RSS ಕೇಂದ್ರ ಕಚೇರಿ ದಾಳಿಯ ಸಂಚುಕೋರ; ಲಷ್ಕರ್‌ನ ಪ್ರಮುಖ ಭಯೋತ್ಪಾದಕ ‘ಸೈಫುಲ್ಲಾ’ ಹತ್ಯೆ| Saifullah

blank

ಇಸ್ಲಾಮಾಬಾದ್ : ಪಾಕಿಸ್ತಾನ ಮೂಲದ ಭಯೋತ್ಪಾದಕ ಲಷ್ಕರ್-ಎ-ತೈಬಾದ ಉನ್ನತ ಕಮಾಂಡರ್ ಸೈಫುಲ್ಲಾ ಅವರನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ದಾಳಿಕೋರರು ಕೊಂದಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ವಿನೋದ್ ಕುಮಾರ್, ಮೊಹಮ್ಮದ್ ಸಲೀಂ, ಖಾಲಿದ್, ವನಿಯಾಲ್, ವಾಜಿದ್ ಮತ್ತು ಸಲೀಂ ಭಾಯ್ ಸೇರಿದಂತೆ ಬಹು ಅಲಿಯಾಸ್‌ಗಳಿಂದ ಕರೆಯಲ್ಪಡುವ ಸೈಫುಲ್ಲಾ, ಎಲ್‌ಇಟಿಯ ಕಾರ್ಯಾಚರಣೆಗಳು, ನೇಮಕಾತಿ, ನಿಧಿಸಂಗ್ರಹಣೆ ಮತ್ತು ಗಡಿಯಾಚೆಗಿನ ಒಳನುಸುಳುವಿಕೆಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ.

blank

ಇದನ್ನೂ ಓದಿ: ಪಾಕ್​ ಪರ ಬೇಹುಗಾರಿಕೆ; ಒಡಿಶಾ ಯೂಟ್ಯೂಬರ್ ಜೊತೆ ​​’ಜ್ಯೋತಿ ಮಲ್ಹೋತ್ರಾ’ ಸಂಪರ್ಕ; ಮುಂದುವರೆದ ತನಿಖೆ | Jyothi malhotra

ಸೈಫುಲ್ಲಾ ನೇಪಾಳದಲ್ಲಿದ್ದುಕೊಂಡು ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ಮಾಡ್ತಿದ್ದ. ಆತ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆಗೂ ಸಂಬಂಧ ಹೊಂದಿದ್ದ. ಈತನನ್ನು ಭಾರತೀಯ ಭದ್ರತಾ ಸಂಸ್ಥೆಗಳ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಸೇರಿಸಲಾಗಿತ್ತು.
ಸೈಫುಲ್ಲಾ ಭಯೋತ್ಪಾದಕ ಸಂಘಟನೆಯ ಕಾರ್ಯಾಚರಣೆ ಕಮಾಂಡರ್ ಅಜಮ್ ಚೀಮಾ ಅಲಿಯಾಸ್ ಬಾಬಾಜಿಯ ಆಪ್ತ ಸಹಾಯಕನಾಗಿದ್ದ. ವಿನೋದ್ ಕುಮಾರ್ ಎಂಬ ಹೆಸರಿನಲ್ಲಿ ನೇಪಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈತ ನಗ್ಮಾ ಬಾನು ಎಂಬ ನೇಪಾಳಿ ಹುಡುಗಿಯನ್ನು ಮದುವೆಯಾಗಿದ್ದ.

ಇದನ್ನೂ ಓದಿ: ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳ ದಾಳಿ; 5.75 ಕೆಜಿ ಚಿನ್ನ ವಶ; ಇಬ್ಬರ ಬಂಧನ| Custom-officers

2006 ರಲ್ಲಿ ನಾಗ್ಪುರದ ಆರ್‌ಎಸ್‌ಎಸ್ ಪ್ರಧಾನ ಕಚೇರಿಯ ಮೇಲಿನ ದಾಳಿಯಲ್ಲಿ ಅವರು ಭಾಗಿಯಾಗಿದ್ದ. ಇದಲ್ಲದೆ, ರಾಂಪುರದಲ್ಲಿ ಸಿಆರ್‌ಪಿಎಫ್ ಶಿಬಿರದ ಮೇಲಿನ ದಾಳಿಯಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದನು. ಬೆಂಗಳೂರಿನ ಐಐಎಸ್‌ಸಿ ಮೇಲಿನ ದಾಳಿಯ ಪಿತೂರಿಯಲ್ಲೂ ಇವನು ಭಾಗಿಯಾಗಿದ್ದನು.
(ಏಜೆನ್ಸೀಸ್)

ಭಾರತ-ಪಾಕ್​ ಸಂಘರ್ಷ; ಮೋದಿ ಸರ್ಕಾರದ ಜಾಗತಿಕ ಸಂಸದರ ನಿಯೋಗವನ್ನು ಟೀಕಿಸಿದ ಸಂಜಯ್ ರಾವತ್| Delegation

Share This Article
blank

ನಿಮ್ಮ ಬೆಳಿಗ್ಗೆಯನ್ನು ಹೀಗೆ ಆರಂಭಿಸಿ.. ಈ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ..! healthy morning

healthy morning: ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಆಲೋಚನೆಗಳು ಮತ್ತು…

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

blank