More

    ಗರಿಷ್ಠ ಮಟ್ಟ ತಲುಪಿದ ಐಸಿಐಸಿಐ ಬ್ಯಾಂಕ್​ ಷೇರು ಬೆಲೆ ಮತ್ತಷ್ಟು ಹೆಚ್ಚಳ: ಹೀಗೆಂದು ಬ್ರೋಕರೇಜ್​ ಸಂಸ್ಥೆಗಳು ಭವಿಷ್ಯ ನುಡಿದಿದ್ದೇಕೆ?

    ಮುಂಬೈ: ಖಾಸಗಿ ವಲಯದ ಪ್ರಮುಖ ಹಣಕಾಸು ಸಂಸ್ಥೆ ಐಸಿಐಸಿಐ ಬ್ಯಾಂಕ್ ಷೇರುಗಳು ಮಂಗಳವಾರ ಶೇಕಡಾ 2ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿವೆ. ಈ ಷೇರುಗಳ ಬೆಲೆಯು 1,029.05 ರೂಪಾಯಿಗೆ ತಲುಪಿ, 52 ವಾರದ ಗರಿಷ್ಠ ಮಟ್ಟವನ್ನು ಸಹ ಮುಟ್ಟಿವೆ.

    ಡಿಸೆಂಬರ್ ತ್ರೈಮಾಸಿಕದಲ್ಲಿ (2023ರ ಅಕ್ಟೋಬರ್​ನಿಂದ ಡಿಸೆಂಬರ್​ ಅವಧಿ) ಫಲಿತಾಂಶಗಳು ಖಾಸಗಿ ಬ್ಯಾಂಕ್‌ನ ಷೇರುಗಳ ಏರಿಕೆಗೆ ಪ್ರಾಥಮಿಕ ಕಾರಣ ಎಂದು ನಂಬಲಾಗಿದೆ.

    ದೇಶದ ಎರಡನೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಐಸಿಐಸಿಐ ಬ್ಯಾಂಕ್ 3ನೇ ತ್ರೈಮಾಸಿಕದಲ್ಲಿ 10,271.54 ಕೋಟಿ ರೂಪಾಯಿ ಆದಾಯ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಶೇಕಡಾ 23.5 ರಷ್ಟು ಹೆಚ್ಚಾಗಿದೆ.

    ಐಸಿಐಸಿಐ ಬ್ಯಾಂಕ್ ಶನಿವಾರ ತನ್ನ ಡಿಸೆಂಬರ್ 2023ಕ್ಕೆ ಕೊನೆಗೊಂಡ ತ್ರೈಮಾಸಿಕದ ಫಲಿತಾಂಶಗಳನ್ನು ಘೋಷಿಸಿದೆ. ಈ ಅವಧಿಯಲ್ಲಿ ತೆರಿಗೆಯ ನಂತರದ ಲಾಭವು 10,272 ಕೋಟಿ ರೂಪಾಯಿಗೆ ತಲುಪಿ, 23.6% ವರ್ಷದಿಂದ ವರ್ಷಕ್ಕೆ (YoY) ಬೆಳವಣಿಗೆಯನ್ನು ವರದಿ ಮಾಡಿದೆ. ಬ್ಯಾಕ್ ತನ್ನ ನಿವ್ವಳ ಬಡ್ಡಿ ಆದಾಯ ಮೌಲ್ಯದಲ್ಲಿ 34.6 ಪ್ರತಿಶತದಷ್ಟು ಬೆಳೆದು 16,465 ಕೋಟಿಗೆ ತಲುಪಿದೆ.

    ಈ ಸ್ಟಾಕ್ ಬೆಲೆ ಏರುವ ಬಗ್ಗೆ ಬ್ರೋಕರೇಜ್ ಸಂಸ್ಥೆಗಳು ಭವಿಷ್ಯ ನುಡಿದಿವೆ. ಬ್ಯಾಂಕ್ ಷೇರುಗಳ ಮೌಲ್ಯವು ಶೀಘ್ರದಲ್ಲೇ 1385 ರೂಪಾಯಿಗಳಿಗೆ ಏರಬಹುದು ಎಂದು ಗ್ಲೋಬಲ್ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆ ಅಂದಾಜಿಸಿದೆ.

    ದಲಾಲ್​ ಸ್ಟ್ರೀಟ್‌ನ ಅಂದಾಜಿಗಿಂತ ಉತ್ತಮವಾದ ಡಿಸೆಂಬರ್ ತ್ರೈಮಾಸಿಕ ಗಳಿಕೆಯನ್ನು ಐಸಿಐಸಿಐ ಬ್ಯಾಂಕ್​ ಸಾಧಿಸಿದ ನಂತರ ಶನಿವಾರ ಷೇರುಗಳು 5% ಹೆಚ್ಚಳವಾಗಿದ್ದವು. ಜೆಫರೀಸ್, ಕೋಟಕ್ ಇನ್‌ಸ್ಟಿಟ್ಯೂಶನಲ್ ಇಕ್ವಿಟೀಸ್ ಮತ್ತು ನುವಾಮಾ ಸೇರಿದಂತೆ ಉನ್ನತ ಬ್ರೋಕರೇಜ್‌ ಸಂಸ್ಥೆಗಳು ಐಸಿಐಸಿಐ ಷೇರುಗಳ ಖರೀದಿಗೆ ಹೆಚ್ಚಿನ ರೇಟಿಂಗ್ ನೀಡಿವೆ.

    ದುಬೈ ನೈಟ್​ ಕ್ಲಬ್​ ಜತೆ ಡೀಲು: ಪೆನ್ನಿ ಸ್ಟಾಕ್​ಗೆ ಡಿಮ್ಯಾಂಡೊ ಡಿಮ್ಯಾಂಡು…

    ಗೂಳಿ ಹಿಮ್ಮೆಟ್ಟಿಸಿದ ಕರಡಿಯ ಕುಣಿತ; 1000 ಅಂಕ ಮೀರಿ ಕುಸಿತ: ಷೇರು ಪೇಟೆಯಲ್ಲಿ ಏಕೆ ರಕ್ತಪಾತ?

    ಮಂದಿರ ಉದ್ಘಾಟಿಸಿದ ನಂತರ ಘೋಷಿಸಿದ ಮೊದಲ ಸ್ಕೀಂ ‘ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ’: ನೀವು ಎರಡು ರೀತಿಯಲ್ಲಿ ಲಾಭ ಮಾಡಿಕೊಳ್ಳಬಹುದು….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts