More

    Jobs: ಆರ್‌ಪಿಎಫ್​​​​ನಲ್ಲಿ 2,250 ಕಾನ್‌ಸ್ಟೆಬಲ್, ಎಸ್‌ಐ ನೇಮಕಾತಿ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ..

    ಭಾರತೀಯ ರೈಲ್ವೆಯ ಆಡಳಿತದಡಿ ಕಾರ್ಯನಿರ್ವಹಿಸುವ ರೈಲ್ವೆ ಪ್ರೊಟೆಕ್ಷನ್ ಫೋರ್ಸ್​​​ (ಆರ್‌ಪಿಎ್) 1957ರಲ್ಲಿ ಸ್ಥಾಪನೆಯಾಗಿದ್ದು, ರೈಲ್ವೆ ಸಚಿವಾಲಯದ ನಿಯಂತ್ರಣದಲ್ಲಿದೆ. ರೈಲ್ವೆಗೆ ಸಂಬಂಧಿಸಿದ ಉಪಕರಣಗಳಿಗೆ ಧಕ್ಕೆಯಾಗದಂತೆ ತಡೆಯುವ ಜತೆಗೆ ಆಸ್ತಿಯನ್ನು ಒತ್ತುವರಿ ಮಾಡದಂತೆ ಸಂರಕ್ಷಣೆ ಮಾಡುವ ಜವಾಬ್ದಾರಿ ನಿರ್ವಹಿಸುತ್ತದೆ. 1989ರ ರೈಲ್ವೆ ಕಾಯ್ದೆಯಡಿ ಅಪರಾಧಿಗಳನ್ನು ಹುಡುಕುವ, ಬಂಧಿಸುವ ಹಾಗೂ ವಿಚಾರಣೆ ಮಾಡುವ ಅಧಿಕಾರ ಹೊಂದಿದೆ. ಪ್ರಸ್ತುತ ಖಾಲಿ ಇರುವ ಹುದ್ದೆಗಳ ನೇಮಕಾತಿ ಕುರಿತು ಪ್ರಕಟಣೆ ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸಬಹುದು.

    ಒಟ್ಟು ಹುದ್ದೆಗಳು- 2,250

    ಹುದ್ದೆಯ ವಿವರ
    ಕಾನ್ಸ್‌ಟೇಬಲ್ 2000
    ಸಬ್ ಇನ್‌ಸ್ಟೆಕ್ಟರ್ 250

    ವಿದ್ಯಾರ್ಹತೆ
    ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಶೈಕ್ಷಣಿಕ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿರಬೇಕು. ಸಬ್ ಇನ್‌ಸ್ಟೆಕ್ಟರ್ ಹುದ್ದೆ ಆಕಾಂಕ್ಷಿಗಳು ಪದವಿ ಪಡೆದಿರಬೇಕು.

    ವೇತನ
    ಆರ್‌ಪಿಎಫ್ ನಿಯಮಾನುಸಾರ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನ ಪಾವತಿಸಲಾಗುತ್ತದೆ.

    ವಯೋಮಿತಿ
    ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ 18 ರಿಂದ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸುವವರು 20 ರಿಂದ 25 ವರ್ಷದೊಳಗಿರಬೇಕು. ಎಸ್‌ಸಿ-ಎಸ್‌ಟಿ ಅಭ್ಯರ್ಥಿಗಳಿಗೆ 5ವರ್ಷ, ಒಬಿಸಿಗಳಿಗೆ 3ವರ್ಷ, ಸೈನಿಕ, ಮಹಿಳಾ, ವಿಧವೆ, ಅಂಗವಿಕಲ ಸೇರಿ ಇತರ ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಅನ್ವಯವಾಗಲಿದೆ.

    ಅರ್ಜಿ ಸಲ್ಲಿಸುವ ವಿಧಾನ, ಶುಲ್ಕ
    ಆರ್​​ಪಿಎಫ್​​​​ನ ಅಧಿಕೃತ ವೆಬ್‌ಸೈಟ್‌ https://rpf.indianrailways.gov.in/RPF/ ಭೇಟಿ ನೀಡಿ, ಅಧಿಸೂಚನೆಯನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ಅಗತ್ಯ ದೃಢೀಕೃತ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋ ಲಗತ್ತಿಸುವುದು ಕಡ್ಡಾಯವಾಗಿದ್ದು, ಸಂವಹನ ಉದ್ದೆಶಕ್ಕಾಗಿ ಚಾಲ್ತಿಯಲ್ಲಿರುವ ದೂರವಾಣಿ ಸಂಖ್ಯೆ, ಇ-ಮೇಲ್ ಐಡಿ ನಮೂದಿಸಬೇಕು. ಅಡ್ಮಿಟ್ ಕಾರ್ಡ್ ಸೇರಿ ಇತರ ಅಪ್‌ಡೆಟ್ ಮಾಹಿತಿಗಾಗಿ ಆಗಾಗ ವೆಬ್‌ಸೈಟ್ ಪರಿಶೀಲಿಸುತ್ತಿರಿ. ಆರ್‌ಪಿಎ್ ನಿಯಮಾನುಸಾರ ಅರ್ಜಿಶುಲ್ಕ ನಿಗದಿ ಮಾಡಲಾಗಿದೆ.

    ಆಯ್ಕೆ ಪ್ರಕ್ರಿಯೆ
    ಆರ್‌ಆರ್‌ಬಿ ನಡೆಸುವ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಆರ್‌ಪಿಎ್ ನಡೆಸುವ ದೈಹಿಕ ದಕ್ಷತೆ ಪರೀಕ್ಷೆ ಲಿತಾಂಶದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ದಾಖಲೆ ಪರಿಶೀಲನೆ ಮೂಲಕ ಅಂತಿಮ ಆಯ್ಕೆ ಮಾಡಲಾಗುತ್ತದೆ.

    ಅರ್ಜಿ ಸಲ್ಲಿಸಲು ಕೊನೇ ದಿನ : 31-01-2024
    ಹೆಚ್ಚಿನ ಮಾಹಿತಿಗಾಗಿ: indianrailways.gov.in 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts