ವಿಜಯ ದಶಮಿಯಂದು ಶಾಸ್ತ್ರ ಪೂಜೆ ನೆರವೇರಿಸಿದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ |Shastra Puja

untitled-design-2025-10-02t111347680-68de111c268f5
Published on

Shastra Puja: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್​) ಮುಖ್ಯಸ್ಥ ಮೋಹನ್​ ಭಾಗವತ್​ ಗುರುವಾರ ನಾಗ್ಪುರದ ಸಂಘಟನೆಯಲ್ಲಿ ವಿಜಯ ದಶಮಿ ಹಬ್ಬದ ನಿಮಿತ್ತ ಶಾಸ್ತ್ರ ಪೂಜೆ ನೆರವೇರಿಸಿದರು.

ಆರ್​ಎಸ್​ಎಸ್​ನ ಪ್ರಧಾನ ಕಚೇರಿಯ ರೇಶಿಂಬಾಗ್​ ಮೈದಾನದಲ್ಲಿ ನಡೆದ ಶಾಸ್ತ್ರ ಪೂಜೆಯ ಸಂದರ್ಭದಲ್ಲಿ ಸಾಂಪ್ರದಾಯಿಕ ಶಸ್ತ್ರಾಸ್ರಗಳ ಜೊತೆಗೆ, ಪಿನಾಕಾ ಎಂಕೆ-1, ಪಿನಾಕಾ ಎನ್​ಹಾನ್ಸ್​ ಮತ್ತು ಪಿನಾಕಾ ಸೇರಿದಂತೆ ಆಧುನಿಕ ಶಸ್ತ್ರಾಸ್ತ್ರಗಳ ಪ್ರತಿಕೃತಿಗಳು ಮತ್ತು ಡ್ರೋನ್​ಗಳನ್ನು ಪ್ರದರ್ಶಿಸಲಾಯಿತು.

ಈ ವೇಳೆ ಮಾತನಾಡಿದ ಮುಖ್ಯಸ್ಥ ಮೋಹನ್​ ಭಾಗವತ್​, ಇಂದು ಸಂಘ 100 ವರ್ಷಗಳ ಪೂರೈಸಿದ್ದು, ಇದನ್ನು ಆಚರಿಸಲು ನಾವಿಂದು ಇಲ್ಲಿ ಸೇರಿದ್ದೇವೆ. ಇನ್ನು ಪ್ರಪಂಚದೊಂದಿಗೆ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳನ್ನು ಉಳಿಸಿಕೊಳ್ಳುವಾಗ ಸ್ಥಳೀಯ ಮತ್ತು ಸ್ವಾವಲಂಬಿ ವಿಧಾನವನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಗಡಿಯಾಚೆಯಿಂದ ಬಂದ ಭಯೋತ್ಪಾದಕರು ಧರ್ಮವನ್ನು ಕೇಳಿ 26 ಭಾರತೀಯರನ್ನು ಕೊಂದರು. ಈ ಭಯೋತ್ಪಾದಕ ದಾಳಿಯು ರಾಷ್ಟ್ರವನ್ನು ಶೋಕದಲ್ಲಿ ಮುಳುಗಿಸಿದ್ದು, ಈ ವೇಳೆ ನಮ್ಮ ಸರ್ಕಾರ ಸಂಪೂರ್ಣ ಸಿದ್ದತೆಗಳೊಂದಿಗೆ ಪಾಕ್​ ಭಯೋತ್ಪಾದಕರಿಗೆ ಬುದ್ಧಿ ಕಲಿಸಿತು. ಇದು ಸರ್ಕಾರದ ಸಮರ್ಪಣೆ, ಸಶಸ್ತ್ರ ಪಡೆಗಳ ಶೌರ್ಯ ಸಮಾಜದಲ್ಲಿನ ಏಕತೆಯನ್ನು ಪ್ರತಿನಿಧಿಸುತ್ತದೆ ಎಂದರು.

ದೇಶವು ಪರಸ್ಪರ ಅವಲಂಬನೆಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಯಾವುದೇ ಎರಡು ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಹೀಗೆ ಇರಲು ಬಯಸುತ್ತದೆ. ಯಾವುದೇ ದೇಶವು ಆಡಳಿತದಲ್ಲಿ ಬದುಕಲು ಸಾಧ್ಯವಿಲ್ಲ. ನಾವು ಸ್ವದೇಶಿ ವಸ್ತುಗಳನ್ನು ಅವಲಂಬಿಸಿ, ಸ್ವಾವಲಂಬನೆಯತ್ತ ಗಮನ ಹರಿಸಬೇಕು. ಆದರೆ, ಎಲ್ಲಾ ರಾಷ್ಟ್ರಗಳೊಂದಿಗೆ ಸ್ನೇಹಪರ ಸಂಬಂಧಗಳನ್ನು ಹೊಂದಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಉಪಸ್ಥಿತರಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net