ಗ್ರಾಮೀಣ ಭಾರತದಲ್ಲಿ ಹೆಚ್ಚುತ್ತಿವೆ ಹೂಡಿಕೆಯ ಅವಕಾಶಗಳು | Rural India

Rural India
Published on

Rural India : ಆಧುನಿಕತೆಗೆ ತಕ್ಕಂತೆ ಭಾರತದ ಗ್ರಾಮೀಣ ಭಾಗವು ವೇಗವಾಗಿ ಬದಲಾಗುತ್ತಿದ್ದು, ಇನ್ಮುಂದೆ ಕೇವಲ ಕೃಷಿ ಆಧಾರಿತ ಆರ್ಥಕತೆಯಾಗಿ ಉಳಿಯುವುದಿಲ್ಲ. ಬದಲಾಗಿ ಉತ್ಪಾದನೆ, ನಿರ್ಮಾಣ ಮತ್ತು ವ್ಯಾಪಾರ ಚಟುವಟಿಕೆಗಳಂತಹ ಕ್ಷೇತ್ರಗಳು ಕೂಡ ಗ್ರಾಮೀಣ ಭಾಗದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿವೆ. ದೇಶದ ಶೇ. 99ರಷ್ಟು ಗ್ರಾಮಗಳಿಗೆ ಉತ್ತಮ ರಸ್ತೆ, ಸೇತುವೆ ಮತ್ತು ವಿದ್ಯುತ್​ ಸಂಪರ್ಕವಿದೆ.

| ಕೆ. ಶಂಕರ, ಮ್ಯೂಚುವಲ್​ ಫಂಡ್​ ವಿತರಕರು

ಇನ್ನು ಗ್ರಾಮೀಣದಲ್ಲೂ ಮೊಬೈಲ್​ ಬಳಕೆ ಹೆಚ್ಚಾಗಿದೆ. ಶಿಕ್ಷಣ ಮತ್ತು ವೈದ್ಯಕೀಯ ಸೌಕರ್ಯಗಳು ಗಣನೀಯವಾಗಿ ಸುಧಾರಣೆಯಾಗುತ್ತಿದೆ. ಸಾಕ್ಷರತಾ ಪ್ರಮಾಣವು ಕೂಡ ಸರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ದುಡಿಮೆಯಲ್ಲೂ ಸಹ ಗ್ರಾಮೀಣ ಭಾಗದ ಜನರು ಮುಂದಿದ್ದು, ಸರಾಸರಿ ತಲಾ ಆದಾಯ 2000 ಡಾಲರ್​ ದಾಟಿದೆ.

ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಸಂಗತಿ ಏನೆಂದರೆ, ಭಾರತದ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲೇ ವಾಸಿಸುತ್ತಿದ್ದಾರೆ. ಅಲ್ಲದೆ, ಒಟ್ಟು ದೇಶೀಯ ಉತ್ಪನ್ನ (GDP)ಕ್ಕೆ ನೀಡುತ್ತಿರುವ ಕೊಡುಗೆ ಸುಮಾರು 46% ರಷ್ಟಿದೆ. ಈ ಅಂಶಗಳನ್ನು ಗಮನಿಸಿದರೆ, ಗ್ರಾಮೀಣ ಭಾಗದಲ್ಲೂ ಹೂಡಿಕೆಗೆ ಪರಿಪೂರ್ಣ ಅವಕಾಶಗಳು ಇರುವುದು ಗೊತ್ತಾಗುತ್ತದೆ.

ಇನ್ನು ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಕೈಗೊಂಡಿರುವ ಅನೇಕ ಕ್ರಮಗಳು ಆ ಪ್ರದೇಶಗಳ ಮೇಲೆ ಪಾಸಿಟಿವ್​ ಪರಿಣಾಮ ಬೀರಲು ಆರಂಭಿಸಿವೆ. ಇದರಿಂದ ಗ್ರಾಮೀಣ ಭಾರತ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಗ್ರಾಮೀಣ ಭಾಗದ ಆರ್ಥಿಕತೆಗಳಿಂದ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಇತ್ತೀಚೆಗೆ ಪ್ರಮುಖ ಕಂಪನಿಗಳು ನೀಡಿರುವ ಹೇಳಿಕೆಗಳು ಸ್ಪಷ್ಟವಾಗಿ ಸೂಚಿಸುತ್ತವೆ. ವಾಸ್ತವವಾಗಿ, ಸಮಗ್ರ ಹೂಡಿಕೆ ಬಂಡವಾಳಕ್ಕಾಗಿ ಗ್ರಾಮೀಣ ಪ್ರದೇಶಗಳನ್ನು ಇನ್ನು ಮುಂದೆ ಯಾವುದೇ ಕಾರಣಕ್ಕೂ ನಿರ್ಲಕ್ಷಿಲು ಸಾಧ್ಯವಾಗುವುದಿಲ್ಲ.

ಕೋವಿಡ್ ನಂತರ ನಗರ ಪ್ರದೇಶದ ಆರ್ಥಿಕತೆಯು ತೀವ್ರ ಚೇತರಿಕೆಯನ್ನು ಕಂಡಿದೆ. ಆದಾಗ್ಯೂ, ಗ್ರಾಮೀಣ ಪ್ರದೇಶವು ನಿಧಾನಗತಿಯಲ್ಲಿ ಚೇತರಿಕೆಯನ್ನು ಕಾಣುತ್ತಿದೆ. ಗ್ರಾಮೀಣ ಭಾಗದ ವೆಚ್ಚದಲ್ಲಿ ಆಹಾರದ ಪಾಲು ಶೇ. 46% ಕ್ಕೆ ಇಳಿದಿದ್ದು, ವಿವೇಚನಾ ವೆಚ್ಚದಲ್ಲಿ ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ. ನಗರ ಕೇಂದ್ರಗಳಲ್ಲಿ ತಲಾ ಆದಾಯವು ಒಂದು ದಶಕದ ಹಿಂದೆ 2000 ಡಾಲರ್ ಗಡಿಯನ್ನು ದಾಟಿತ್ತು. ಈ ಬದಲಾವಣೆ ಬಳಕೆಗೆ ಉತ್ತೇಜನ ನೀಡಿತು ಎಂಬುದನ್ನು ಗಮನಿಸಬಹುದು. ಗ್ರಾಮೀಣ ಭಾಗದ ಆರ್ಥಿಕತೆಗಳ ಆದಾಯ ಮತ್ತು ಆದಾಯದ ಮೂಲಗಳು ಹೆಚ್ಚಾದಂತೆ ಇದೇ ರೀತಿಯ ಪರಿಸ್ಥಿತಿ ತೆರೆದುಕೊಳ್ಳುವ ಸಾಧ್ಯತೆಯಿದೆ.

ಭಾರತದ ಗ್ರಾಮೀಣಾಭಿವೃದ್ಧಿಯ ರಚನಾತ್ಮಕ ಬೆಳವಣಿಗೆಯನ್ನು ಹೂಡಿಕೆದಾರರು ಅವಕಾಶವಾಗಿ ಪರಿಗಣಿಸಬೇಕು. ಗ್ರಾಮೀಣ ಭಾರತದಿಂದ ಹೊರಹೊಮ್ಮುವ ಅವಕಾಶಗಳ ಮೇಲೆ ಕೇಂದ್ರೀಕರಿಸುವ ಮ್ಯೂಚುವಲ್ ಫಂಡ್ ಯೋಜನೆಗಳನ್ನು ಹೂಡಿಕೆದಾರರು ಪರಿಗಣಿಸಬಹುದು. ದೀರ್ಘಾವಧಿಯಲ್ಲಿ ಗ್ರಾಮೀಣ ಭಾರತವು ಭಾರತದ ಒಟ್ಟಾರೆ ಬೆಳವಣಿಗೆಯ ಪಥವನ್ನು ವೇಗಗೊಳಿಸಲು ಸಜ್ಜಾಗಿರುವುದರಿಂದ ಗ್ರಾಮೀಣ ಆರ್ಥಿಕತೆ ಮೇಲಿನ ಹೂಡಿಕೆಗಳು ಗಮನಾರ್ಹ ಫಲಿತಾಂಶವನ್ನು ನೀಡುವ ಸಾಧ್ಯತೆಯಿದೆ.

ಹೀಗಾಗಿ ಹೂಡಿಕೆದಾರರು ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುವಲ್ ಫಂಡ್‌ನ ಇತ್ತೀಚಿನ ಯೋಜನೆಯಾದ ಐಸಿಐಸಿಐ ಪ್ರುಡೆನ್ಶಿಯಲ್ ರೂರಲ್ ಆಪರ್ಚುನಿಟೀಸ್ ಫಂಡ್ ಅನ್ನು ಪರಿಗಣಿಸಬಹುದು. ಈ ಪ್ಲಾನ್​ ಗ್ರಾಮೀಣ ಮತ್ತು ಅದರ ಸಂಬಂಧಿತ ಥೀಮ್‌ನ ಸುತ್ತ ಕೇಂದ್ರೀಕೃತವಾಗಿದೆ. ಈ ಮುಕ್ತ ಇಕ್ವಿಟಿ ಯೋಜನೆಯು 2025ರ ಜನವರಿ 9 ರಿಂದ 2025ರ ಜನವರಿ 23 ರವರೆಗೆ ಚಂದಾದಾರಿಕೆಗೆ ಲಭ್ಯವಿರುತ್ತದೆ. ಈ ಫಂಡ್​ ಪ್ರಾಥಮಿಕವಾಗಿ ಗ್ರಾಮೀಣ ಭಾರತದ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಮುನ್ನಡೆಸುವ ಮತ್ತು ಅದರಿಂದ ಲಾಭ ಪಡೆಯುವ ವಲಯಗಳು ಮತ್ತು ಕಂಪನಿಗಳ ಮೇಲೆ ಕೇಂದ್ರೀಕರಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net