More

    ಗೂಳಿ ಹಿಮ್ಮೆಟ್ಟಿಸಿದ ಕರಡಿಯ ಕುಣಿತ; 1000 ಅಂಕ ಮೀರಿ ಕುಸಿತ: ಷೇರು ಪೇಟೆಯಲ್ಲಿ ಏಕೆ ರಕ್ತಪಾತ?

    ಮುಂಬೈ: ಈಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕ ಬಿಎಸ್​ಇ ಸೆನ್ಸೆಕ್ಸ್ ಮಂಗಳವಾರ 1,053 ಅಂಕಗಳಷ್ಟು ಕುಸಿದು 71,000 ಮಟ್ಟಕ್ಕಿಂತ ಕೆಳಗೆ ಕುಸಿಯಿತು, ಜಾಗತಿಕವಾಗಿ ಮಿಶ್ರ ಆರ್ಥಿಕ ಸೂಚನೆಗಳ ನಡುವೆ ಷೇರು ಪೇಟೆಯ ಪ್ರಮುಖ ಷೇರುಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಸ್‌ಬಿಐ ನಷ್ಟ ಕಂಡವು.

    ಬೃಹತ್ ಕಂಪನಿಗಳ ತ್ರೈಮಾಸಿಕ ಕಾರ್ಯಕ್ಷಮತೆ ಕುರಿತ ಅಂತಕದ ಕಾರಣ ಮಾರಾಟದ ಹೆಚ್ಚಾದ ಪರಿಣಾಮ ಷೇರುಗಳ ಬೆಲೆ ಕುಸಿತ ಕಂಡವು ಎಂದು ವಿಶ್ಲೇಷಕರು ಹೇಳಿದ್ದಾರೆ.

    ಮಂಗಳವಾರದಂದು 450 ಅಂಕಗಳ ಲಾಭದೊಂದಿಗೆ ಷೇರು ಮಾರುಕಟ್ಟೆ ಪ್ರಾರಂಭವಾದರೂ, 30-ಷೇರುಗಳ ಬಿಎಸ್‌ಇ ಸೂಚ್ಯಂಕವು 1,053.10 ಅಂಕಗಳು ಅಥವಾ ಶೇಕಡಾ 1.47 ಕುಸಿದು 70,370.55 ಕ್ಕೆ ಸ್ಥಿರವಾಯಿತು. ಸೂಚ್ಯಂಕವು ದಿನದ ವಹಿವಾಟಿನ ಮಧ್ಯದಲ್ಲಿ ಕನಿಷ್ಠ ಮಟ್ಟವಾದ 70,234.55 ಮುಟ್ಟಿತ್ತು. ನಿಫ್ಟಿ ಸೂಚ್ಯಂಕ ಕೂಡ 330.15 ಅಂಕ ಅಥವಾ 1.53 ರಷ್ಟು ಕುಸಿದು 21,241.65 ಕ್ಕೆ ತಲುಪಿತು. 30 ಷೇರು ಬಿಎಸ್​ಇ ಸೂಚ್ಯಂಕಗಳ ಪೈಕಿ ಒಟ್ಟು 24 ಷೇರುಗಳು ನಷ್ಟ ಅನುಭವಿಸಿದವು.

    ಪ್ರಮುಖ ಷೇರುಗಳ ಪೈಕಿ ಇಂಡಸ್‌ಇಂಡ್ ಬ್ಯಾಂಕ್ ಅತಿ ಹೆಚ್ಚು ನಷ್ಟವನ್ನು ಅನುಭವಿಸಿ, ಒಂದೇ ದಿನದಲ್ಲಿ ಶೇಕಡಾ 6.13 ರಷ್ಟು ಕುಸಿತವಾಯಿತು, ನಂತರ ಎಸ್‌ಬಿಐ (3.99 %), ಹಿಂದೂಸ್ತಾನ್ ಯೂನಿಲಿವರ್ (3.82 %), ಆಕ್ಸಿಸ್ ಬ್ಯಾಂಕ್ (3.41 %) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ (3.23 %) ಷೇರುಗಳು ನಷ್ಟ ಕಂಡವು.

    ಇದಕ್ಕೆ ವ್ಯತಿರಿಕ್ತವಾಗಿ, ಸನ್ ಫಾರ್ಮಾ, ಭಾರ್ತಿ ಏರ್‌ಟೆಲ್, ಐಸಿಐಸಿಐ ಬ್ಯಾಂಕ್ ಮತ್ತು ಪವರ್‌ಗ್ರಿಡ್,ಟಿಸಿಎಸ್ ಮತ್ತು ಬಜಾಜ್ ಫಿನ್‌ಸರ್ವ್ ಷೇರುಗಳು ಲಾಭ ಗಳಿಸಿದವು.

    ಏಷ್ಯಾದಲ್ಲಿ, ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಶೇಕಡಾ 2.63 ಮತ್ತು ಚೀನಾದ ಶಾಂಘೈ ಕಾಂಪೋಸಿಟ್ ಶೇಕಡಾ 0.52 ರಷ್ಟು ಏರಿಕೆ ದಾಖಲಿಸಿದವು. ಜಪಾನ್‌ನ ನಿಕ್ಕಿ 225 ಶೇ. 0.8ರಷ್ಟು ಕುಸಿಯಿತು.

    ಐರೋಪ್ಯ ಮಾರುಕಟ್ಟೆಗಳು ಮಂಗಳವಾರ ಕಡಿಮೆ ವಹಿವಾಟು ನಡೆಸಿದವು, ಜರ್ಮನಿಯ DAX 0.09 ಶೇಕಡಾ ಮತ್ತು ಫ್ರಾನ್ಸ್‌ನ CAC 40 ಶೇಕಡಾ 0.16 ರಷ್ಟು ಕುಸಿಯಿತು. ಲಂಡನ್‌ನ ಎಫ್‌ಟಿಎಸ್‌ಇ 100 ಕೂಡ ಶೇ.0.13ರಷ್ಟು ಕುಸಿಯಿತು.

    ಅಮೆರಿಕ ಮಾರುಕಟ್ಟೆಗಳಲ್ಲಿ, ಡೌ, ಎಸ್ & ಪಿ 500 ಮತ್ತು ನಾಸ್ಡಾಕ್ ಸೋಮವಾರ ಶೇಕಡಾ 0.36 ರಷ್ಟು ಲಾಭ ಕಂಡವು.

    ಅಯೋಧ್ಯೆಯಲ್ಲಿ ನಡೆದ ಮಹಾಮಸ್ತಕಾಭಿಷೇಕದ ಕಾರಣದಿಂದ ಜನವರಿ 22 ರಂದು ದೇಶೀಯ ಇಕ್ವಿಟಿ ಮಾರುಕಟ್ಟೆಯನ್ನು ಮುಚ್ಚಲಾಗಿತ್ತು, ಎನ್‌ಎಸ್‌ಇ ಮತ್ತು ಬಿಎಸ್‌ಇ ಶನಿವಾರ ಸಾಮಾನ್ಯ ವಹಿವಾಟು ಅವಧಿಗಳನ್ನು ನಡೆಸಿದ್ದವು.

    ಶನಿವಾರದಂದು 30-ಷೇರು ಬಿಎಸ್‌ಇ ಸೂಚ್ಯಂಕವು 259.58 ಅಂಕಗಳಷ್ಟು ಕುಸಿದು 71,423.65 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 50.60 ಅಂಕಗಳಷ್ಟು ಕುಸಿದು 21,571.80 ಕ್ಕೆ ತಲುಪಿತ್ತು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶನಿವಾರ 545.58 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಮಂದಿರ ಉದ್ಘಾಟಿಸಿದ ನಂತರ ಘೋಷಿಸಿದ ಮೊದಲ ಸ್ಕೀಂ ‘ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ’: ನೀವು ಎರಡು ರೀತಿಯಲ್ಲಿ ಲಾಭ ಮಾಡಿಕೊಳ್ಳಬಹುದು….

    ಒಂದೇ ವರ್ಷದಲ್ಲಿ 430% ಆದಾಯ ನೀಡಿದ ರೈಲ್ವೆ ಷೇರು: ಫೆ.1ರ ಬಜೆಟ್​ವರೆಗೆ ಭಾರಿ ಲಾಭ ನೀಡಲಿದೆ ಎನ್ನುತ್ತಾರೆ ತಜ್ಞರು!

    Q3 ಲಾಭ 376% ಹೆಚ್ಚಳ; 1971% ಬಂಪರ್ ರಿಟರ್ನ್: ರಾಕೆಟ್​ನಂತೆ ಚಿಮ್ಮಿದ ರಿಯಲ್ ಎಸ್ಟೇಟ್​ ಕಂಪನಿ ಷೇರು ಬೆಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts