ಎನ್ನಡು ಥೆರಿಯುಮ', 'ಮುರುಂಗೈಕೈ ಚಿಪ್ಸ್', 'ವಿಡಿಯುಮ್‌ ವಾರೈ ಕಾಥಿರು' ಮುಂತಾದ ಸಿನಿಮಾಗಳನ್ನು ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

ರವೀಂದರ್ ನಿರ್ಮಾಣದ ‘ವಿಡಿಯುಮ್‌ ವಾರೈ ಕಾಥಿರು’ ಸಿನಿಮಾದಲ್ಲೂ ಮಹಾಲಕ್ಷ್ಮೀ ಅಭಿನಯಿಸಿದ್ದರು. ಆ ಚಿತ್ರದಲ್ಲಿ ವಿದಾರ್ಥ್‌ ಮತ್ತು ವಿಕ್ರಾಂತ್ ಪ್ರಮುಖ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಮದುವೆಗೆ ಚಿತ್ರರಂಗದವರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net