2025 ರ ಕೊನೆಯ ಚಂದ್ರಗ್ರಹಣ; ಸೆ.7 ರಂದು ಭಾರತದಲ್ಲಿ ಗೋಚರಿಸುವ 'ರಕ್ತ ಚಂದ್ರ'ನನ್ನು ವೀಕ್ಷಿಸುವುದೇಗೆ?eclipse

eclipse
Published on

eclipse ; ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಸೆಪ್ಟೆಂಬರ್ 7 ರ ಭಾನುವಾರದಂದು ಸಂಭವಿಸಲಿದೆ. ಈ ಚಂದ್ರಗ್ರಹಣವು ಭಾರತದಲ್ಲಿ ಸೆಪ್ಟೆಂಬರ್ 7 ರಂದು ರಾತ್ರಿ 9:58 ಕ್ಕೆ ಪ್ರಾರಂಭವಾಗಿ ಮರುದಿನ ಬೆಳಗ್ಗೆ 1:26 ಕ್ಕೆ ಕೊನೆಗೊಳ್ಳುತ್ತದೆ.

ಆ ದಿನ ಚಂದ್ರನು ಗಾಢ ಕೆಂಪು ಬಣ್ಣಕ್ಕೆ ತಿರುಗಲಿದ್ದಾನೆ. ಎಲ್ಲಾ ಆಕಾಶವೀಕ್ಷಕರಿಗೆ ಇದು ಸ್ಮರಣೀಯ ಘಟನೆಯಾಗಲಿದೆ ಮತ್ತು ಅವರು ಈ ಕ್ಷಣವನ್ನು ವೀಕ್ಷಿಸಲು ಮತ್ತು ಚಂದ್ರನ ಸೌಂದರ್ಯವನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿಯಬಹುದಾಗಿದೆ. ಏಷ್ಯಾ, ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇತರ ಪ್ರದೇಶಗಳಲ್ಲಿ ಗೋಚರವಾಗಲಿದೆ. ಶತಕೋಟಿ ಜನರು ಈ ಅಪರೂಪದ ದೃಶ್ಯವನ್ನು ವೀಕ್ಷಿಸಲಿದ್ದಾರೆ.

ಚಂದ್ರ ಗ್ರಹಣದ ವಿಶಿಷ್ಟತೆ ಏನು.?

ಖಗೋಳಶಾಸ್ತ್ರಜ್ಞರು ಮತ್ತು ಜ್ಯೋತಿಷಿಗಳ ಪ್ರಕಾರ, ಇದು ಹೆಚ್ಚು ಸಮಯ ಗೋಚರಿಸಲಿದೆ ಎಂದಿದ್ದಾರೆ. ಇದು ಬಹುತೇಕ ಜಗತ್ತಿನಾದ್ಯಂತ ಗೋಚರಿಸಲಿದ್ದು, ಜನರು ಇದನ್ನು ತಮ್ಮ ಬರಿಗಣ್ಣಿನಿಂದ ವೀಕ್ಷಿಸಲು ಸಾಧ್ಯವಾಗಲಿದೆ. ಚಂದ್ರನ ಬಣ್ಣವು ಕೆಂಪು ಬಣ್ಣಕ್ಕೆ ತಿರುಗುವುದರಿಂದ ಇದನ್ನು ರಕ್ತ ಚಂದ್ರ ಎಂದೂ ಸಹ ಕರೆಯುತ್ತಾರೆ. ಭೂಮಿಯು ನೇರ ಸೂರ್ಯನ ಬೆಳಕನ್ನು ಫಿಲ್ಟರ್ ಮಾಡಿದಾಗ, ರಕ್ತ ಚಂದ್ರ ಸಂಭವಿಸುತ್ತದೆ. ಚಂದ್ರನ ಮೇಲ್ಮೈ ಸಂಪೂರ್ಣವಾಗಿ ಗ್ರಹದ ನೆರಳಿನಿಂದ ಆವೃತವಾಗಿರುತ್ತದೆ. ಸೂರ್ಯನ ಬೆಳಕು ಭೂಮಿಯ ವಾತಾವರಣಕ್ಕೆ ಪ್ರವೇಶಿಸಿದಾಗ, ಇದರ ಬಣ್ಣ ಕೆಂಪಾಗುತ್ತದೆ.

ಗ್ರಹಣವನ್ನು ವೀಕ್ಷಿಸುವುದೇಗೆ?

ನೀವು ಇರುವ ಸ್ಥಳದಲ್ಲಿ ಮೋಡ ಕವಿದ ವಾತಾವರಣವಿದ್ದರೆ, ಲೈವ್ ಸ್ಟ್ರೀಮ್‌ಗಳನ್ನು ವೀಕ್ಷಿಸಿ ಅಥವಾ ಸಮುದಾಯ ವೀಕ್ಷಣಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ.

ಚಂದ್ರನ ಮೇಲ್ಮೈಯನ್ನು ಮತ್ತು ಅದರ ಬಣ್ಣಗಳ ಇಳಿಜಾರುಗಳನ್ನು ಸುಂದರವಾಗಿ ನೋಡಲು, ಬೈನಾಕ್ಯುಲರ್ ಅಥವಾ ದೂರದರ್ಶಕವನ್ನು ಬಳಸಿ.

ಪೂರ್ಣ ದೃಶ್ಯ ನೋಡಲು ಹೆಚ್ಚಿನ ಸಮಯ ಬೇಕಾಗಿರುವುದರಿಂದ ಆರಾಮದಾಯಕ ಉಡುಪುಗಳನ್ನು ಧರಿಸಿ.

ಚಂದ್ರ ಗ್ರಹಣದ ಸಂಪೂರ್ಣ ದೃಶ್ಯವನ್ನು ವೀಕ್ಷಿಸಲು ಆದಷ್ಟು ಬೇಗನೆ ಆ ಸ್ಥಳಕ್ಕೆ ಹೋಗಿ.

ಚಂದ್ರನನ್ನು ನೋಡಲು ಕಡಿಮೆ ಬೆಳಕಿರುವ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಿ

ಚಂದ್ರ ಗ್ರಹಣದಿಂದ ಪರಿಣಾಮ ಏನು?

ಇನ್ನು ಶಾಸ್ತ್ರದ 9 ಗ್ರಹಗಳಲ್ಲಿ ಸೂರ್ಯನ ನಂತರ ಚಂದ್ರನು ಅತ್ಯಂತ ಮುಖ್ಯವಾದ ಗ್ರಹವಾಗಿದೆ. ಚಂದ್ರನಿಲ್ಲದೆ ಯಾವುದೇ ಲೆಕ್ಕಾಚಾರಗಳನ್ನು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಜ್ಯೋತಿಷ್ಯದಲ್ಲಿ ಚಂದ್ರನಿಗೆ ಪ್ರಮುಖ ಸ್ಥಾನವಿದೆ. ಚಂದ್ರ, ಭೂಮಿಗೆ ಹತ್ತಿರವಾಗಿರುವುದರಿಂದ, ಅದು ನೇರವಾಗಿ ನಮ್ಮ ಮೇಲೆ ಸಣ್ಣ ಪುಟ್ಟ ಪರಿಣಾಮ ಬೀರುತ್ತದೆಯೇ ಹೊರತು ದೊಡ್ಡ ಪ್ರಮಾಣದಲ್ಲಿ ಏನು ಅನಾಹುತ ಆಗಲ್ಲ ಎನ್ನಲಾಗುತ್ತಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net