ನಾಯಿ ಉಪಚಾರ: ರತನ್ ಟಾಟಾಗೆ ನಟಿ ರೂಪಾಲಿ ಗಂಗೂಲಿ ಶ್ಲಾಘನೆ

rathan
Published on

ನವದೆಹಲಿ: ಮುಂಬೈನ ತಾಜ್ ಹೋಟೆಲ್ ಆವರಣದಲ್ಲಿ ಬಿಡಾಡಿ ಪ್ರಾಣಿಗಳಿಗೆ ಉಪಚರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಕ್ಕಾಗಿ
ರತನ್ ಟಾಟಾ ಅವರಿಗೆ ಕಿರುತೆರೆ ನಟಿ ರೂಪಾಲಿ ಗಂಗೂಲಿ ಶ್ಲಾಘಿಸಿದ್ದಾರೆ.

ಇದನ್ನೂ ಓದಿ:

ಪೋಸ್ಟ್​ನಲ್ಲಿ " ರತನ್​ ಟಾಟಾ ಅವರು ಚಿನ್ನದಂತಹ ಹೃದಯವಂತಿಕೆ ಇರುವ ವ್ಯಕ್ತಿಯಾಗಿದ್ದರೆ. ಅವರಿಗೆ ನನ್ನ ಗೌರವಪೂರ್ವಕ ಧನ್ಯವಾದಗಳು. ನನ್ನ ಆರಾಧ್ಯ @ratantataji " ಎಂದು ಬರೆದಿದ್ದಾರೆ.

ಇತ್ತೀಚೆಗೆ ಹೋಟೆಲ್ ಆವರಣದೊಳಗೆ ನಿದ್ರಿಸುತ್ತಿದ್ದ ಬೀದಿ ನಾಯಿಯ ಚಿತ್ರವನ್ನು ಹೋಟೆಲ್​ ಸಿಬ್ಬಂದಿ ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದು, ಅದಕ್ಕೆ ರತನ್​ ಟಾಟಾ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಅವರು ಆ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಹಾಕಿ, ಹೋಟೆಲ್ ಆವರಣಕ್ಕೆ ಪ್ರವೇಶಿಸುವ ಪ್ರಾಣಿಗಳಿಗೆ 'ಚೆನ್ನಾಗಿ ನೋಡಿಕೊಳ್ಳಿ' ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಏತನ್ಮಧ್ಯೆ, ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಬಹುಮುಖ ಅಭಿನಯಕ್ಕಾಗಿ ಹೆಸರುವಾಸಿಯಾಗಿರುವ ರೂಪಾಲಿ ಗಂಗೂಲಿ ಅವರು ಪ್ರಸ್ತುತ ಜನಪ್ರಿಯ ದೂರದರ್ಶನ ಧಾರಾವಾಹಿ 'ಅನುಪಮಾ'ದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಸಾರಾಭಾಯಿ ವರ್ಸಸ್ ಸಾರಾಭಾಯ್' ಚಿತ್ರದಲ್ಲಿ ಮೋನಿಶಾ ಪಾತ್ರದಿಂದ ನಟಿ ಹೆಸರುವಾಸಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net