ಉತ್ತಮ ಭವಿಷ್ಯಕ್ಕಾಗಿ ಪ್ರಮುಖ ಹೂಡಿಕೆ ಅವಕಾಶವಾಗುತ್ತಿದೆ ಗ್ರಾಮೀಣ ಭಾರತ! Rural India

Rural India

Rural India : ಭಾರತದ ಗ್ರಾಮೀಣ ಭಾಗವೂ ಇಂದು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ಮೊದಲು ಗ್ರಾಮೀಣ ಭಾಗವೆಂದರೆ ಕೃಷಿ ಅವಲಂಬಿತ ಆರ್ಥಿಕತೆ ಎಂದೇ ಹೇಳಲಾಗುತ್ತಿತ್ತು. ಆದರೀಗ ಆ ಕಲ್ಪನೆ ಬದಲಾಗುತ್ತಿದೆ. ಬಹು-ವಲಯ ಬೆಳವಣಿಗೆಯ ಇಂಜಿನ್ ಆಗಿ ಗ್ರಾಮೀಣ ಪ್ರದೇಶ ಪರಿವರ್ತನೆಗೊಳ್ಳುತ್ತಿದೆ. ಕಳೆದ ಕೆಲವು ದಶಕಗಳಲ್ಲಿ ಉತ್ಪಾದನೆ, ನಿರ್ಮಾಣ ಮತ್ತು ವ್ಯಾಪಾರದಂತಹ ಕ್ಷೇತ್ರಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಕೃಷಿಯ ಮೇಲಿನ ಅವಲಂಬನೆಯನ್ನು ಅಗಾಧ ಪ್ರಮಾಣದಲ್ಲಿ ಕಡಿಮೆ ಮಾಡುತ್ತಿವೆ. ಮೂಲಸೌಕರ್ಯದಲ್ಲಿನ ಗಮನಾರ್ಹ ಸುಧಾರಣೆಗಳೊಂದಿಗೆ ಗ್ರಾಮೀಣ ಭಾರತವು ಉದಯೋನ್ಮುಖ ಹೂಡಿಕೆಯ ತಾಣವಾಗುತ್ತಿದೆ.

| ಪಿ.ಯು. ಮೋನಪ್ಪ, ಸಂಸ್ಥಾಪಕ, ವಿತ್ತ ಕ್ಯಾಪಿಟಲ್ ಸರ್ವಿಸಸ್

ಸದ್ಯ ಭಾರತದ ಶೇ. 99 ರಷ್ಟು ಹಳ್ಳಿಗಳು ಉತ್ತಮವಾದ ರಸ್ತೆಗಳು, ವಿದ್ಯುತ್ ಮತ್ತು ಸೇತುವೆಗಳ ಸಂಪರ್ಕವನ್ನು ಹೊಂದಿವೆ. ಅಲ್ಲದೆ, ಮೊಬೈಲ್​ ಬಳಕೆಯು ಕೂಡ ಹೆಚ್ಚಾಗಿದ್ದು, ಡಿಜಿಟಲ್ ಸಂಪರ್ಕ ಮನೆ ಮನೆಯನ್ನು ತಲುಪಿದೆ. ಇದರ ಪರಿಣಾಮ ಗ್ರಾಮೀಣ ಭಾರತವು ನಗರ ಮಾರುಕಟ್ಟೆಗಳಿಗೆ ಹತ್ತಿರವಾಗಿದ್ದು, ವ್ಯವಹಾರಗಳಿಗೆ ದೊಡ್ಡ ಬಾಗಿಲು ತೆರೆದುಕೊಂಡಿದೆ. ಎಫ್​ಎಂಸಿಜಿ ( ವೇಗವಾಗಿ ಮಾರಾಟವಾಗುವ ಗ್ರಾಹಕ ಸರಕುಗಳು ) ಯಿಂದ ಇ-ಕಾಮರ್ಸ್‌ವರೆಗೆ ವಿವಿಧ ವಲಯಗಳ ಕಂಪನಿಗಳು ಈ ಅವಕಾಶಗಳನ್ನು ಬಳಸಿಕೊಳ್ಳುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಯುತ್ತಿರುವ ಖರೀದಿ ಶಕ್ತಿಯಿಂದ ಈ ಕಂಪನಿಗಳು ಲಾಭ ಪಡೆಯುತ್ತಿವೆ.

ಇನ್ನು ಗ್ರಾಮೀಣ ಪ್ರದೇಶದಲ್ಲಿ ಸಾಕ್ಷರತಾ ಪ್ರಮಾಣ ಕೂಡ ಸುಧಾರಿಸುತ್ತಿದೆ. ಕೈಗೆಟುಕುವ ಶಿಕ್ಷಣ ಮತ್ತು ಆರೋಗ್ಯ ಸೇವೆಯಿಂದಾಗಿ ಗ್ರಾಮೀಣ ಭಾರತವು ಗಾತ್ರದಲ್ಲಿ ಮಾತ್ರವಲ್ಲದೆ ಆರ್ಥಿಕ ಸಾಮರ್ಥ್ಯದಲ್ಲೂ ಇಂದು ಬೆಳವಣಿಗೆ ಕಾಣುತ್ತಿದೆ. ಗ್ರಾಮೀಣ ಭಾಗದ ಜನರ ತಲಾ ಆದಾಯವು 2,000 ಡಾಲರ್​ ಮೀರಿದ್ದು, ಆದಾಯದಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಜನರ ಬಳಕೆಯು ಕೂಡ ಹೆಚ್ಚುತ್ತಿದ್ದು, ಜನರ ವಿವೇಚನಾಯುಕ್ತ ಖರ್ಚು ಸಹ ಹೆಚ್ಚಾಗುತ್ತಿದೆ. ಇನ್ನು ಗ್ರಾಮೀಣ ಪ್ರದೇಶದ ಜನರ ವೆಚ್ಚದಲ್ಲಿ ಆಹಾರದ ಪಾಲು ತುಂಬಾನೇ ಕಡಿಮೆಯಾಗುತ್ತಿದೆ. ಇದು ಅನಿವಾರ್ಯವಲ್ಲದ ಸರಕುಗಳು ಮತ್ತು ಸೇವೆಗಳ ಮೇಲಿನ ವೆಚ್ಚದ ಕಡೆಗೆ ಬದಲಾವಣೆಯನ್ನು ಸೂಚಿಸುತ್ತದೆ.

ಗ್ರಾಮೀಣ ಭಾರತದ ಆರ್ಥಿಕ ಸ್ಥಿತಿಯು ಸಂಪೂರ್ಣವಾಗಿ ಬದಲಾಗುತ್ತಿದ್ದು, ದಶಕದ ಹಿಂದೆ ನಗರ ಭಾರತದಲ್ಲಿ ಕಂಡುಬಂದ ಬಳಕೆಯ ಪಥವನ್ನು ಈ ಬದಲಾವಣೆ ಪ್ರತಿಬಿಂಬಿಸುತ್ತದೆ. ಸದ್ಯ ಭಾರತದ ಜನಸಂಖ್ಯೆಯ ಮೂರನೇ ಎರಡರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಒಟ್ಟು ದೇಶಿಯ ಉತ್ಪನ್ನ(GDP)ಕ್ಕೆ ಶೇ. 46% ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಆರ್ಥಿಕತೆಯು ಭವಿಷ್ಯದಲ್ಲಿ ಬಲವಾದ ಹೂಡಿಕೆಯ ಅವಕಾಶಗಳನ್ನು ಒದಗಿಸುತ್ತದೆ.

ಗ್ರಾಮೀಣ ಭಾರತದ ಈ ರಚನಾತ್ಮಕ ಬೆಳವಣಿಗೆಯನ್ನು ಹೂಡಿಕೆದಾರರು ಅವಕಾಶವಾಗಿ ಪರಿಗಣಿಸಬೇಕಿದೆ. ಗ್ರಾಮೀಣ ಭಾರತದಿಂದ ಹೊರಹೊಮ್ಮುವ ಅವಕಾಶಗಳ ಮೇಲೆ ಕೇಂದ್ರೀಕರಿಸುವ ಮ್ಯೂಚುವಲ್ ಫಂಡ್ ಯೋಜನೆಗಳನ್ನು ಹೂಡಿಕೆದಾರರು ಪರಿಗಣಿಸಬಹುದು. ದೀರ್ಘಾವಧಿಯಲ್ಲಿ ಗ್ರಾಮೀಣ ಭಾರತವು ಭಾರತದ ಒಟ್ಟಾರೆ ಬೆಳವಣಿಗೆಯ ಪಥವನ್ನು ವೇಗಗೊಳಿಸಲು ಸಜ್ಜಾಗಿರುವುದರಿಂದ ಗ್ರಾಮೀಣ ಆರ್ಥಿಕತೆ ಮೇಲಿನ ಹೂಡಿಕೆಗಳು ಗಮನಾರ್ಹ ಫಲಿತಾಂಶವನ್ನು ನೀಡಲಿವೆ.

ಹೀಗಾಗಿ ಹೂಡಿಕೆದಾರರು ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುವಲ್ ಫಂಡ್‌ನ ಇತ್ತೀಚಿನ ಯೋಜನೆಯಾದ ಐಸಿಐಸಿಐ ಪ್ರುಡೆನ್ಶಿಯಲ್ ರೂರಲ್ ಆಪರ್ಚುನಿಟೀಸ್ ಫಂಡ್ ಅನ್ನು ಪರಿಗಣಿಸಬಹುದು. ಈ ಪ್ಲಾನ್​ ಗ್ರಾಮೀಣ ಮತ್ತು ಅದರ ಸಂಬಂಧಿತ ಥೀಮ್‌ನ ಸುತ್ತ ಕೇಂದ್ರೀಕೃತವಾಗಿದೆ. ಈ ಹೊಸ ನಿಧಿ ಕೊಡುಗೆ (ಎನ್​ಎಫ್​ಒ)ಯು 2025ರ ಜನವರಿ 9 ರಿಂದ 2025ರ ಜನವರಿ 23 ರವರೆಗೆ ಲಭ್ಯವಿರುತ್ತದೆ. ಈ ಮುಕ್ತ ಇಕ್ವಿಟಿ ಯೋಜನೆಯು ಪ್ರಾಥಮಿಕವಾಗಿ ಗ್ರಾಮೀಣ ಭಾರತದ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಮುನ್ನಡೆಸುವ ಮತ್ತು ಅದರಿಂದ ಲಾಭ ಪಡೆಯುವ ವಲಯಗಳು ಮತ್ತು ಕಂಪನಿಗಳ ಮೇಲೆ ಕೇಂದ್ರೀಕರಿಸುತ್ತದೆ.

ಗ್ರಾಮೀಣ ಭಾರತದಲ್ಲಿ ಹೆಚ್ಚುತ್ತಿವೆ ಹೂಡಿಕೆಯ ಅವಕಾಶಗಳು | Rural India

Share This Article

ಬಿದಿರಿನ ಉಪ್ಪಿನ ಬಗ್ಗೆ ನಿಮಗೆ ತಿಳಿದಿದೆಯೇ? ಇದರ ಬೆಲೆ ಮತ್ತು ಪ್ರಯೋಜನಗಳನ್ನು ಕೇಳಿದ್ರೆ ಅಚ್ಚರಿ ಖಚಿತ! Bamboo Salt

Bamboo Salt : ಆರು ಮಸಾಲೆಗಳಲ್ಲಿ ಉಪ್ಪು ಕೂಡ ಒಂದು. ಭಾರತೀಯ ಪಾಕಪದ್ಧತಿಯಲ್ಲಿ ಉಪ್ಪು ಬಹಳ…

ಬಿರು ಬೇಸಿಗೆಯಲ್ಲಿ ನೆಲ್ಲಿಕಾಯಿ ಸೇವಿಸಿ, ಈ ಅದ್ಭುತ ಪ್ರಯೋಜನ ಪಡೆಯಿರಿ; ಇಲ್ಲಿದೆ ಉಪಯುಕ್ತ ಮಾಹಿತಿ | Amla

Amla Benefits: ಸಾಮಾನ್ಯವಾಗಿ ಭಾರತೀಯ ನೆಲ್ಲಿಕಾಯಿಯನ್ನು ಆಂಗ್ಲ ಭಾಷೆಯಲ್ಲಿ ಆಮ್ಲಾ/ ಗೂಸ್​ಬೆರಿ ಎಂದು ಕರೆಯಲಾಗುತ್ತದೆ. ಇದು…

ಮನೆಯಲ್ಲಿ ಈ 4 ವಸ್ತುಗಳಿದ್ದರೆ ಲಕ್ಷ್ಮಿ ಒಲಿಯುವುದಿಲ್ಲ! ಇದನ್ನು ಗಮನಿಸದೆ ಹೋದ್ರೆ ಕೈಯಲ್ಲಿ 1 ಪೈಸೆಯೂ ಉಳಿಯಲ್ಲ | Vastu Tips

Vastu Tips: ಇಂದು ಯಾರಿಗೆ ತಾನೇ ಧನಲಕ್ಷ್ಮಿ ಬೇಡ? ವಿದ್ಯೆ ಇಲ್ಲದೇ ಹೋದ್ರೂ ಪರವಾಗಿಲ್ಲ ಹಣವೇ…