

ಮಾಸ್ಕೋ: ಜಗತ್ತಿನಲ್ಲಿಯೇ ಮೊತ್ತ ಮೊದಲಿಗನಾಗಿ ಕರೊನಾ ಲಸಿಕೆ ಕಂಡು ಹಿಡಿದಿರುವುದಾಗಿ ಬೀಗುತ್ತಿರುವ ರಷ್ಯಾದಲ್ಲಿ ಹೊಸ ಬೆಳವಣಿಗೆಯೊಂದು ಅಲ್ಲಿನ ಸರ್ಕಾರಕ್ಕೆ ತಲೆನೋವಾಗಿ ಪರಿಗಣಿಸಿದೆ.
ಪ್ರಯೋಗಾರ್ಥ ಪರೀಕ್ಷೆಗಳ ಫಲಿತಾಂಶ ಬರುವುದಕ್ಕೂ ಮುನ್ನವೇ ಕರೊನಾ ಲಸಿಕೆ ನೋಂದಣಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ ಮಾತ್ರವಲ್ಲ, ಆರೋಗ್ಯ ಸಚಿವಾಲಯದ ಎಥಿಕ್ಸ್ ಕಮಿಟಿಯಲ್ಲಿದ್ದ ದೇಶದ ಖ್ಯಾತ ಶ್ವಾಸಕೋಶ ತಜ್ಞ ಡಾ. ಅಲೆಕ್ಸಾಂಡರ್ ಚುಕಾಲಿನ್ ರಾಜೀನಾಮೆ ಸಲ್ಲಿಸಿದ್ದಾರೆ.
ಕರೊನಾ ಲಸಿಕೆ ನೋಂದಣಿಯನ್ನು ತಡೆಗಟ್ಟಬೇಕೆಂದುಬುದು ಅವರ ಉದ್ದೇಶವಾಗಿತ್ತು. ಆದರೆ ಆ ಕಾರ್ಯದಲ್ಲಿ ವಿಫಲವಾದ ಕಾರಣ ರಾಜೀನಾಮೆ ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀಣಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ಸಮಿತಿಯಿಂದ ರಾಜೀನಾಮೆ ಅಂಗೀಕಾರವಾಗುವ ಮುನ್ನವೇ, ಸರ್ಕಾರ ಹಾಗೂ ಸಮಿತಿ ವಿರುದ್ಧ ಸಿಡಿದೆದಿದ್ದಾರೆ. ಲಸಿಕೆ ನೋಂದಣಿಗೂ ಮುನ್ನ ಸಂಸತ್ನಲ್ಲಿ ಅಂಗೀಕಾರವಾದ ನಿಯಮಾವಳಿಗಳು ಹಾಗೂ ಅಂತಾರಾಷ್ಟ್ರೀಯ ಮಾನದಂಡಗಳನ್ನು ಪಾಲಿಸಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಮನುಷ್ಯನ ಆರೋಗ್ಯದ ಸುರಕ್ಷತೆ ಎಲ್ಲಕ್ಕೂ ಮುಖ್ಯ ಅದನ್ನೇ ಇಲ್ಲಿ ಕಡೆಗಣಿಸಲಾಗಿದೆ ಯಾವುದೇ ನಿಯಮಗಳನ್ನು ಪಾಲಿಸದೇ ಲಸಿಕೆ ನೋಂದಣಿಯಾಗುವಲ್ಲಿ ದೇಶದ ಪ್ರಮುಖ ವೈದ್ಯರು ಅದರಲ್ಲೂ ಲಸಿಕೆ ಅಭಿವೃದ್ಧಿಪಡಿಸಿರುವ ಗಾಮೇಲಿಯಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಅಲೆಕ್ಸಾಂಡರ್ ಗಿಂಟ್ಸ್ಬರ್ಗ್ ಹಾಗೂ ರಷ್ಯಾ ಸೇನೆಯ ಉನ್ನತ ವೈರಾಣು ತಜ್ಞ ಸರ್ಗೆಯ್ ಬೋರಿಸ್ವಿಚ್ ಶಾಮೀಲಾಗಿದ್ದಾರೆ ಎಂದು ಅಲೆಕ್ಸಾಂಡರ್ ಆರೋಪಿಸಿದ್ದಾರೆ.
ರಷ್ಯಾದ ಲಸಿಕೆ ಪಾಶ್ಚಿಮಾತ್ಯ ದೇಶಗಳ ಟೀಕೆಗೆ ಗುರಿಯಾಗಿರುವ ನಡುವೆಯೇ ಈ ಬೆಳವಣಿಗೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ಗೆ ಕೊಂಚ ಮುಜುಗರ ಉಂಟುಮಾಡಿದೆ.