

ಬೆಂಗಳೂರು: ರಾಜರಾಜೇಶ್ವರಿ ನಗರ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಸಂಸದ ಡಿ.ಕೆ.ಸುರೇಶ್ ತಮ್ಮ ಹಳೆಯ ಸ್ನೇಹಿತ, ಹಾಲಿ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ವಾರ್ನಿಂಗ್ ನೀಡಿದ್ದಾರೆ.
ಚುನಾವಣೆ ಪ್ರಚಾರದ ವೇಳೆ ಮುನಿರತ್ನ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತರಿಗೆ ಅಡ್ಡಿಪಡಿಸುತ್ತಿದ್ದಾರೆಂಬ ಮಾತುಗಳು ಕೇಳಿಬಂದ ಬೆನ್ನಲ್ಲೇ ಡಿ.ಕೆ.ಸುರೇಶ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
"ಕ್ಯಾನ್ವಾಸ್ ಮಾಡೋ ನಮ್ ಹುಡುಗ್ರಿಗೆ ತೊಂದರೆ ಕೊಟ್ರೆ, ಧಮ್ಕಿಗಿಮ್ಕಿ ಹಾಕಿತೂ ಅಂದ್ರೆ ಮುನಿರತ್ನನಿಗೆ ಹೇಳಿ... ಕಾಯ್ತಾ ಅವ್ರಪ್ಪ ಅಣ್ಣ ಅಂತ, ಕಾಯ್ತಾ ಇದ್ದೀನಿ...' ಎಂದು ಸವಾಲು ಹಾಕಿದ್ದಾರೆ.