ಮಂಗಳೂರು ರೌಡಿಶೀಟರ್ ಕಕ್ಕೆ ರಾಹುಲ್ ಬರ್ಬರ ಹತ್ಯೆ

pic murder
Published on

ಮಂಗಳೂರು: ರೌಡಿಶೀಟರ್ ಓರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಗಳೂರು ನಗರದ ಎಮ್ಮೆಕೆರೆ ಎಂಬಲ್ಲಿ ನಡೆದಿದೆ.

ರಾಹುಲ್ ಅಲಿಯಾಸ್ ಕಕ್ಕೆ ರಾಹುಲ್ (26) ಕೊಲೆಯಾದ ರೌಡಿಶೀಟರ್. ನಗರದ ಹೊಯಿಗೆ ಬಝಾರ್ ನಿವಾಸಿಯಾಗಿದ್ದ ರಾಹುಲ್​​​ನನ್ನು, ಮಾರಕಾಸ್ತ್ರದಿಂದ ಹತ್ಯೆ ನಡೆಸಿ‌ ಅಪರಿಚಿತರ ಗುಂಪು ಪರಾರಿಯಾಗಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆ, ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ವೆನ್ಲಾಕ್ ಆಸ್ಪತ್ರೆಯ ಶವಗಾರಕ್ಕೆ ಮೃತದೇಹ ರವಾನೆಯಾಗಿದ್ದು, ಆಸ್ಪತ್ರೆಗೆ ‌ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ‌ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪಾಂಡೇಶ್ವರ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net