ಟರ್ಕಿಯಲ್ಲಿ ಲಿಫ್ಟ್​ ಕೇಳಿ ಕಾರು ಏರಿದ ಕೇರಳ ವ್ಲಾಗರ್​ಗೆ ಕಾದಿತ್ತು ಬಿಗ್​ ಶಾಕ್: ಮಾರ್ಗ ಮಧ್ಯೆ ಅಸಹ್ಯ ಕೃತ್ಯ! Backpacker Arunima ​

Backpacker Arunima
Published on

Backpacker Arunima : ಕೇರಳ ಮೂಲದ ಪ್ರಖ್ಯಾತ ಟ್ರಾವೆಲ್​ ವ್ಲಾಗರ್​ ಅರುಣಿಮಾ ಬ್ಯಾಕ್‌ಪ್ಯಾಕರ್, ವಿದೇಶಿ ಪ್ರಯಾಣದ ವೇಳೆ ತಮಗಾದ ಅತಿ ಕೆಟ್ಟ ಅನುಭವವನ್ನು ತಮ್ಮ ಯೂಟ್ಯೂಬ್​ ಚಾನೆಲ್​ (ಬ್ಯಾಕ್​ಪ್ಯಾಕರ್​ ಅರುಣಿಮಾ)ನಲ್ಲಿ ಹಂಚಿಕೊಂಡಿದ್ದಾರೆ.

ಒಂಟಿಯಾಗಿ ಜಗತ್ತನ್ನು ಸುತ್ತುವ ಅರುಣಿಮಾ, ತನ್ನ ಎಲ್ಲಾ ಅನುಭವಗಳನ್ನು ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಹಂಚಿಕೊಳ್ಳುತ್ತಾರೆ. ಈಗ ಟರ್ಕಿಯಲ್ಲಿ ತನಗಾದ ಕರಾಳ ಅನುಭವವನ್ನು ವಿವರಿಸಿದ್ದಾರೆ.

ಅರುಣಿಮಾ ಟರ್ಕಿಯಲ್ಲಿ ಓರ್ವ ವ್ಯಕ್ತಿಯಿಂದ ಲಿಫ್ಟ್ ಕೇಳಿದಳು. ಬಳಿಕ ಆತನ BMW ಕಾರನ್ನು ಏರಿದಳು. ಪ್ರಯಾಣದ ಸಮಯದಲ್ಲಿ ಆತ, ಅರುಣಿಮಾಗೆ ನೀರಿನ ಬಾಟಲಿಯನ್ನು ಕೊಟ್ಟನು. ಅಲ್ಲದೆ, ಸಿಗರೇಟ್ ಬೇಕಾ ಅಂತಾನೂ ಕೇಳಿದನು. ಆದರೆ, ಸ್ವಲ್ಪ ದೂರದಲ್ಲಿ ಆತ ತನ್ನ ಕರಾಳ ಮುಖವನ್ನು ಬಿಚ್ಚಿಟ್ಟನು. ಕೆಲವೇ ಸಮಯದಲ್ಲಿ ಆತ ತನ್ನ ಕಾರು ನಿಲ್ಲಿಸಿ ಹಸ್ತಮೈಥುನ ಮಾಡಿಕೊಳ್ಳಲು ಪ್ರಾರಂಭಿಸಿದನು. ಈ ವೇಳೆ ಅರುಣಿಮಾಗೆ ಏನು ಮಾಡಬೇಕೆಂದು ತೋಚಲಿಲ್ಲ. ಒಂದು ಕ್ಷಣ ಶಾಕ್​ ಆದಳು. ಅಂತಿಮವಾಗಿ ಆಕೆ ಒಂದು ಪೆಟ್ರೋಲ್​ ಬಂಕ್​ನಲ್ಲಿ ಆತನ ಕಾರಿನಿಂದ ಕೆಳಗಿಳಿದಳು.

ಅನೇಕ ಹುಡುಗಿಯರು ಇಂತಹ ಅನುಭವಗಳನ್ನು ಹೊಂದಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಅರುಣಿಮಾ ಅವರು ಈ ವಿಡಿಯೋವನ್ನು ತಮ್ಮ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಡಿಯೋದಲ್ಲಿ, ಅರುಣಿಮಾ "ನೀನು ಏನು ಮಾಡ್ತಿದ್ದೀಯಾ?" ಎಂದು ಕೇಳುತ್ತಿರುವುದು ಕಂಡುಬರುತ್ತದೆ. ಅವನು ವಿಡಿಯೋ ತೆಗೆಯಬೇಡಿ ಎಂದು ಹೇಳುತ್ತಾನೆ. ಅಲ್ಲದೆ, ಆತ ಕೆಲವು ಅಸಭ್ಯ ಮಾತುಗಳನ್ನು ಸಹ ಆಡುತ್ತಿದ್ದಾನೆ ಎಂದು ಅರುಣಿಮಾ ವಿವರಿಸಿದ್ದಾರೆ. ಕೊನೆಯಲ್ಲಿ ಅರುಣಿಮಾ ಹತ್ತಿರದ ಪೆಟ್ರೋಲ್​ ಬಂಕ್​ನಲ್ಲಿ ಕಾರಿನಿಂದ ಇಳಿಯುತ್ತಾಳೆ.

ಕಾರಿನಲ್ಲಿ ಇಷ್ಟೊಂದು ಕೆಟ್ಟ ಅನುಭವ ಆಗಿರುವುದು ಇದೇ ಮೊದಲು ಎಂದು ಅರುಣಿಮಾ ಹೇಳುತ್ತಾರೆ. ಒಂದು ದೇಶದಲ್ಲಿ ನನಗೆ ಹಲವು ಒಳ್ಳೆಯ ಮತ್ತು ಕೆಟ್ಟ ಅನುಭವಗಳಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಅರುಣಿಮಾ ಅವರನ್ನು ಬೆಂಬಲಿಸಿ ಅನೇಕರು ವಿಡಿಯೋ ಕೆಳಗೆ ಕಾಮೆಂಟ್ ಮಾಡಿದ್ದಾರೆ. ಆದರೆ, ಒಂದು ದೇಶದಲ್ಲಿ ನಿಮಗೆ ಪರಿಚಯವಿಲ್ಲದ ಜನರಿಂದ ಲಿಫ್ಟ್ ಕೇಳುವುದು ಸರಿಯಲ್ಲ ಮತ್ತು ಇಂತಹ ಅನುಭವಗಳು ಸಂಭವಿಸಬಹುದು ಎಂದು ಅನೇಕರು ಆಕೆಯನ್ನು ಟೀಕಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net