

ನವದೆಹಲಿ: ಕೋವಿಡ್ ಕಾಯಿಲೆ ತಡೆಗಟ್ಟುವ ಹಿನ್ನೆಲೆಯಲ್ಲಿ ಕರೊನಾ ಲಸಿಕೆ ಖರೀದಿ ಹಾಗೂ ವಿತರಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.
ಕರೊನಾ ಲಸಿಕೆಯನ್ನು ತಾನೇ ಖರೀದಿಸಿ ಎಲ್ಲ ರಾಜ್ಯಗಳಿಗೆ ವಿತರಣೆ ಮಾಡಲಿದೆ. ಕರೊನಾ ಲಸಿಕೆ ವಿಚಾರವಾಗಿ ರಚಿಸಲಾಗಿರುವ ಕಾರ್ಯಪಡೆ ಈ ನಿರ್ಧಾರ ಕೈಗೊಂಡಿದೆ.
ಲಸಿಕೆ ವಿತರಣೆಯಲ್ಲಿ ಗೊಂದಲ ಉಂಟಾಗದಿರಲು ರಾಜ್ಯ ಸರ್ಕಾರಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಲಸಿಕೆ ಸಂಗ್ರಹಕ್ಕೆ ಬೇರಾವ ಮಾರ್ಗಗಳನ್ನು ಕಂಡುಕೊಳ್ಳದಂತೆ ಕೇಂದ್ರ ಆರೋಗ್ಯ ಸಚಿವಾಲಯದ ಮೂಲಕ ಸೂಚಿಸಲಾಗಿದೆ. ರಾಜ್ಯ ನೀತಿ ಆಯೋಗದ ಡಾ. ವಿ.ಕೆ.ಪಾಲ್ ನೇತೃತ್ವದಲ್ಲಿ ನಡೆದ ಟಾಕ್ಸ್ಫೋರ್ಸ್ ಸಭೆಯಲ್ಲಿ ಈ ನಿರ್ದೇಶನಗಳನ್ನು ನೀಡಲಾಗಿದೆ.
ಈ ನಡುವೆ, ಭಾರತದ ಕೊವಾಕ್ಸಿನ್ ಕ್ಲಿನಿಕಲ್ ಟ್ರಯಲ್ನ ಆರಂಭಿತ ಹಂತದ ಫಲಿತಾಂಶಗಳು ಗೊತತ್ಆಗಿದ್ದು, ಮಾನವರ ಬಳಕೆಗೆ ಸುರಕ್ಷಿತ ಎನಿಸಿವೆ. ಮುಂದಿನ ಹಂತದಲ್ಲಿ ಅದರ ಕ್ಷಮತೆ ಬಗ್ಗೆ ಪರೀಕ್ಷೆ ನಡೆಯಬೇಕಿದೆ. ಇದು ಆಶಾದಾಯಕ ಬೆಳವಣಿಗೆ ಎನಿಸಿದೆ.
ಇದಲ್ಲದೇ, ಕ್ಲಿನಿಕಲ್ ಹಂತದಲ್ಲಿರುವ ಇತರ ಲಸಿಕೆಗಳ ಅಭಿವೃದ್ಧಿ ಹಂತಗಳ ಬಗ್ಗೆಯೂ ಸಮಿತಿ ನಿಗಾ ವಹಿಸಿದೆ. ಲಸಿಕೆಯನ್ನು ಯಾರಿಗೆ ಮೊದಲು ನೀಡಬೇಕು ಎಂಬುದನ್ನು ಈ ಸಮಿತಿಯೇ ನಿರ್ಧರಿಸಲಿದೆ.
ಸರ್ಕಾರವೇ ಔಷಧ ಕಂಪನಿಗಳಿಂದ ಲಸಿಕೆಯನ್ನು ಖರೀದಿಸಿ ಸಾರ್ವಜನಿಕರಿಗೆ ನೀಡಲಿದೆ ಎಂದು ಪುಣೆಯ ಸಿಎಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಆದಾರ್ ಪೂನಾವಾಲಾ ಈ ಹಿಂದೆ ಸುಳಿವು ನೀಡಿದ್ದರು.