More

    ರಾಜಮೌಳಿ ನಿರ್ದೇಶನದ ಆರ್​ಆರ್​ಆರ್ ಜತೆಗೆ ವಾರ್ನರ್ ಬ್ರದರ್ಸ್

    ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’ ಚಿತ್ರದ ಬಿಡುಗಡೆಗೆ ಇನ್ನೆರಡು ತಿಂಗಳುಗಳಷ್ಟೇ ಉಳಿದಿವೆ. ಈಗಾಗಲೇ ಚಿತ್ರದ ಬೇರೆ ಅವತರಣಿಕೆಗಳ ಹಕ್ಕುಗಳ ವಿತರಣೆ, ಡಿಜಿಟಲ್ ಮತ್ತು ಸ್ಯಾಟಿಲೈಟ್ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ. ಆದರೆ, ‘ಆರ್​ಆರ್​ಆರ್’ ಚಿತ್ರವು ಭಾರತದ ಐದು ಭಾಷೆಗಳಷ್ಟೇ ಅಲ್ಲ, ಇಂಗ್ಲೀಷ್​ನಲ್ಲೂ ಡಬ್ ಆಗುತ್ತಿದೆ. ಕೆಲವು ಬೇರೆ ಅಂತಾರಾಷ್ಟ್ರೀಯ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿವೆ. ಈ ಪೈಕಿ ಇಂಗ್ಲೀಷ್ ಅವತರಣಿಕೆಯ ವಿತರಣೆಯ ಹಕ್ಕುಗಳನ್ನು ಯಾರ ತೆಕ್ಕೆಗೆ ಹೋಗಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು.

    ಮೂಲಗಳ ಪ್ರಕಾರ, ಹಾಲಿವುಡ್​ನ ಜನಪ್ರಿಯ ಸ್ಟುಡಿಯೋ ವಾರ್ನರ್ ಬ್ರದರ್ಸ್ ಸಂಸ್ಥೆಯು ಚಿತ್ರದ ಇಂಗ್ಲೀಷ್ ಹಕ್ಕುಗಳನ್ನು ಖರೀದಿಸುವುದಕ್ಕೆ ಮುಂದಾಗಿದೆಯಂತೆ. ಸದ್ಯದಲ್ಲೇ ಚಿತ್ರತಂಡ ಮತ್ತು ಸಂಸ್ಥೆಯ ಜತೆಗೆ ಒಪ್ಪಂದ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು, ಚಿತ್ರದ ಪ್ರೀರಿಲೀಸ್ ಇವೆಂಟ್, ದುಬೈನಲ್ಲಿ ನಡೆಯಲಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬರೀ ಬಾಲಿವುಡ್ ಸೆಲೆಬ್ರಿಟಿಗಳಿಗಷ್ಟೇ ಅಲ್ಲ, ಹಾಲಿವುಡ್ ಸೆಲೆಬ್ರಿಟಿಗಳನ್ನು ಸಹ ಆಹ್ವಾನಿಸಲಾಗುತ್ತದಂತೆ. ಈಗಾಗಲೇ ನಿರ್ವಪಕ ದಾನಯ್ಯ, ದುಬೈನಲ್ಲಿ ಬೀಡುಬಿಟ್ಟಿದ್ದು ಸದ್ಯದಲ್ಲೇ ಇನ್ನಷ್ಟು ಹೊಸ ಮಾಹಿತಿಗಳು ಹೊರಬೀಳಲಿವೆ. (-ಏಜೆನ್ಸೀಸ್)

    ಶಾರುಖ್ ಪುತ್ರ ಆರ್ಯನ್​ ಖಾನ್​ಗೆ ಜಾಮೀನು ಸಿಗಲು ಕಾರಣವೇನು ಗೊತ್ತೇ?; ಇಲ್ಲಿದೆ ಮಾಹಿತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts