"ನಮ್ಮಲ್ಲಿ ಅದ್ಭುತ..." ಸೆ.14ರಂದು ಹೈವೋಲ್ಟೇಜ್ ಪಂದ್ಯ! ಟೀಮ್​ ಇಂಡಿಯಾಗೆ ಪರೋಕ್ಷವಾಗಿ ಕುಟುಕಿದ ಪಾಕ್​ ಕೋಚ್​ | IND vs PAK

ವಿಜಯವಾಣಿ (64)
Published on

IND vs PAK: ಪ್ರಸಕ್ತ ದುಬೈನಲ್ಲಿ ಏಷ್ಯಾಕಪ್​ ಟಿ20 ಟೂರ್ನಿ ಆರಂಭಗೊಂಡಿದ್ದು, ಯುಎಇ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನು ಗೆದ್ದು ಬೀಗಿದೆ. ಇದೀಗ ಸೆ.14ರಂದು ತನ್ನ ಬದ್ಧವೈರಿ ಪಾಕಿಸ್ತಾನ ತಂಡವನ್ನು ಎದುರಿಸಲು ಸಜ್ಜಾಗಿದೆ. ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ತೀವ್ರ ಕಾತರ, ಕುತೂಹಲ ಮೂಡಿದ್ದು, ಪಂದ್ಯ ರೋಚಕತೆಗೆ ಸಾಕ್ಷಿಯಾಗಲಿದೆ ಎಂದು ಕ್ರಿಕೆಟ್​ ಪ್ರೇಮಿಗಳು ನಿರೀಕ್ಷಿಸಿದ್ದಾರೆ. ಭಾರತ-ಪಾಕ್ ಮುಖಾಮುಖಿಗೆ ಕೇವಲ ಒಂದು ದಿನ ಬಾಕಿ ಉಳಿದಿರುವಾಗಲೇ ಪಾಕಿಸ್ತಾನ ಕೋಚ್​ ಟೀಮ್ ಇಂಡಿಯಾಗೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ.

ಸವಾಲು ಎದುರಿಸಲು ಪಾಕ್ ಸಿದ್ಧ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನ ಹೆಡ್​ ಕೋಚ್ ಮೈಕ್​ ಹೆಸ್ಸನ್​, "ಭಾರತ-ಪಾಕ್​ ಪಂದ್ಯಕ್ಕಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೇನೆ. ವಿಶ್ವ ಚಾಂಪಿಯನ್ಸ್​ ಪಡೆಯನ್ನು ಎದುರಿಸಲು ನಮ್ಮ ತಂಡ ಸನ್ನದ್ಧವಾಗಿದೆ. ನಮಗೆಲ್ಲ ಗೊತ್ತಿರುವಂತೆ ಸದ್ಯ ಟೀಮ್ ಇಂಡಿಯಾ ಬಹಳ ವಿಶ್ವಾಸದಿಂದ ಕೂಡಿದೆ. ಚೆನ್ನಾಗಿ ಆಡುತ್ತಿದ್ದಾರೆ. ನಾವು ಪಂದ್ಯವನ್ನಾಡಲು ಎದುರುನೋಡುತ್ತಿದ್ದೇವೆ. ಈ ಸವಾಲು ಎದುರಿಸಲು ಪಾಕ್​ ಸಿದ್ಧವಾಗಿದೆ" ಎಂದಿದ್ದಾರೆ.

"ನಮ್ಮಲ್ಲಿ ಐವರು ಅದ್ಭುತ ಸ್ಪಿನ್ನರ್​ಗಳಿದ್ದಾರೆ. ಈ ಪೈಕಿ ನವಾಜ್ ವಿಶ್ವದ ಅತ್ಯುತ್ತಮ ಸ್ಪಿನ್​ ಬೌಲರ್. ತಮ್ಮ ಮರು ಎಂಟ್ರಿಯಿಂದಲು ಇಲ್ಲಿಯವರೆಗೆ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಅಬ್ರಾರ್ ಅಹ್ಮದ್ ಮತ್ತು ಸುಫ್ಯಾನ್ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಮತ್ತು ಸೈಮ್ ಅಯೂಬ್ ಈಗ ವಿಶ್ವದ ಅಗ್ರ ಹತ್ತು ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಸಲ್ಮಾನ್ ಅಲಿ ಅಘಾ ಕೂಡ ತಂಡದಲ್ಲಿ ಇದ್ದಾರೆ" ಎಂದು ಹೆಸ್ಸನ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net