ಚುನಾವಣೆಗೂ ಮುನ್ನವೇ ಮುನಿರತ್ನಗೆ ಜ್ಯೋತಿಷಿ ಹೇಳಿದ್ದೇನು?

DKS And Munirathna
Published on

ಬೆಂಗಳೂರು: ಆರ್​ಆರ್ ನಗರ ಕ್ಷೇತ್ರದ ಉಪಚುನಾವಣೆಗೆ ಪ್ರಮುಖ ಮೂರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತವಾಗಿ ಅಖಾಡಕ್ಕಿಳಿದಿದ್ದು, ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.

ಬುಧವಾರ ಬೆಳಗ್ಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮುನಿರತ್ನ, ಚುನಾವಣೆ ಫಲಿತಾಂಶದ ಬಗ್ಗೆ ಜ್ಯೋತಿಷಿ ಹೇಳಿರುವ ಗುಟ್ಟನ್ನೂ ಸುದ್ದಿಗಾರರ ಬಳಿ ಬಿಚ್ಚಿಟ್ಟರು. ನಾನು ಮತ್ತು ಕುಮಾರಸ್ವಾಮಿ ನಡುವೆ 20 ವರ್ಷದ ಸ್ನೇಹವಿದೆ. ಒಬ್ಬರೂ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇವೆ. ಅಷ್ಟೇ ಅಲ್ಲ, ಡಿಕೆಶಿ ಮತ್ತು ನಾನು ಬಾಲ್ಯ ‌ಸ್ನೇಹಿತರು, 22 ವರ್ಷ ವಯಸ್ಸಿನವರಿದ್ದಾಗಲೇ ಸ್ನೇಹಿತರು ಎಂದ ಮುನಿರತ್ನ, ಚುನಾವಣೆ ವಿಚಾರದಲ್ಲಿ ಅವರ ಕೆಲಸ ಅವರಿಗೆ, ನಮ್ಮ ಪಾರ್ಟಿ ನಮಗೆ ಎಂದರು.

ಮುನಿರತ್ನನನ್ನು ಸೋಲಿಸಲೆಂದೇ ಕಾಂಗ್ರೆಸ್​ ಮಹಿಳಾ ಅಭ್ಯರ್ಥಿಯನ್ನು ಹಾಕಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಮುನಿರತ್ನ, ನನಗೂ ಜ್ಯೋತಿಷಿಗಳು ಭವಿಷ್ಯ ಹೇಳಿದ್ದಾರೆ. ನಾನು ಒಂದು ಲಕ್ಷ ಮತಗಳಿಂದ ಗೆಲ್ಲುತ್ತೇನಂತೆ ಎನ್ನುವ ಮೂಲಕ ಡಿಕೆಶಿ ತಂತ್ರಕ್ಕೆ ಟಾಂಗ್​ ಕೊಟ್ಟರು. ಆದರೆ, ಆ ಜ್ಯೋತಿಷಿ ಹೆಸರನ್ನು ಮಾತ್ರ ಹೇಳಲಿಲ್ಲ.

ಇಂದು(ಬುಧವಾರ) ಒಳ್ಳೆಯ ದಿನ. ಹಾಗಾಗಿ ಇಂದೇ ನಾಮಪತ್ರ ಸಲ್ಲಿಸಿದೆ. ಇದು ಅಭಿವೃದ್ಧಿ ಚುನಾವಣೆ. ಹಳೆಯ ಚುನಾವಣೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಸಂಘಟನೆ ಕಂಡಿರಲಿಲ್ಲ. ಈಗ ಇಲ್ಲಿಯ ಸಂಘಟನೆ ಅದ್ಭುತ, ಮನೆ ತರ ಕಾಣ್ತಾ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net