S-400 ಕ್ಷಿಪಣಿ ವ್ಯವಸ್ಥೆಗಳ ಹೆಚ್ಚಿನ ಪೂರೈಕೆಗಾಗಿ 'ಭಾರತ'ದೊಂದಿಗೆ 'ರಷ್ಯಾ' ಮಾತುಕತೆ| missile

s-400
Published on

ಮಾಸ್ಕೋ: ಅಮೆರಿಕ ಸುಂಕ ಸಮರದ ಮಧ್ಯೆಯೂ ಭಾರತ ಮತ್ತು ರಷ್ಯಾ S-400 ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಗಳ ಹೆಚ್ಚಿನ ಪೂರೈಕೆಗಾಗಿ ಮಾತುಕತೆ ನಡೆಸುತ್ತಿವೆ ಎಂದು ರಷ್ಯಾದ ಹಿರಿಯ ರಕ್ಷಣಾ ರಫ್ತು ಅಧಿಕಾರಿಯನ್ನು ಉಲ್ಲೇಖಿಸಿ TASS ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದು ಭಾರತ ಮತ್ತು ರಷ್ಯಾದ ಸಂಬಂಧವನ್ನು ಒತ್ತಿ ಹೇಳುತ್ತದೆ.

ಫ್ರಾನ್ಸ್ ಮತ್ತು ಇಸ್ರೇಲ್‌ನಿಂದ ಹೆಚ್ಚುತ್ತಿರುವ ಶಸ್ತ್ರಾಸ್ತ್ರ ಖರೀದಿಗಳ ನಡುವೆಯೂ, ರಷ್ಯಾ ಭಾರತದ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರನಾಗಿ ಉಳಿದಿದೆ. ಸ್ಟಾಕ್‌ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆಯ ಪ್ರಕಾರ, 2020 ಮತ್ತು 2024 ರ ನಡುವೆ, ಭಾರತದ ಶಸ್ತ್ರಾಸ್ತ್ರ ಆಮದುಗಳಲ್ಲಿ ಶೇಕಡಾ 36 ರಷ್ಟು ರಷ್ಯಾದಿಂದ ಬಂದಿವೆ. ಸುದೀರ್ಘ ಕಾರ್ಯತಂತ್ರದ ಪಾಲುದಾರರಾದ ಭಾರತ ಮತ್ತು ರಷ್ಯಾ ಈ ಹಿಂದೆ ಹಲವಾರು ರಕ್ಷಣಾ ಯೋಜನೆಗಳಲ್ಲಿ ಸಹಕರಿಸಿವೆ ಮತ್ತು ಇದರಲ್ಲಿ ಟಿ-90 ಟ್ಯಾಂಕ್‌ಗಳು ಮತ್ತು ಎಂಕೆಐ ಫೈಟರ್ ಜೆಟ್‌ಗಳ ಪರವಾನಗಿ ಪಡೆದ ಉತ್ಪಾದನೆ, ಮಿಗ್ -29 ಮತ್ತು ಕಾಮೋವ್ ಹೆಲಿಕಾಪ್ಟರ್‌ಗಳ ಪೂರೈಕೆ, ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ಸೇರಿವೆ.

ಇನ್ನೂ ಈ ಬಗ್ಗೆ ರಷ್ಯಾ ಫೆಡರಲ್ ಸರ್ವಿಸ್ ಫಾರ್ ಮಿಲಿಟರಿ-ಟೆಕ್ನಿಕಲ್ ಕೋಆಪರೇಷನ್ ಮುಖ್ಯಸ್ಥ ಡಿಮಿಟ್ರಿ ಶುಗಾಯೆವ್ ಪ್ರತಿಕ್ರಿಯಿಸಿದ್ದು, ಭಾರತವು ಈಗಾಗಲೇ S-400 ಅನ್ನು ನಿರ್ವಹಿಸುತ್ತಿದೆ. ಹಾಗೂ ಮತ್ತಷ್ಟು ವ್ಯವಸ್ಥೆಗಳ ಹೆಚ್ಚಿನ ಪೂರೈಕೆಗಾಗಿ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ಆಪರೇಷನ್ ಸಿಂಧೂರ್ ಸಮಯದಲ್ಲಿ, ಭಾರತೀಯ ಸೇನೆಯು ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಂಡಿತು ಮತ್ತು ರಷ್ಯಾದ S-400 ವಾಯು ರಕ್ಷಣಾ ವ್ಯವಸ್ಥೆಯು ಹಲವಾರು ಒಳಬರುವ ಕ್ಷಿಪಣಿಗಳನ್ನು ತಡೆದು ನಾಶಪಡಿಸಿದ ಕೀರ್ತಿಗೆ ಪಾತ್ರವಾಯಿತು.

S-400 ಕ್ಷಿಪಣಿ ಪಾತ್ರವೇನು.?

(ಏಜೆನ್ಸೀಸ್)

4. ಇದರಿಂದ ಚಿಕ್ಕದಾಗಿ ಹಾರುವ ವಸ್ತುಗಳನ್ನು ಪತ್ತೆ ಹಚ್ಚಬಹುದು ಮತ್ತು ಟ್ರ್ಯಾಕ್ ಮಾಡಬಹುದು.

3. ಇದು ವಾಯು ವಿರೋಧಿ ಕ್ಷಿಪಣಿ ಉಡಾವಣಾ ಯಂತ್ರಗಳು ಮತ್ತು ನಿಯಂತ್ರಣ ಕ್ಷಿಪಣಿಗಳನ್ನು ಒಳಗೊಂಡಿದೆ.

2. ಇದು ಸಮುದ್ರ ಮಟ್ಟದಿಂದ 30 ಕಿಲೋಮೀಟರ್ ಎತ್ತರದ ಗುರಿಗಳನ್ನು ಹೊಡೆಯಬಹುದು.

1. S-400 ರಾಡಾರ್‌ಗಳು 300 ಗುರಿ ಟ್ರ್ಯಾಕ್‌ಗಳನ್ನು ನಿರ್ವಹಿಸುತ್ತವೆ ಮತ್ತು ಏಕಕಾಲದಲ್ಲಿ 36 ಬೆದರಿಕೆಗಳನ್ನು ಎದುರಿಸಬಲ್ಲವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net