More

    ಬಿಎಸ್ಸೆನೆಲ್​ ನೌಕರರು ದೇಶದ್ರೋಹಿಗಳು; ಎಲ್ಲರೂ ಮನೆಗೆ ಹೋಗ್ತಾರೆ; ಬಿಜೆಪಿ ಸಂಸದನ ಎಚ್ಚರಿಕೆ…!

    ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್​ ಸಂಚಾರ್​ ನಿಗಮದ (ಬಿಎಸ್​ಎನ್​ಎಲ್​) 88 ಸಾವಿರಕ್ಕೂ ಅಧಿಕ ಮನೆಗೆ ಕಳುಹಿಸ್ತಾರೆ; ಕಂಪನಿಯನ್ನು ಖಾಸಗೀಕರಣ ಮಾಡ್ತಾರೆ…!

    ಇದು ಬಿಜೆಪಿ ಸಂಸದ ಅನಂತಕುಮಾರ್​ ಹೆಗಡೆ ನೀಡಿರುವ ಹೇಳಿಕೆ. ಬಿಎಸ್​ಎನ್​ಎಲ್​ ಸಿಬ್ಬಂದಿಯನ್ನು ದೇಶದ್ರೋಹಿಗಳು ಎಂದೇ ಸಂಬೋಧಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

    ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಡಿಯೋ ಸಂವಾದದ (ವರ್ಚುಯಲ್​) ಮೂಲಕ ಮಾತನಾಡಿರುವ ಅನಂತಕುಮಾರ್​ ಹೆಗಡೆ ಈ ಹೇಳಿಕೆ ನೀಡಿದ್ದಾರೆಂದು ಹೇಳಲಾಗಿದೆ.

    ಇದನ್ನೂ ಓದಿ; ಹಿಂದು ಉತ್ತರಾಧಿಕಾರ ಕಾಯ್ದೆ ಪೂರ್ವಾನ್ವಯವಾಗುತ್ತೆ; ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಸಮಾನ ಅಧಿಕಾರ; ಸುಪ್ರೀಂ ಕೋರ್ಟ್​ ತೀರ್ಪು 

    ಸಂಕಷ್ಟದಲ್ಲಿರುವ ಸಂಸ್ಥೆಯನ್ನು ಉಳಿಸಲು ಸಿಬ್ಬಂದಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲ. ನೌಕರರು ಸೋಮಾರಿ, ಅಸಮರ್ಥರಾಗಿರುವುದರಿಂದಲೇ ಸರ್ಕಾರಿ ಸಂಸ್ಥೆ ಅಧೋಗತಿಗೆ ಇಳಿದಿದೆ. ಹೀಗಾಗಿ ಅವರನ್ನು ದೇಶದ್ರೋಹಿಗಳೆಂದೇ ಕರೆಯುತ್ತೇನೆ ಹೇಳಿರುವುದಾಗಿ ವರದಿಯಾಗಿದೆ.

    ಬಿಎಸ್​ಎನ್​ಎಲ್​ ದೇಶದ್ರೋಹಿಗಳಿಂದಲೇ ತುಂಬಿ ಹೋಗಿದೆ. ಸರ್ಕಾರ ಅವರಿಗೆ ಹಣ ನೀಡಿದೆ, ಮೂಲಸೌಕರ್ಯ ಒದಗಿಸಿದೆ. ಜನರಿಗೆ ಸೇವೆ ಬೇಕಾಗಿದ್ದರೂ ಕಾರ್ಯನಿರ್ವಹಿಸುತ್ತಿಲ್ಲ. ಪ್ರಧಾನಿ ಡಿಜಿಟಲ್​ ಇಂಡಿಯಾದ ಕನಸು ಹೊಂದಿದ್ದಾರೆ. ಇದಕ್ಕಾಗಿ ಅಗತ್ಯ ಅನುದಾನ ಬಿಡುಗಡೆ ಮಾಡಿದ್ದಾರೆ. ಹೀಗಿದ್ದರೂ ಇವರು ಕೆಲಸ ಮಾಡುತ್ತಿಲ್ಲ ಎಂದು ದೂರಿದರು.

    ಇದನ್ನೂ ಓದಿ; ರಷ್ಯಾದಲ್ಲಿ ನೋಂದಣಿಯಾಯ್ತು ವಿಶ್ವದ ಪ್ರಪ್ರಥಮ ಕರೊನಾ ಲಸಿಕೆ; ಅಧ್ಯಕ್ಷ ಪುಟಿನ್​ ಮಗಳಿಗೆ ಚುಚ್ಚುಮದ್ದು ಪ್ರಯೋಗ 

    ಸಂಸ್ಥೆಯನ್ನು ಸರಿಪಡಿಸಲು ಇರುವ ಒಂದೇ ಮಾರ್ಗವೆಂದರೆ ಖಾಸಗಿಯವರಿಗೆ ವಹಿಸುವುದು ಹಾಗೂ 88 ಸಾವಿರ ನೌಕರರನ್ನು ವಜಾಗೊಳಿಸುವುದು. ಸರ್ಕಾರ ಹೀಗೆ ಮಾಡಲಿದೆ ಎಂದು ಅನಂತಕುಮಾರ್​ ಹೇಳಿದ್ದಾರೆ.

    ರಷ್ಯಾ ಕರೊನಾ ಲಸಿಕೆ ಬಗ್ಗೆ ಜಗತ್ತಿಗೆ ಸಂಶಯ; 9 ತಿಂಗಳಲ್ಲಿ ಚುಚ್ಚುಮದ್ದು ತಯಾರಾಗಿದ್ದೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts