

ಕೋಟ: ಪಾಂಡೇಶ್ವರ ವಲಯಕ್ಕೆ ಸೇರಿದ ಕಾರ್ಕಡ ಪಡುಬೈಲಿನ ಅಣ್ಣಪ್ಪ ಪೂಜಾರಿ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾಟರ್ಬೆಡ್ ನೀಡಲಾಯಿತು. ಬ್ರಹ್ಮಾವರ ತಾಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಅಚ್ಚುತ ಪೂಜಾರಿ ಅವರು ಹಸ್ತಾಂತರಿಸಿದರು. ಅಣ್ಣಪ್ಪ ಅವರ ಪತ್ನಿ ಕರಿಯಮ್ಮ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ವಲಯಾಧ್ಯಕ್ಷೆ ರಾಧಾ ಎಸ್.ಪೂಜಾರಿ, ಮೇಲ್ವಿಚಾರಕಿ ಜಯಲಕ್ಷ್ಮೀ, ಸೇವಾ ಪ್ರತಿನಿಧಿ ಶಾರದಾ ಉಪಸ್ಥಿತರಿದ್ದರು.