ಕಾಂತಾರ ಚಿತ್ರಕ್ಕೆ ‘ಹೆಲ್​ಬಾಯ್​‘, ‘ಟ್ರಾಯ್​‘ ಖ್ಯಾತಿಯ ಹಾಲಿವುಡ್​ ಆ್ಯಕ್ಷನ್​ ಡೈರೆಕ್ಟರ್​ ಟೊಡೊರ್​ ಲಜರೊವ್​

zxcczxc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಟ, ನಿರ್ದೇಶಕ ರಿಷಬ್​ ಶೆಟ್ಟಿ ಸದ್ಯ "ಕಾಂತಾರ'ದ ಪ್ರೀಕ್ವೆಲ್​ "ಭಾಗ 1' ಚಿತ್ರದ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. ಕುಂದಾಪುರದಲ್ಲಿ ಬೃಹತ್​ ಸೆಟ್​ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಸಲಾಗುತ್ತಿದೆ. ಚಿತ್ರದಲ್ಲಿ ದೇಶ-ವಿದೇಶಗಳ ಹಲವಾರು ಮಂದಿ ಕಲಾವಿದರು, ತಂತ್ರತಜ್ಞರು ಕೆಲಸ ಮಾಡುತ್ತಿರುವುದು ವಿಶೇಷ. ಇದೀಗ "ಆರ್​ಆರ್​ಆರ್​', "ಮಣಿಕಾರ್ಣಿಕಾ' ಚಿತ್ರಗಳ ಖ್ಯಾತಿಯ ಸಾಹಸ ನಿರ್ದೇಶಕ ಟೊಡೊರ್​ ಲಜರೊವ್​ "ಕಾಂತಾರ' ಟೀಮ್​ ಸೇರಿಕೊಂಡಿದ್ದಾರೆ.

ಬಲ್ಗೇರಿಯಾ ಮೂಲದ ಟೊಡೊರ್​ "ಹೆಲ್​ಬಾಯ್​', "ಮಾರ್ಕೊಪೋಲೋ', "ಟ್ರಾಯ್​' ಸೇರಿ 70ಕ್ಕೂ ಹೆಚ್ಚು ಹಾಲಿವುಡ್​ ಮತ್ತು ಅಂತಾರಾಷ್ಟ್ರೀಯ ಸಿನಿಮಾಗಳಿಗೆ ಸಾಹಸ ನಿರ್ದೇಶಿಸಿದ್ದಾರೆ. ಇದೀಗ "ಕಾಂತಾರ ಭಾಗ 1' ಚಿತ್ರದಲ್ಲಿ ಎರಡು ಪ್ರಮುಖ ಆ್ಯಕ್ಷನ್​ ಸನ್ನಿವೇಶಗಳ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರಕ್ಕಾಗಿ ದೇಹ ಹುರಿಗೊಳಿಸಿಕೊಂಡಿರುವ ನಾಯಕ ರಿಷಬ್​ ಶೆಟ್ಟಿ ಕಳರಿಪಾಯುಟ್ಟು ಸಮರ ಕಲೆ ತರಬೇತಿ ಪಡೆದಿದ್ದಾರೆ.

ಎಲ್ಲವೂ ಅಂದುಕೊಂಡಂತಾದರೆ, ಚಿತ್ರ 2025ರ ಜೂನ್​ ಒಳಗೆ ಪ್ಯಾನ್​ ಇಂಡಿಯಾ ತೆರೆಗೆ ಬರಲಿದೆ. "ಕಾಂತಾರ' ಜತೆಗೆ ರಿಷಬ್​ ತೆಲುಗಿನ ಪ್ರಶಾಂತ್​ ವರ್ಮಾ ನಿರ್ದೇಶಿಸುತ್ತಿರುವ "ಹನುಮಾನ್​' ಚಿತ್ರದ ಸೀಕ್ವೆಲ್​ "ಜೈ ಹನುಮಾನ್​'ನಲ್ಲಿ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇತ್ತೀಚೆಗಷ್ಟೆ ಸ್ಟ್​ ಲುಕ್​ ಬಿಡುಗಡೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net