More

    ಹತ್ತು ದಿನಗಳಲ್ಲಿ ಈ 13 ಚಿತ್ರ ನೋಡಿದರೆ ನಿಮಗೆ ಸಿಗುತ್ತೆ 96 ಸಾವಿರ ರೂ! ಧೈರ್ಯ ಇದೆಯಾ?

    ವಾಷಿಂಗ್ಟನ್: ಸಿನಿಮಾ ನೋಡುವುದು ಎಂದರೆ ಅನೇಕ ಮಂದಿಗೆ ಬಹಳ ಪ್ರೀತಿ. ಅದರಲ್ಲಿಯೂ ಭಯಾನಕ ಚಿತ್ರ (ಹಾರರ್‌ ಫಿಲ್ಮ್‌) ನೋಡುವುದು ಕೆಲವರಿಗೆ ತುಂಬಾ ಇಷ್ಟ.

    ಅಂಥವರಿಗೆ ಒಂದು ದೊಡ್ಡ ಆಫರ್‌ ಅನ್ನು ಅಮೆರಿಕದ ಫೈನಾನ್ಸ್ ಬುಝ್ ಕಂಪೆನಿ ನೀಡಿದೆ. ಅದೇನೆಂದರೆ 10 ದಿನಗಳಲ್ಲಿ 13 ಹಾರರ್‌ ಫಿಲ್ಮ್‌ಗಳನ್ನು ನೋಡಿದರೆ ಅಂಥವರಿಗೆ 1,300 ಅಮೆರಿಕನ್‌ ಡಾಲರ್ (ಸುಮಾರು 96 ಸಾವಿರ ರೂ.) ನೀಡುವುದಾಗಿ ಕಂಪೆನಿ ಘೋಷಿಸಿದೆ.

    ಬರುವ ಅಕ್ಟೋಬರ್‌ನಲ್ಲಿ ಈ ಮೊತ್ತ ನೀಡಲಾಗುವುದು. ಅಲ್ಲಿಯವರೆಗೆ 10 ದಿನಗಳಲ್ಲಿ ನಾವು ಹೇಳಿರುವ 13 ಚಿತ್ರಗಳನ್ನು ನೋಡಬೇಕು ಎಂದು ಕಂಪೆನಿ ಹೇಳಿದೆ. ಇಷ್ಟು ದೊಡ್ಡ ಮೊತ್ತವನ್ನು ಕಂಪೆನಿ ನೀಡಲು ಕಾರಣವೇನೆಂದರೆ, ಎಷ್ಟೇ ಗಟ್ಟಿ ಛಾತಿಯುಳ್ಳವರೇ ಆಗಿದ್ದರೂ, ಭೂತ ಪ್ರೇತಗಳಿಗೆ ಭಯಪಡದೇ ಇವೆಲ್ಲಾ ಸುಳ್ಳೆ ಎಂದು ಹೇಳುವವರೂ ಕೂಡ ಈ ಚಿತ್ರಗಳನ್ನು ಒಂದರ ಮೇಲೊಂದರಂತೆ ನೋಡಿದರೆ ಗಡಗಡ ನಡುವುದು ಖಂಡಿತ. ಇಷ್ಟೂ ಚಿತ್ರಗಳನ್ನು ಪ್ರತಿನಿತ್ಯ ನೋಡಲು ಸಾಧ್ಯವೇ ಇಲ್ಲ ಎನ್ನುವುದು ಕಂಪೆನಿಯ ವಾದ.

    ಅಷ್ಟಕ್ಕೂ ಇಂಥದ್ದೊಂದು ಆಫರ್‌ ನೀಡಿರಲು ಕಾರಣ, ದುಬಾರಿ ಬಜೆಟ್ ಮತ್ತು ಕಡಿಮೆ ಬಜೆಟ್ ಸಿನಿಮಾಗಳ ಪೈಕಿ ಯಾವುದು ಜಾಸ್ತಿ ಭಯ ಮೂಡಿಸುತ್ತದೆ ಎಂಬುದನ್ನು ಅಧ್ಯಯನ ಮಾಡಬೇಕಿದೆಯಂತೆ. ಅದಕ್ಕಾಗಿ ಈ 13 ಚಲನಚಿತ್ರಗಳನ್ನು ವೀಕ್ಷಿಸುವ ವ್ಯಕ್ತಿಗಳ ಹೃದಯ ಬಡಿತವನ್ನು ಫಿಟ್‍ಬಿಟ್ ಬಳಸಿ ಮೇಲ್ವಿಚಾರಣೆ ಮಾಡಲಾಗುತ್ತದೆ.

    ನಿಮಗೆ ಈ ಧೈರ್ಯ ಇದೆಯೆ? ಹಾಗಿದ್ದರೆ ಸೆ.26ರ ಒಳಗಡೆ ಹೆಸರನ್ನು ನೋಂದಾಯಿಸಬೇಕು. 18 ವರ್ಷ ಮೇಲ್ಪಟ್ಟ ಅಮೆರಿಕದ ವ್ಯಕ್ತಿಗಳಿಗೆ ಮಾತ್ರ ಹೆಸರನ್ನು ನೋಂದಾಯಿಸಲು ಅವಕಾಶವಿದೆ. ಈ ಚಿತ್ರಗಳನ್ನು ನೋಡಲು ಆಯ್ಕೆಯಾಗುವವರಿಗೆ ಸಿನಿಮಾದ ಶೇ.50ರಷ್ಟು ವೆಚ್ಚವನ್ನು ಕಂಪೆನಿ ಭರಿಸಲಿದೆ.

    ನಿಮಗೆ ಸಾಧ್ಯವಿಲ್ಲದಿದ್ದರೆ ಅಮೆರಿಕದಲ್ಲಿ ಇರುವ ನಿಮ್ಮ ಸ್ನೇಹಿತರಿಗೆ, ಹಿತೈಷಿಗಳಿಗೆ, ಕುಟುಂಬಸ್ಥರಿಗೆ ಈ ಮಾಹಿತಿಯನ್ನು ನೀಡಿ ಎಂದು ಕಂಪೆನಿ ಹೇಳಿದೆ.

    ಆಸಕ್ತರು ಈ ಲಿಂಕ್‌ ಕ್ಲಿಕ್‌ ಮಾಡುವ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. https://financebuzz.com/get-paid-to-watch-scary-movies

    13 ಸಿನಿಮಾಗಳು ಇವು:
    Saw, Amityville Horror, A Quiet Place, A Quiet Place Part 2, Candyman, Insidious. The Blair Witch Project. Sinister, Get Out, The Purge, Halloween (2018), Paranormal Activity, Annabelle.

    ಗಂಟೆಗಟ್ಟಲೆ ಬಾಲಕಿಯ ಕೊರಳಿಗೆ ಸುತ್ತಿಕೊಂಡ ನಾಗರಹಾವು- ಅಸಹಾಯಕನಾದ ಉರಗ ತಜ್ಞ!

    ಎಸ್‌ಬಿಐ ಗ್ರಾಹಕರಾಗಿದ್ದರೆ ಕೂಡಲೇ ಈ ಕೆಲಸ ಮಾಡಿ: ಇಲ್ಲದಿದ್ದರೆ ಸಮಸ್ಯೆಗೆ ಸಿಲುಕಲಿದೆ ಬ್ಯಾಂಕ್‌ ಅಕೌಂಟ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts