

Water Bill: ಸಾಮಾನ್ಯವಾಗಿ ದೇಶದ ಸಿಲಿಕಾನ್ ವ್ಯಾಲಿ ಹಾಗೂ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ನಗರ ಎಂದೇ ಪ್ರಸಿದ್ಧಿ ಪಡೆದ ಬೆಂಗಳೂರು ನಗರ ಟ್ರಾಫಿಕ್ನಲ್ಲಿಯೂ ಅಷ್ಟೆ ಕುಖ್ಯಾತಿ ಪಡೆದಿದೆ. ಇದೀಗ ದಿನೇದಿನೆ ನಗರದ ಲಿವಿಂಗ್ ಕಾಸ್ಟ್ ಹೆಚ್ಚಳವಾಗುತ್ತಿದ್ದು, ಮಧ್ಯಮ ವರ್ಗದವರಿಗೆ ಬದುಕೊದೇ ದುಸ್ತರವಾಗಿದೆ. ಆದಾಗ್ಯೂ ನಗರದ ಬಾಡಿಗೆ ಮನೆಯಲ್ಲಿ ವಾಸಿಸುವ ವ್ಯಕ್ತಿಯೊಬ್ಬ ಒಂದು ತಿಂಗಳ ವಾಟರ್ ಬಿಲ್ ನೋಡಿ ಶಾಕ್ ಆಗಿದ್ದಾನೆ. ಅಲ್ಲದೆ, ಈ ಬಿಲ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವಿಷಾದ ವ್ಯಕ್ತ ಪಡಿಸಿದ್ದಾನೆ.
ಹೌದು, "ನನ್ನ ಮನೆ ಮಾಲೀಕರು ಪ್ರತಿ ತಿಂಗಳು ಅತಿಯಾದ ಬಿಡಬ್ಲ್ಯೂಎಸ್ಎಸ್ಬಿ (ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ) ನೀರಿನ ಶುಲ್ಕಗಳಿಂದ ನನ್ನನ್ನು ಬೈಯುತ್ತಿದ್ದಾರೆ" ಎಂಬ ಶೀರ್ಷಿಕೆಯ ರೆಡ್ಡಿಟ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಬಳಕೆದಾರರು 165,000 ಲೀಟರ್ ನೀರಿಗೆ ಸುಮಾರು 15,800 ರೂ. ಬಿಲ್ ಹಾಕಿದ್ದಾರೆ ಎಂದು ಬಿಲ್ ಅನ್ನು ಸಹ ಹರಿಬಿಟ್ಟಿದ್ದಾರೆ.
"ನಾವು ಸಾಮಾನ್ಯವಾಗಿ ಪ್ರತಿ ತಿಂಗಳು ಸುಮಾರು 10 ಸಾವಿರ ನೀರಿನ ಬಿಲ್ ಪಡೆಯುತ್ತೇವೆ. ಮನೆಯಲ್ಲಿ ವಾಸಿಸುವುದು ಇಬ್ಬರು ಮಾತ್ರ, ಹೆಚ್ಚಿನ ಸಮಯವನ್ನು ಕಚೇರಿಯಲ್ಲಿ ಕಳೆಯುತ್ತೇವೆ" ಎಂದಿದ್ದಾನೆ.
"ಇದಕ್ಕಾಗಿ ನಾನು ಅವರೊಂದಿಗೆ(ಮನೆ ಮಾಲೀಕ) ಹೋರಾಡಲು ಪ್ರಯತ್ನಿಸಿದೆ. ಆದರೆ, ಅವರು ಯಾವಾಗಲೂ ನನಗೆ ಮೂರ್ಖತನದ ನೆಪಗಳನ್ನು ನೀಡುತ್ತಾರೆ. ಪ್ರತಿ 15 ದಿನಗಳಿಗೊಮ್ಮೆ ನಮಗೆ ಒಂದು ಅಥವಾ ಎರಡು ದಿನಗಳು ಹರಿಯುವ ನೀರು ಸಿಗುವುದಿಲ್ಲ. ಈ ಪರಿಸ್ಥಿತಿಯಲ್ಲಿ ನಾನು ಏನು ಮಾಡಬೇಕು?" ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
My landlord slams me with exorbitant BWSSB water charges every month. byu/ananttodani inbangalore
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ವರ್ಗವು ನೀರಿನ ಬಿಲ್ ಇಷ್ಟೊಂದು ಹೆಚ್ಚಾಗಲು ಸಾಧ್ಯವಿಲ್ಲ ಎಂದು ಗಮನಸೆಳೆದರು ಮತ್ತು ಮೀಟರ್ ಸಂಪರ್ಕವನ್ನು ಪರಿಶೀಲಿಸುವಂತೆ ವ್ಯಕ್ತಿಯನ್ನು ನೆಟ್ಟಿಗರು ಒತ್ತಾಯಿಸಿದ್ದಾರೆ.
ಈ ಬಿಲ್ ಅಸಾಧ್ಯ, ಮೀಟರ್‌ಗೆ ನಿರಂತರವಾಗಿ ಗಾಳಿ ಹರಿಯುತ್ತಿರಬಹುದು ಅಥವಾ ಮೀಟರ್ ಓದುವ ವ್ಯಕ್ತಿಯಲ್ಲಿ ನಿಜವಾಗಿಯೂ ಏನೋ ತಪ್ಪಾಗಿರಬಹುದು. ಇಬ್ಬರು ಜನರಿಗೆ ಗರಿಷ್ಠ ಬಿಲ್ 300 ಕೂಡ ದಾಟಬಾರದು ಎಂದು ಒಬ್ಬ ಬಳಕೆದಾರರು ಹೇಳಿದರು.(ಏಜೆನ್ಸೀಸ್)