

ನವದೆಹಲಿ: ಆರ್‌ಎಸ್‌ಎಸ್(RSS) 52 ವರ್ಷಗಳಿಂದ ರಾಷ್ಟ್ರಧ್ವಜವನ್ನು ಹಾರಿಸಿಲ್ಲ. ಅಲ್ಲದೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶದ ಸಂವಿಧಾನವನ್ನು ಬದಲಾಯಿಸಲು ಬಯಸುತ್ತವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ (ನ.7) ಆರೋಪಿಸಿದ್ದಾರೆ.
ವಂದೇ ಮಾತರಂನ 150 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 1896 ರಿಂದ ಇಂದಿನವರೆಗೆ, ಪ್ರತಿಯೊಂದು ಕಾಂಗ್ರೆಸ್ ಸಭೆಯಲ್ಲಿ, ಅದು ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ಸಾಮಾನ್ಯ ಸಭೆಯಲ್ಲಿರಲಿ ಅಥವಾ ಬ್ಲಾಕ್ ಮಟ್ಟದಲ್ಲಿರಲಿ, ನಾವು ಭಾರತದ ಜನರಿಗೆ ಗೌರವವಾಗಿ ವಂದೇ ಮಾತರಂ ಗೀತೆಯನ್ನು ಹೆಮ್ಮೆಯಿಂದ ಮತ್ತು ದೇಶಭಕ್ತಿಯಿಂದ ಹಾಡಿದ್ದೇವೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವು ನಮ್ಮ ಮಾತೃಭೂಮಿಯ ಶಾಶ್ವತ ಹಾಡಾಗಿದೆ. ನಮ್ಮ ದೇಶದ ಏಕತೆಗೆ ಕರೆ ಮತ್ತು ಭಾರತದ ಅಮರ ಆತ್ಮದ ಧ್ವನಿಯಾದ ವಂದೇ ಮಾತರಂನಲ್ಲಿ ತನ್ನ ಅಚಲ ನಂಬಿಕೆಯನ್ನು ಪುನರುಚ್ಚರಿಸುತ್ತದೆ ಎಂದು ಖರ್ಗೆ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರು ಖರ್ಗೆ, ರಾಷ್ಟ್ರೀಯ ಚಳವಳಿಯಲ್ಲಿ ಭಾರತೀಯರ ವಿರುದ್ಧ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರ ಬ್ರಿಟಿಷರ ಪರವಾಗಿ ನಿಂತಿದ್ದು ಎಲ್ಲರಿಗೂ ತಿಳಿದಿರುವ ಸತ್ಯವಾಗಿದೆ. ಅಲ್ಲದೆ, RSS 52 ವರ್ಷಗಳ ಕಾಲ ರಾಷ್ಟ್ರಧ್ವಜವನ್ನು ಹಾರಿಸಲಿಲ್ಲ. ಭಾರತೀಯ ಸಂವಿಧಾನವನ್ನು ದುರುಪಯೋಗಪಡಿಸಿಕೊಂಡರು. ಆರ್‌ಎಸ್‌ಎಸ್ ಬಾಪು ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಕೃತಿಗಳನ್ನು ಸುಟ್ಟಿತು ಮತ್ತು ಸರ್ದಾರ್ ಪಟೇಲ್ ಅವರ ಮಾತಿನಲ್ಲಿ ಹೇಳುವುದಾದರೆ, ಗಾಂಧೀಜಿಯವರ ಹತ್ಯೆಯಲ್ಲಿಯೂ ಭಾಗಿಯಾಗಿತ್ತು ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ವಂದೇ ಮಾತರಂ ಮತ್ತು ಜನ ಗಣ ಮನ ಎರಡರ ಬಗ್ಗೆಯೂ ಅಪಾರ ಹೆಮ್ಮೆಯನ್ನು ಹೊಂದಿದೆ. ಪ್ರತಿ ಕಾಂಗ್ರೆಸ್ ಸಭೆ ಮತ್ತು ಕಾರ್ಯಕ್ರಮದಲ್ಲಿ ಎರಡೂ ಹಾಡುಗಳನ್ನು ಭಕ್ತಿಯಿಂದ ಹಾಡಲಾಗುತ್ತದೆ. ಇದು ಭಾರತದ ಏಕತೆ ಮತ್ತು ಹೆಮ್ಮೆಯನ್ನು ಸಂಕೇತಿಸುತ್ತದೆ ಎಂದು ಖರ್ಗೆ ತಿಳಿಸಿದ್ದಾರೆ. (ಏಜೆನ್ಸೀಸ್)