More

    ದುಬೈ ನೈಟ್​ ಕ್ಲಬ್​ ಜತೆ ಡೀಲು: ಪೆನ್ನಿ ಸ್ಟಾಕ್​ಗೆ ಡಿಮ್ಯಾಂಡೊ ಡಿಮ್ಯಾಂಡು…

    ಮುಂಬೈ: ಇದೊಂದು ಡೀಲ್​ ಆದ ತಕ್ಷಣವೇ ಈ ಪೆನ್ನಿ ಷೇರುಗಳನ್ನು ಖರೀದಿಸಲು ನೂಕುನುಗ್ಗಲು ಕಂಡುಬಂದಿದೆ, ಈ ಕಾರಣಕ್ಕಾಗಿ ಷೇರು ಬೆಲೆ ಸಾಕಷ್ಟು ಏರಿಕೆಯಾಗಿ, ಈ ಮೊದಲು ಹೂಡಿಕೆ ಮಾಡಿದವರ ಮೊಗದಲ್ಲಿ ಸಂತಸದ ಅಲೆ ಎದ್ದಿದೆ.

    ವಿಕಾಸ್ ಲೈಫ್‌ಕೇರ್ ಲಿಮಿಟೆಡ್ (Vikas Lifecare Ltd) ಷೇರು. ಇದೊಂದು ಸ್ಮಾಲ್ ಕ್ಯಾಪ್ ಕಂಪನಿ. ಇತ್ತೀಚೆಗೆ ನಿರಂತರವಾಗಿ ಏರುತ್ತಿರುವ ಈ ಷೇರು ಬೆಲೆ ಮಂಗಳವಾರ ಒಂದೇ ದಿನದಲ್ಲಿ ಶೇಕಡಾ 9ರಷ್ಟು ಹೆಚ್ಚಳವಾಗಿ, 7.92 ರೂಪಾಯಿಗೆ ತಲುಪಿದೆ.

    ಮಂಗಳವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಕಂಪನಿಯ ಷೇರುಗಳು ದರವು ಶೇಕಡಾ 18ಕ್ಕಿಂತ ಹೆಚ್ಚಳ ಕಂಡು ಹೊಸ ಗರಿಷ್ಠ ಮಟ್ಟವನ್ನು ತಲುಪಿದ್ದವು. ಒಂದು ತಿಂಗಳಲ್ಲಿ ಈ ಷೇರಿನ ಬೆಲೆ 46% ಹೆಚ್ಚಾಗಿದೆ.

    ಷೇರುಗಳ ಈ ಏರಿಕೆಗೆ ಒಂದು ದೊಡ್ಡ ವ್ಯವಹಾರ ಕಾರಣವಾಗಿದೆ. ದುಬೈ ಮೂಲದ SKY 2.0 ಕ್ಲಬ್ ಅನ್ನು 79 ಮಿಲಿಯನ್ ಡಾಲರ್​ಗೆ (ಅಂದಾಜು 650 ಕೋಟಿ ರೂಪಾಯಿಗೆ) ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ವಿಕಾಸ್ ಲೈಫ್‌ಕೇರ್ ಲಿಮಿಟೆಡ್​ ಬಿಎಸ್​ಇಗೆ ತಿಳಿಸಿದೆ.

    ದುಬೈ ಕ್ಲಬ್​ನಲ್ಲಿ ಶೇಕಡಾ 60ರಷ್ಟು ಪಾಲನ್ನು ಪಡೆಯಲು ಈ ಕಂಪನಿ ಯೋಜಿಸುತ್ತಿದೆ. ವಿಕಾಸ್ ಲೈಫ್‌ಕೇರ್‌ನ ಬಿಎಸ್‌ಇ ಫೈಲಿಂಗ್ ಪ್ರಕಾರ, ಈ ಸ್ವಾಧೀನ ಪ್ರಕ್ರಿಯೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

    ಬಿಎಸ್​ಇ ಫೈಲಿಂಗ್ ಪ್ರಕಾರ, “ಸ್ವಾಧೀನವು ವಿಕಾಸ್ ಲೈಫ್‌ಕೇರ್ ಲಿಮಿಟೆಡ್ ಮತ್ತು ಹೋಲ್ಡಿಂಗ್ ಕಂಪನಿ M/s ಬ್ಲೂ ಸ್ಕೈ ಈವೆಂಟ್ ಹಾಲ್ FZ-LLC, ದುಬೈ ನಡುವೆ ಆಗಿದೆ.”

    ಸ್ಕೈ 2.0 ಕ್ಲಬ್ ವ್ಯವಹಾರದಲ್ಲಿ 60% ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಸಹಿ ಮಾಡಲಾದ ಷೇರು ವಿನಿಮಯ ಒಪ್ಪಂದವಾಗಿದೆ. ಸರಿಸುಮಾರು 130 ಮಿಲಿಯನ್‌ ಡಾಲರ್​ಗೆ ಈ ಒಪ್ಪಂದವಾಗಿದೆ. ಈ ಆರ್ಥಿಕ ವರ್ಷದೊಳಗೆ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

    ‘SKY 2.0’ ಮಧ್ಯಪ್ರಾಚ್ಯ ಮತ್ತು ಏಷ್ಯಾದ ಅತಿದೊಡ್ಡ ನೈಟ್‌ಕ್ಲಬ್ ಆಗಿದೆ, ಇದು ಬಯಲು ಸ್ಥಳವಾಗಿದೆ. SKY 2.0 2023 ರ ಅವಧಿಯಲ್ಲಿ ಸುಮಾರು 22.10 ಮಿಲಿಯನ್‌ ಡಾಲರ್​ಗಳಷ್ಟು ಒಟ್ಟು ಆದಾಯವನ್ನು ದಾಖಲಿಸಿದೆ, ಶೇಕಡಾ 38.80 ನಿವ್ವಳ ಲಾಭ ಮತ್ತು ವರ್ಷದಿಂದ ವರ್ಷಕ್ಕೆ (YoY) ಆಧಾರದ ಮೇಲೆ ಆದಾಯದಲ್ಲಿ ಶೇಕಡಾ 36 ಬೆಳವಣಿಗೆಯನ್ನು ಹೊಂದಿದೆ.

    ವಿಕಾಸ್ ಲೈಫ್‌ಕೇರ್ ಇತ್ತೀಚೆಗೆ ಮನರಂಜನೆ ಮತ್ತು ಆತಿಥ್ಯ ವ್ಯವಹಾರಕ್ಕೆ ಪ್ರವೇಶಿಸಿದೆ. ಕಳೆದ ವಾರ, ಕಂಪನಿಯು ಪೋರ್ಟ್‌ಫೋಲಿಯೊ ಮ್ಯಾನೇಜಿಂಗ್ ಈವೆಂಟ್ಸ್ ಎಲ್‌ಎಲ್‌ಸಿ, ದುಬೈ, ಯುಎಇ (ಪಿಎಂಇ ಎಂಟರ್‌ಟೈನ್‌ಮೆಂಟ್) 201 ಕೋಟಿ ಮೌಲ್ಯದ ಎಂಟರ್‌ಪ್ರೈಸ್ ಮೌಲ್ಯದಲ್ಲಿ 50 ಪ್ರತಿಶತ ಪಾಲನ್ನು ಪಡೆದುಕೊಂಡಿದೆ.

    ವಿಕಾಸ್ ಲೈಫ್‌ಕೇರ್ ಪಾಲಿಮರ್, ರಬ್ಬರ್ ಸಂಯುಕ್ತಗಳು ಮತ್ತು ಪ್ಲಾಸ್ಟಿಕ್‌ಗಳು, ಸಿಂಥೆಟಿಕ್ ಮತ್ತು ನೈಸರ್ಗಿಕ ರಬ್ಬರ್‌ಗಳಿಗೆ ವಿಶೇಷ ಸೇರ್ಪಡೆಗಳ ತಯಾರಿಕೆ ಮತ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ. ಕಂಪನಿಯು ಇತ್ತೀಚಿಗೆ ತನ್ನ ವ್ಯಾಪಾರದ ಆಸಕ್ತಿಗಳನ್ನು ಕಚ್ಚಾ ವಸ್ತುಗಳ ಆಚೆಗೆ ವಿಸ್ತರಿಸಿದ್ದು, B2C (ಬಿಸಿನೆಸ್​ ಟು ಕಸ್ಟಮರ್​) ವಿಭಾಗಕ್ಕೆ ದಾಪುಗಾಲು ಹಾಕಿದೆ.

    ಇತ್ತೀಚೆಗೆ ವಿಕಾಸ್ ಲೈಫ್‌ಕೇರ್ ಸ್ಮಾರ್ಟ್ ಮೀಟರ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಷೇರು ಮಾರುಕಟ್ಟೆಯಲ್ಲಿ 108 ಕೋಟಿ ರೂಪಾಯಿ ಹೂಡಿಕೆ ಮಾಡಿದೆ..

    ವಿಕಾಸ್ ಲೈಫ್‌ಕೇರ್‌ನ ಷೇರುಗಳು ಕಳೆದ ಒಂದು ತಿಂಗಳಲ್ಲಿ 45.45% ಏರಿಕೆಯಾಗಿವೆ. ಈ ಷೇರು ಆರು ತಿಂಗಳಲ್ಲಿ 132.26% ಗಳಿಸಿದೆ. ಈ ಅವಧಿಯಲ್ಲಿ ಇದರ ಬೆಲೆ 3 ರೂಪಾಯಿಯಿಂದ ಆರಂಭವಾಗಿ ಈಗಿನ ಬೆಲೆಗೆ ಏರಿಕೆಯಾಗಿವೆ. ಐದು ವರ್ಷಗಳಲ್ಲಿ ಈ ಷೇರು 171% ಏರಿಕೆಯಾಗಿದೆ. ಇದರ 52 ವಾರದ ಗರಿಷ್ಠ ಬೆಲೆ ರೂ 7.92 ಮತ್ತು 52 ವಾರದ ಕನಿಷ್ಠ ಬೆಲೆ ರೂ 2.66 ಆಗಿದೆ.

    ಗೂಳಿ ಹಿಮ್ಮೆಟ್ಟಿಸಿದ ಕರಡಿಯ ಕುಣಿತ; 1000 ಅಂಕ ಮೀರಿ ಕುಸಿತ: ಷೇರು ಪೇಟೆಯಲ್ಲಿ ಏಕೆ ರಕ್ತಪಾತ?

    ಮಂದಿರ ಉದ್ಘಾಟಿಸಿದ ನಂತರ ಘೋಷಿಸಿದ ಮೊದಲ ಸ್ಕೀಂ ‘ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ’: ನೀವು ಎರಡು ರೀತಿಯಲ್ಲಿ ಲಾಭ ಮಾಡಿಕೊಳ್ಳಬಹುದು….

    ಒಂದೇ ವರ್ಷದಲ್ಲಿ 430% ಆದಾಯ ನೀಡಿದ ರೈಲ್ವೆ ಷೇರು: ಫೆ.1ರ ಬಜೆಟ್​ವರೆಗೆ ಭಾರಿ ಲಾಭ ನೀಡಲಿದೆ ಎನ್ನುತ್ತಾರೆ ತಜ್ಞರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts