More

    Q3 ಲಾಭ 376% ಹೆಚ್ಚಳ; 1971% ಬಂಪರ್ ರಿಟರ್ನ್: ರಾಕೆಟ್​ನಂತೆ ಚಿಮ್ಮಿದ ರಿಯಲ್ ಎಸ್ಟೇಟ್​ ಕಂಪನಿ ಷೇರು ಬೆಲೆ

    ಮುಂಬೈ: ಅಹಮದಾಬಾದ್ ಮೂಲದ ರಿಯಲ್ ಎಸ್ಟೇಟ್ ಕಂಪನಿ ಗಣೇಶ್ ಹೌಸಿಂಗ್ ಕಾರ್ಪೊರೇಷನ್ (Ganesh Housing Corporation) ಷೇರುಗಳು ವಾರಾಂತ್ಯದಲ್ಲಿ 15 ಪ್ರತಿಶತದಷ್ಟು ಏರಿಕೆಯಾಗಿ 52 ವಾರಗಳ ಹೊಸ ದಾಖಲೆ ಬೆಲೆಯನ್ನು ತಲುಪಿವೆ.

    ಈ ರಿಯಲ್ ಎಸ್ಟೇಟ್ ಸಂಸ್ಥೆಯ ಷೇರುಗಳು ಕೇವಲ 4 ದಿನಗಳಲ್ಲಿ 54% ಏರಿಕೆಯಾಗಿವೆ. ಕಳೆದ ಒಂದು ತಿಂಗಳಲ್ಲಿ ಗಣೇಶ್ ಹೌಸಿಂಗ್ ಷೇರುಗಳು ಗಣೇಶ್ ಹೌಸಿಂಗ್ ಶೇ. 84ರಷ್ಟು ಹೆಚ್ಚಾಗಿವೆ. ಗಣೇಶ್ ಹೌಸಿಂಗ್ ಷೇರುಗಳು 52 ವಾರಗಳ ಕನಿಷ್ಠ ಬೆಲೆ 261.30 ಆಗಿದೆ.

    ಡಿಸೆಂಬರ್ 20, 2023 ರ ಅವಧಿಯಲ್ಲಿ ಕಂಪನಿಯ ಅತ್ಯುತ್ತಮ ಫಲಿತಾಂಶಗಳ ಹಿನ್ನೆಲೆಯಲ್ಲಿ ಕಂಪನಿಯ ಷೇರುಗಳಿಗೆ ಬಲವಾದ ಬೇಡಿಕೆ ಬಂದಿದೆ.

    ಗಣೇಶ್ ಹೌಸಿಂಗ್ ಕಾರ್ಪೊರೇಷನ್‌ನ ಒಟ್ಟು ಮಾರಾಟವು ಡಿಸೆಂಬರ್‌ಗೆ ಅಂತ್ಯಗೊಂಡ ಅವಧಿಯಲ್ಲಿ 181.43 ಕೋಟಿ ರೂಪಾಯಿಗೆ ತಲುಪಿದೆ. ಈ ಕಂಪನಿಯ ನಿವ್ವಳ ಮಾರಾಟವು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈಗ ಶೇಕಡಾ 171.4 ರಷ್ಟು ಹೆಚ್ಚಾಗಿದೆ.

    ಕಳೆದ ವರ್ಷ ಇದೇ ಅವಧಿಯಲ್ಲಿ ಈ ವ್ಯವಹಾರದ ಮಾರಾಟ 66.85 ಕೋಟಿ ರೂ. ಆಗಿತ್ತು. ಡಿಸೆಂಬರ್ 2023 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ವ್ಯವಹಾರದ ನಿವ್ವಳ ಲಾಭವು 100.56 ಕೋಟಿ ರೂಪಾಯಿಗೆ ತಲುಪಿದೆ. ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಕಂಪನಿಯ ಲಾಭವು 376.01 ಪ್ರತಿಶತದಷ್ಟು ಹೆಚ್ಚಾಗಿರುವುದು ವಿಶೇಷವಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಗಣೇಶ್ ಹೌಸಿಂಗ್ 21.13 ಕೋಟಿ ರೂ. ಲಾಭ ಗಳಿಸಿತ್ತು.

    ಈ ಸಣ್ಣ ಕಂಪನಿಯು ನಾಲ್ಕು ಷೇರುಗಳನ್ನು ಬೋನಸ್ ಆಗಿ ನೀಡುತ್ತಿದ್ದು, ಇದಕ್ಕೆ ದಿನವನ್ನು ಘೋಷಿಸಲಾಗಿವೆ. ಹೀಗಾಗಿ, ಈ ಕಂಪನಿಯ ಷೇರುಗಳು ಷೇರುಗಳು ರಾಕೆಟ್​ನಂತೆ ಎತ್ತರಕ್ಕೆ ಚಿಮ್ಮುತ್ತಿವೆ.

    ಕಳೆದ 3 ವರ್ಷಗಳಲ್ಲಿ ಗಣೇಶ್ ಹೌಸಿಂಗ್ ಷೇರುಗಳು 1971% ರಷ್ಟು ಏರಿಕೆಯಾಗಿವೆ. ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿನ ಷೇರುಗಳು ಜನವರಿ 15, 2021 ರಂದು 32.40 ರೂಪಾಯಿಗೆ ವಹಿವಾಟು ನಡೆಸುತ್ತಿದ್ದವು. ಈಗ ಈ ಷೇರಿನ ಬೆಲೆ 638 ರೂಪಾಯಿಗೆ ತಲುಪಿವೆ. ಮೂರು ವರ್ಷಗಳ ಹಿಂದೆ ನೀವು 1 ಲಕ್ಷ ರೂಪಾಯಿಗಳನ್ನು ಈ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡಿದ್ದರೆ ಅದು ಅಂದಾಜು 20 ಲಕ್ಷ ರೂಪಾಯಿ ತಲುಪುತ್ತಿತ್ತು.

    ಕಳೆದ ವರ್ಷದಲ್ಲಿ, ರಿಯಲ್ ಎಸ್ಟೇಟ್ ಕಂಪನಿಯ ಷೇರುಗಳು ಅಂದಾಜು 82 ಪ್ರತಿಶತದಷ್ಟು ಏರಿದೆ. ಗಣೇಶ್ ಹೌಸಿಂಗ್ ಕಾರ್ಪೊರೇಷನ್ ವಸತಿ ವಾಣಿಜ್ಯ, ಮೂಲಸೌಕರ್ಯ ಮತ್ತು ವಾಣಿಜ್ಯ ಯೋಜನೆಗಳ ನಿರ್ಮಾಣ ಉದ್ಯಮದಲ್ಲಿದೆ.

    ಕಳೆದ ಜುಲೈನಲ್ಲಿ ಗಣೇಶ್ ಹೌಸಿಂಗ್‌ 1:2 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡಿದೆ. ಅಂದರೆ, ಪ್ರತಿ 2 ಷೇರುಗಳಿಗೆ ಒಂದು ಬೋನಸ್ ಷೇರನ್ನು ನೀಡಿದೆ.

    ಗಣೇಶ್ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ಭಾರತೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಕಂಪನಿಯಾಗಿದೆ. ಇದು ವಾಣಿಜ್ಯ, ವಸತಿ ಮತ್ತು ಇತರ ಮೂಲಸೌಕರ್ಯ-ಸಂಬಂಧಿತ ಯೋಜನೆಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ.

    ಕಂಪನಿಯು ನಗರದೊಳಗೆ ಅಂದಾಜು 2.2 ಕೋಟಿ ಚದರ ಅಡಿ ಆಸ್ತಿಯನ್ನು ಅಭಿವೃದ್ಧಿಪಡಿಸಿದ್ದು, ಪ್ರಸ್ತುತ 3.5 ಕೋಟಿ ಚದರ ಅಡಿಗಳ ಕಾಮಗಾರಿ ನಡೆಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts