

ಕೋಟ: ಅನುದಾನರಹಿತ ಶಾಲೆಗಳಲ್ಲಿನ ಅಧ್ಯಾಪಕರು ಹಾಗೂ ಸಂಚಾಲಕರಿಗಾಗಿ ಇರುವ ರುಪ್ಸಾ (Recognised Unaided Private School's Association of Karnataka) ಸಂಘಟನೆಯ ಉತ್ತಮ ಆಡಳಿತಗಾರ ಪ್ರಶಸ್ತಿಗೆ ಸಾಸ್ತಾನ ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕಿ ಅನಿತಾ ಡಿಆಲ್ಮೇಡಾ ಭಾಜನರಾಗಿದ್ದಾರೆ. ಅ.21ರಂದು ಬೆಂಗಳೂರಿನ ಜುಬಿಲಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.