ರಷ್ಯಾ ಕರೊನಾ ಲಸಿಕೆಗೆ 20 ದೇಶಗಳಿಂದ ಮುಂಗಡ ಬುಕಿಂಗ್​; 100 ಕೋಟಿ ಡೋಸ್​ಗಳಿಗೆ ಬಂದಿದೆ ಬೇಡಿಕೆ

russia vaccine
Published on

ಮಾಸ್ಕೋ: ಕರೊನಾ ನಿಗ್ರಹಕ್ಕಾಗಿ ವಿಶ್ವದಲ್ಲಿಯೇ ಮೊದಲ ಲಸಿಕೆ ಸಿದ್ಧಪಡಿಸಿ, ತನ್ನ ದೇಶದಲ್ಲಿ ನೋಂದಣಿ ಮಾಡಿಸಿರುವ ರಷ್ಯಾದ ನಡವಳಿಕೆ ಬಗ್ಗೆ ಪ್ರಮುಖ ರಾಷ್ಟ್ರಗಳು ಸಂದೇಹ ವ್ಯಕ್ತಪಡಿಸಿವೆ. ಆದರೆ, ಇದಕ್ಕೆ ಭಾರಿ ಬೇಡಿಕೆ ವ್ಯಕ್ತವಾಗಿದೆ ಎಂದು ರಷ್ಯಾ ಹೇಳಿಕೊಂಡಿದೆ.

ಕೋವಿಡ್​ ಲಸಿಕೆಯನ್ನು ಸ್ಪುಟ್ನಿಕ್​ ಉಪಗ್ರಹದ ನೆನಪಿನಲ್ಲಿ ಸ್ಪುಟ್ನಿಕ್​ ವಿ ಎಂದು ಹೆಸರಿಸಿದೆ ಸಚಿವ ಕಿರಿಲ್ ಡಿಮಿಟ್ರಿಯೇವ್​ ತಿಳಿಸಿದ್ದಾರೆ. ಜತೆಗೆ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ ಬುಧವಾರ ( ಆಗಸ್ಟ್​ 12) ಆರಂಭವಾಗಲಿದೆ ಹಾಗೂ ಬೃಹತ್​ ಪ್ರಮಾನದಲ್ಲಿ ಲಸಿಕೆ ಉತ್ಪಾದನೆ ಕಾರ್ಯಕ್ಕೆ ಸೆಪ್ಟೆಂಬರ್​ನಲ್ಲಿ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಗಾಮೇಲಿಯಾ ರಾಷ್ಟ್ರೀಯ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ರಷ್ಯನ್​ ವಿದೇಶಗಳಿಂದಲೂ ಭಾರಿ ಬೇಡಿಕೆ ವ್ಯಕ್ತವಾಗಿದೆ. ಆರಂಭಿಕ ಹಂತದಲ್ಲಿ 20 ದೇಶಗಳು 100 ಕೋಟಿ ಡೋಸ್​ಗೆ ಬೇಡಿಕೆ ಸಲ್ಲಿಸಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ವಿದೇಶಗಳ ಸಹಭಾಗಿತ್ವದಲ್ಲಿ ಐದು ದೇಶಗಳಲ್ಲಿ ಪ್ರತಿವರ್ಷ 50 ಕೋಟಿ ಡೋಸ್​ ಲಸಿಕೆಗಳನ್ನು ಉತ್ಪಾದಿಸಲು ರಷ್ಯಾ ಸಿದ್ಧವಿದೆ ಎಂದು ಡಿಮಿಟ್ರಿಯೇವ್​ ಘೋಷಿಸಿದ್ದಾರೆ.

ಮಾಧ್ಯಮಗಳಲ್ಲಿ ಅತ್ಯಂತ ಯೋಜಿತ ಹಾಗೂ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿರುವ ದಾಳಿಗಳು ರಷ್ಯಾದ ಮನ್ನಣೆಯನ್ನು ಕಸಿಯುವ ಯತ್ನಗಳಾಗಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಬಾಹ್ಯಾಕಾಶ ಕ್ಷೇತ್ರದ ಸಂಶೋಧನೆಗಾಗಿ ಅಮೆರಿಕ ಹಾಗೂ ಸೋವಿಯತ್​ ರಷ್ಯಾ ನಡುವೆ ಇದ್ದ ಸಹಕಾರವನ್ನು ಸ್ಮರಿಸಿದ ಡಿಮಿಟ್ರಿಯೇವ್​, ರಷ್ಯಾದೊಮದಿಗೆ ರಚನಾತ್ಮಕ ಮಾತುಕತೆಯಲ್ಲಿ ತೊಡಗಿ, ತನ್ನ ಪ್ರಜೆಗಳಿಗೆ ಭವಿಷ್ಯದಲ್ಲಿ ಅತ್ಯುನ್ನತ ಗುಣಮಟ್ಟದ, ಮಹಾಮಾರಿಯಿಂದ ಕಾಪಾಡುವ ಲಸಿಕೆ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net