More

    ಆರ್​ಆರ್​ಆರ್ ಟೀಸರ್ ಬಂತು; ಚಿತ್ರಕ್ಕಾಗಿ ಪಿವಿಆರ್ ಹೆಸರು ಬದಲು

    ಒಂದು ತಿಂಗಳ ಹಿಂದೆ ‘ಆರ್​ಆರ್​ಆರ್’ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾದಾಗ, ಈ ಚಿತ್ರ ಹೇಗಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಸಹಜವಾಗಿಯೇ ಇತ್ತು. ಆ ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ‘ಆರ್​ಆರ್​ಆರ್ – ಗ್ಲಿಂಪ್ಸ್’ ಎನ್ನುವ ಹೆಸರಿನಲ್ಲಿ ಚಿತ್ರತಂಡದವರು ಸೋಮವಾರ ಮೊದಲ ಟೀಸರ್ ಬಿಡುಗಡೆ ಮಾಡಿದ್ದು, ನೋಡಿದವರೆಲ್ಲ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಟೀಸರ್ ಇಷ್ಟು ಗ್ರಾಂಡ್ ಆಗಿರುವಾಗ, ಟ್ರೇಲರ್ ಹೇಗಿರಬಹುದು, ಒಟ್ಟಾರೆ ಚಿತ್ರವೇ ಎಷ್ಟು ಗ್ರಾಂಡ್ ಆಗಿ ಮೂಡಿಬಂದಿರಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ.

    ಅವೆಲ್ಲಕ್ಕೂ ಉತ್ತರ ಸಿಗಬೇಕೆಂದರೆ, 2022ರ ಜನವರಿ 7ರವರೆಗೂ ಕಾಯಬೇಕು. ಏಕೆಂದರೆ, ಚಿತ್ರ ಬಿಡುಗಡೆ ಆಗುವುದು ಅದೇ ದಿನದಂದು. ಈ ಮಧ್ಯೆ, ಚಿತ್ರತಂಡದವರು ಚಿತ್ರವನ್ನು ಜನರಿಗೆ ದೊಡ್ಡ ಮಟ್ಟದಲ್ಲಿ ತಲುಪಿಸುವ ನಿಟ್ಟಿನಲ್ಲಿ ಪಿವಿಆರ್ ಜತೆಗೆ ಕೈಜೋಡಿಸಿದ್ದಾರೆ. ಮುಂಬೈನಲ್ಲಿ ಇತ್ತೀಚೆಗೆ ಹೊಸ ಪಿವಿಆರ್ ಚಿತ್ರಮಂದಿರ ಪ್ರಾರಂಭವಾಗಿದ್ದು, ಈ ಸಂದರ್ಭದಲ್ಲಿ ಮಹತ್ವದ ಘೋಷಣೆಯಾಗಿದೆ. ಅದರ ಪ್ರಕಾರ, ಮುಂದಿನ ಕೆಲವು ತಿಂಗಳುಗಳ ಕಾಲ, ಪಿವಿಆರ್ ಚಿತ್ರಮಂದಿರಗಳನ್ನು ಪಿವಿಆರ್​ಆರ್​ಆರ್ ಎಂದು ಕರೆಯಲಾಗುತ್ತದೆ.

    ದೇಶದ 70 ಪ್ಲಸ್ ನಗರಗಳಲ್ಲಿ 850ಕ್ಕೂ ಹೆಚ್ಚು ಪಿವಿಆರ್ ಚಿತ್ರಮಂದಿರಗಳಿದ್ದು, ಅದೆಲ್ಲದರ ಹೆಸರುಗಳು ಬದಲಾಗಿವೆ. ಚಿತ್ರವೊಂದರ ಸಲುವಾಗಿ ದೊಡ್ಡ ಬ್ರಾಂಡ್​ವೊಂದು ಹೆಸರು ಬದಲಾಯಿಸಿಕೊಂಡಿದ್ದು, ಇಡೀ ಜಗತ್ತಿನಲ್ಲಿ ಇದೇ ಮೊದಲು ಎಂದು ಹೇಳಲಾಗುತ್ತಿದೆ. ಈ ತರಹದ ಸಹಯೋಗ ಮುಂದಿನ ಕೆಲವು ತಿಂಗಳುಗಳ ಕಾಲ ಮುಂದುವರೆಯಲಿದೆ. ‘ಆರ್​ಆರ್​ಆರ್’ ಚಿತ್ರವನ್ನು ಎಸ್.ಎಸ್. ರಾಜಮೌಳಿ ನಿರ್ದೇಶಿಸಿದ್ದು, ಜ್ಯೂ ಎನ್​ಟಿಆರ್, ರಾಮ್ರಣ್ ತೇಜ, ಆಲಿಯಾ ಭಟ್, ಅಜಯ್ ದೇವಗನ್ ಮುಂತಾದವರು ಅಭಿನಯಿಸಿದ್ದಾರೆ. –ಏಜೆನ್ಸೀಸ್

    ಡಾಕ್ಟರ್​ ಆಗ್ತೀನಿ, ಫಾರಿನ್ನಲ್ಲೇ ಸೆಟ್ಲ್​ ಆಗ್ತೀನಿ, ಮದ್ವೆನೇ ಆಗಲ್ಲ ಎಂದಿದ್ದ ಅಪ್ಪು; ಬಾಲ್ಯದ ಆ ಸಂದರ್ಶನ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts