ಲಖನೌ: ಬಟ್ಟೆ ಅಥವಾ ಯಾವುದೇ ವಸ್ತುಗಳನ್ನು ಖರೀದಿಸಲು ಮಾಲ್ ಅಥವಾ ಮಾರುಕಟ್ಟೆಗಳಿಗೆ ಹೋದಾಗ ನಮ್ಮ ವಸ್ತುಗಳ ಬಗ್ಗೆ ನಾವು ತುಂಬಾ ಜವಬ್ದಾರರಾಗಿರಬೇಕು. ಒಂದು ಕ್ಷಣ ಮೈಮರೆತರೆ ಏನಾಗಲಿದೆ ಎಂಬುದಕ್ಕೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆ ಆಗಿದೆ.
ವೀಕೆಂಡ್ ಹಿನ್ನೆಲೆಯಲ್ಲಿ ಭಾನುವಾರ ನೋಯ್ಡಾದಲ್ಲಿರುವ ಮಾಲ್ ಒಂದಕ್ಕೆ ಶಾಪಿಂಗ್ ಹೋದ ಮಹಿಳೆ ಬಟ್ಟೆಯನ್ನು ಖರೀದಿಸಿ ಟ್ರಯಲ್ ರೂಮ್ಗೆ ಹೋಗಿ ಬರುವಷ್ಟರಲ್ಲಿ ಆಕೆಯ ಪರ್ಸ್ನಿಂದ ಬರೋಬ್ಬರಿಗೆ 1 ಲಕ್ಷ ರೂ. ಹಣವನ್ನು ಕಳ್ಳತನ ಮಾಡಲಾಗಿದೆ. ಟ್ರಯಲ್ ರೂಮ್ನ ಹೊರಭಾಗದಲ್ಲಿ ಇಡಲಾಗಿದ್ದ ಪರ್ಸ್ನಲ್ಲಿ ಹಣ ಎಗರಿಸಲಾಗಿದೆ.
ಇದನ್ನೂ ಓದಿರಿ: ಬಿಗ್ಬಾಸ್ನಿಂದ ಹೊರಬಂದ ಗೀತಾ ಭಾರತಿ ಭಟ್!
ಈ ಘಟನೆ ನೋಯ್ಡಾದ 18ನೇ ಸೆಕ್ಟರ್ನಲ್ಲಿರುವ ಡಿಎಲ್ಎಫ್ ಆಫ್ ಇಂಡಿಯಾ ಮಾಲ್ನಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆಯು ಟ್ರಯಲ್ ರೂಮ್ನ ಹೊರಭಾಗದಲ್ಲಿ ಬ್ಯಾಗ್ ಅನ್ನು ನೇತು ಹಾಕಿ ಬಟ್ಟೆಯನ್ನು ಟ್ರಯಲ್ ನೋಡಲು ರೂಮಿನ ಒಳಗೆ ಹೋಗಿದ್ದಾಳೆ. ಆಕೆ ರೂಮಿಂದ ಹೊರ ಬಂದು ನೋಡಿದಾಗ ಪರ್ಸ್ ನೋಡಿದಾಗ ಒಂದು ಲಕ್ಷ ರೂ. ನಾಪತ್ತೆಯಾಗಿರುವುದನ್ನು ಕಂಡು ಕಂಗಾಲಾದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸದ್ಯ ನೋಯ್ಡಾ ಪೊಲೀಸರು 20ನೇ ಸೆಕ್ಟರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಮಾಲ್ನ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಮತ್ತು ಮಾಲ್ನಲ್ಲಿರುವ ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
2021ರ ಪ್ರಬಲ ಮಿಲಿಟರಿ ದೇಶ ಯಾವುದು? ಒಂದು ವೇಳೆ ಯುದ್ಧ ನಡೆದ್ರೆ ಈ ರಾಷ್ಟ್ರಕ್ಕೆ ಗೆಲುವು ಖಚಿತವಂತೆ!
ತಿಂಡಿ ತಿನ್ನುವಾಗ ಹೃದಯಾಘಾತಕ್ಕೆ ಒಳಗಾಗಿ ಕೆಎಸ್ಆರ್ಟಿಸಿ ಕಂಡಕ್ಟರ್ ಸಾವು
ಪಾರ್ಟಿ-ಸಮಾರಂಭ ಅಂತ ಕರೊನಾ ರಿಯಾಯಿತಿ ನೀಡಲ್ಲ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಎಚ್ಚರಿಕೆ