More

    ಐಸಿಐಸಿಐ ಪ್ರುಡೆನ್ಶಿಯಲ್ ಫ್ರೀಡಂ SIP ಎಂದರೇನು? ಹೇಗೆ ಪ್ರಯೋಜನಕಾರಿ?

    | ರವೀಶ್​ ಕೆ ಬಿ ನಿರ್ದೇಶಕರು, ಲೈಫ್​ಟೈಮ್​ ಅಸ್ಸೆಟ್​ ಸ್ಟ್ರಾಟಜೀಸ್​

    ನಮ್ಮಲ್ಲಿ ಬಹುತೇಕರು ಆರ್ಥಿಕವಾಗಿ ಮುಕ್ತರಾಗಲು ಬಯಸುತ್ತಾರೆ. ಅಂದರೆ, ಭವಿಷ್ಯದಲ್ಲಿ ಯಾವುದೇ ಹಣಕಾಸು ತೊಂದರೆ ಎದುರಾಗದಂತೆ ಹಣಕಾಸಿನ ಸ್ಥಿತಿಯನ್ನು ಉತ್ತಮವಾಗಿ ಇಟ್ಟುಕೊಳ್ಳುವ ಬಯಕೆ ಇರುತ್ತದೆ. ತಮ್ಮನ್ನು ತಾವು ಕಂಡುಕೊಳ್ಳುವುದಾಗಿರಬಹುದು, ತಮ್ಮ ಕನಸುಗಳ ಈಡೇರಿಕೆ ಅಥವಾ ಬಹುಬೇಗನೇ ನಿವೃತ್ತಿ ಹೊಂದಲು ಹಣಕಾಸಿನ ಸ್ಥಿತಿ ಉತ್ತಮವಾಗಿರಬೇಕು. ಅದರಲ್ಲೂ ಬಹುಬೇಗನೆ ನಿವೃತ್ತಿ ಹೊಂದಿ, ಉಳಿದ ಜೀವನವನ್ನು ಆನಂದದಿಂದ ಸಾಗಿಸಬೇಕೆಂಬುದು ಅನೇಕ ಜನರ ಜೀವನದ ಗುರಿಗಳಲ್ಲಿ ಒಂದಾಗಿರುತ್ತದೆ. ಆದರೆ, ಈ ಗುರಿಯನ್ನು ಸಾಧಿಸಲು ಹಣಕಾಸಿನ ಯೋಜನೆ ತುಂಬಾ ಮುಖ್ಯವಾಗಿದೆ.

    ಅನೇಕ ವಿಧಾನಗಳಲ್ಲಿ ಹೂಡಿಕೆದಾರರು ತಮ್ಮ ನಿವೃತ್ತಿ ನಿಧಿಯನ್ನು ನಿರ್ಮಾಣ ಮಾಡಬಹುದು. ಅವುಗಳಲ್ಲಿ ಇಕ್ವಿಟಿ ಫಂಡ್‌ನಲ್ಲಿ ದೀರ್ಘಾವಧಿಯ SIP (ವ್ಯವಸ್ಥಿತ ಹೂಡಿಕೆ ಯೋಜನೆ) ಅನ್ನು ಪ್ರಾರಂಭಿಸುವುದು ಸುಲಭವಾದ ಮಾರ್ಗವಾಗಿದೆ ಮತ್ತು ತಮ್ಮ ವೃತ್ತಿ ಜೀವನದಲ್ಲಿ SIP ಮೂಲಕ ಹೂಡಿಕೆ ಮಾಡುತ್ತಾ ಹೋಗಬಹುದು. ಮೂಲಧನದ ಉತ್ಪತಿ ಕೂಡ ಇಲ್ಲಿ ಮುಖ್ಯವಾಗಿದೆ ಮತ್ತು ನಿವೃತ್ತಿಯ ಹಂತದಲ್ಲಿ ಆದಾಯದ ಹೊರ ಹರಿವನ್ನು ಹೊಂದಿಸಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಆದರೆ, ಒಬ್ಬ ಸಾಮಾನ್ಯ ವ್ಯಕ್ತಿಗೆ ಈ ಪ್ರತಿಯೊಂದು ಹಂತಗಳನ್ನು ನಿರ್ವಹಿಸುವುದು ಒಂದು ಸವಾಲಿನ ಕೆಲಸವಾಗಿದೆ. ಆದರೂ, ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ಏಕೆಂದರೆ, ಐಸಿಐಸಿಐ ಪ್ರುಡೆನ್ಶಿಯಲ್ ಫ್ರೀಡಂ ಎಸ್​ಐಪಿ ನಿಮಗೆ ತುಂಬಾ ಸಹಕಾರಿಯಾಗಲಿದೆ.

    ಫ್ರೀಡಂ ಎಸ್​ಐಪಿ ಎಂದರೇನು?
    ಫ್ರೀಡಂ ಎಸ್​ಐಪಿ ಎಂಬುದು ವ್ಯವಸ್ಥಿತ ಹೂಡಿಕೆ ಯೋಜನೆ (Systematic Investment Plan) ಮತ್ತು ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆ (Systematic Withdrawal Plan) ಸಮ್ಮಿಶ್ರಣವಾಗಿದೆ. ಯೋಜಿತ ಮತ್ತು ತಡೆರಹಿತ ರೀತಿಯಲ್ಲಿ ಹೂಡಿಕೆದಾರರು ತಮ್ಮ ನಿವೃತ್ತಿ ಗುರಿಯನ್ನು ತಲುಪಲು ಇದು ಸಹಕಾರಿಯಾಗಿದೆ. ಈ ಯೋಜನೆಯ ಸೌಲಭ್ಯದಲ್ಲಿ ಹೂಡಿಕೆದಾರರು ನಿರ್ಧಿಷ್ಟ ಸಮಯದವರೆಗೆ ಎಸ್​ಐಪಿ ಅನ್ನು ಹೊಂದಿಸಿಕೊಳ್ಳಬಹುದು. ಈ ಸ್ಕೀಮ್​ನ ಅವಧಿ 8 ವರ್ಷದಿಂದ 10, 12, 15, 20, 25 ಮತ್ತು 30 ವರ್ಷಗಳವರೆಗೂ ಇರುತ್ತದೆ. ಇದರಲ್ಲಿ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಯಾವುದನ್ನಾದರೂ ಕೂಡ ಆಯ್ಕೆ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ, ದೀರ್ಘಾವಧಿಯ SIP ನಿಂದ ಆಯ್ಕೆ ಮಾಡಲಾದ ಯೋಜನೆಯು ಇಕ್ವಿಟಿ-ಆಧಾರಿತವಾಗಿರಬೇಕು.

    ಯಾವಾಗ ಎಸ್​ಐಪಿ ಅವಧಿ ಮುಗಿಯುತ್ತದೆಯೋ ಆಗ ನಿಮ್ಮ ಹೂಡಿಕೆ ಹಣವನ್ನು ಸಾಲ-ಆಧಾರಿತ ಅಥವಾ ಹೈಬ್ರಿಡ್ ಸ್ವರೂಪದ ಮತ್ತೊಂದು ಯೋಜನೆಗೆ ವರ್ಗಾಯಿಸಲ್ಪಡುತ್ತದೆ. ಈಕ್ವಿಟಿ ಮಾರುಕಟ್ಟೆಯ ಏರಿಳಿತಗಳಿಂದ ಮೂಲ ಧನವನ್ನು ರಕ್ಷಿಸುವ ಗುರಿಯೊಂದಿಗೆ ಈ ರೀತಿ ವರ್ಗಾವಣೆ ಮಾಡಲಾಗುತ್ತದೆ. ಇದಾದ ಬಳಿಕ SWP (ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆ) ಪ್ರಕ್ರಿಯೆಯು ಈ ನಿಧಿಯಿಂದ ಪ್ರಾರಂಭವಾಗುತ್ತದೆ. SWPಯ ಸಂದರ್ಭದಲ್ಲಿ ಮಾಸಿಕ SWP ಮೊತ್ತವು ಆರಂಭಿಕ SIP ಮೊತ್ತದ ಬಹುಸಂಖ್ಯೆಯಾಗಿರುತ್ತದೆ. ಅದು 1x ನಿಂದ 3x ವರೆಗೆ ಇರಬಹುದು. 8 ವರ್ಷಗಳ SIP ಅವಧಿಗೆ, ಮಾಸಿಕ SWP ಕಂತು 1x ಆಗಿರುತ್ತದೆ. ಅದೇ ರೀತಿ, 10, 12, 15, 20, 25 ಮತ್ತು 30 ವರ್ಷಗಳಿಗೆ, SWP ಕಂತು ಕ್ರಮವಾಗಿ 1.5x, 2x ಮತ್ತು 3x ಆಗಿರುತ್ತದೆ. ಉದಾಹರಣೆಗೆ ಆರಂಭಿಕ SIP 15 ವರ್ಷಗಳ ಅವಧಿಗೆ ನೋಂದಾಯಿಸಿದ್ದರೆ ತಿಂಗಳಿಗೆ ರೂ. 10,000 ಕಟ್ಟಬೇಕಾಗುತ್ತದೆ ನಂತರ SWP 30,000 (3x ರೂ. 10,000) ಆಗಿರುತ್ತದೆ.

    ನಿಯಮಿತ SIP ಗಿಂತ ಫ್ರೀಡಂ SIP ಪ್ರಯೋಜನಗಳು
    * ಫ್ರೀಡಂ ಎಸ್​ಐಪಿಯು ಲಾಕ್​ ಇನ್​ ಅವಧಿ ಹೊಂದಿರುತ್ತದೆ
    * ಸಮಂಜಸವಾದ ಆದಾಯವನ್ನು ರಚಿಸುತ್ತದೆ
    * ಸ್ವಯಂಚಾಲಿತ ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆ ಹೊಂದಿರುತ್ತದೆ

    ಒಟ್ಟಾರೆ ಹೇಳಬೇಕೆಂದರೆ, ಫ್ರೀಡಂ SIP ಎನ್ನುವುದು ಒಬ್ಬರ ಜೀವನದ ನಿವೃತ್ತಿ ಹಂತದಲ್ಲಿ ಹಣದ ಉಳಿತಾಯ ಮತ್ತು ಹಣದ ಹಿಂಪಡೆಯುವಿಕೆಯನ್ನು ಸ್ವಯಂಚಾಲಿತಗೊಳಿಸಲು ಸಹಾಯ ಮಾಡುವ ವಿಶೇಷ ಸೌಲಭ್ಯವಾಗಿದೆ. ಅಲ್ಲದೆ, ನಿಮ್ಮ ದಿನನಿತ್ಯದ ಅಗತ್ಯಗಳನ್ನು ಆರಾಮದಾಯಕವಾಗಿ ಪೂರೈಸುವ ನಗದು ಹರಿವಿನಲ್ಲಿ ಒಂದು ನಿರ್ದಿಷ್ಟ ಪ್ರಮಾಣದ ಭವಿಷ್ಯವಿದೆ ಎಂಬುದನ್ನು ಇದು ತಿಳಿಸುತ್ತದೆ ಮತ್ತು ಹಣಕಾಸು ಮುಕ್ತ ನಿವೃತ್ತಿ ಗುರಿ ಸಾಧನೆಗೆ ಇದು ಸಹಕಾರಿಯಾಗಿದೆ.

    ಚಂದ್ರುಗೂ, ವಿನಯ್ ಗುರೂಜಿಗೂ ಏನ್ರೀ ಸಂಬಂಧ?: ಭಕ್ತರ ಪ್ರಶ್ನೆ, ಪ್ರತಿಭಟನೆಗೆ ನಿರ್ಧಾರ

    ಪುಷ್ಪ ಚಿತ್ರದ​ ಕಲೆಕ್ಷನ್​​ ರೆಕಾರ್ಡ್​ ಬ್ರೇಕ್ ಮಾಡಿದ ಕಾಂತಾರ: ಪುಷ್ಪರಾಜ್ ಎದುರು ಗೆದ್ದು ಬೀಗಿದ ಡಿವೈನ್​​​​ ಸ್ಟಾರ್

    VIDEO: ಜಲ ಬಂಧನದಲ್ಲೇ ವಿವಾಹ ಬಂಧನಕ್ಕೊಳಗಾದ ನವ ಜೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts